ಶನಿವಾರ ನಿಮ್ಮ ಜೇಬಿನಲ್ಲಿ ಈ ಒಂದು ವಸ್ತು ಇದ್ದರೆ ಏನೆಲ್ಲ ಫಲಗಳು ಸಿಗುತ್ತವೆ ಗೊತ್ತಾ..

ಶನಿದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿ ದೇವಸ್ಥಾನಗಳ ಮುಂದೆ ಭಕ್ತರ ದೊಡ್ಡ ಸಾಲಿರುತ್ತದೆ. ಶನಿ ದೋಷವುಳ್ಳವರು ಶನಿ ಪೂಜೆ ಮಾಡ್ತಾರೆ. ಶನಿ ದೇಗುಲಕ್ಕೆ ಹೋಗಲು ಸಾಧ್ಯವೇ ಇಲ್ಲ, ಆಫೀಸ್ ಮತ್ತು ದಿನನಿತ್ಯದ ಕೆಲಸಗಳಲ್ಲಿ ತುಂಬಾ ಬ್ಯುಸಿ ಸ್ವಲ್ಪವು, ಪೂಜೆ ಮಾಡಲು ಸಾಧ್ಯವಾಗದವರಿಗೆ ಸುಲಭ ಉಪಾಯ ಇಲ್ಲಿದೆ. ಶನಿ ದೇವರಿಗೆ ಪ್ರಿಯವಾದ ಒಂದು ವಸ್ತುವನ್ನು ನಿಮ್ಮ ಪರ್ಸ್ ಅಥವಾ ಬ್ಯಾಗ್ ನಲ್ಲಿ ಇಟ್ಟುಕೊಂಡರೆ ಸಾಕು.

ಸಂಜೆಯೊಳಗೆ ಫಲಿತಾಂಶ ತಿಳಿಯುತ್ತೆ. ಶನಿ ದೇವರು ನೀಲಿ ಬಣ್ಣದ ಹೂವು ಪ್ರಿಯ. ಹಾಗಾಗಿ ಭಕ್ತರು ನೀಲಿ ಬಣ್ಣದ ಹೂವನ್ನು ಶನಿದೇವರಿಗೆ ಅರ್ಪಣೆ ಮಾಡ್ತಾರೆ. ಹಾಗೆ ಮಾಡಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಜೇಬಿನಲ್ಲಿ ನೀಲಿ ಬಣ್ಣದ ಹೂವನ್ನು ಇಟ್ಟುಕೊಳ್ಳಿ. ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರ ಎಳ್ಳನ್ನು ದಾನ ಮಾಡ್ತಾರೆ. ದಾನ ಮಾಡಲು ಶಕ್ತಿಯಿಲ್ಲದವರು ಎಳ್ಳನ್ನು ಜೇಬು ಅಥವಾ ಪರ್ಸ್ ನಲ್ಲಿಟ್ಟುಕೊಳ್ಳಿ ಕಪ್ಪು ಉದ್ದಿನ ಬೇಳೆಯನ್ನು ಜೇಬಿನಲ್ಲಿಟ್ಟು ಕೊಳ್ಳುವುದರಿಂದ ದೈಹಿಕ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.

ಜೀವನದಲ್ಲಿ ಮತ್ತೊಬ್ಬರಿಗೆ ಕೆಡಕು ಮಾಡುವುದು, ಬೇರೆಯವರ ನಂಬಿಕೆಗಳಿಗೆ ಮೋಸ ಮಾಡಿ ಬದುಕುವುದು ಹೀಗೆ ಮಾಡುವವರನ್ನು ಶನಿ ದೇವರು ಎಂದು ಸುಮ್ಮನೆ ಬಿಡಲಾರ, ನೀವು ಪೂಜೆ, ಹೋಮ ಹವನ ಏನೇ ಮಾಡಿದ್ರು ಶನಿ ಪ್ರಭಾವ ನಿಮ್ಮನು ಕಷ್ಟಕ್ಕೆ ತಳುತ್ತೆ.

ಶನಿ ಪ್ರಭಾವ ಕಡಿಮೆ ಮಾಡಿಕೊಳ್ಳಲು ಹಾಗೂ ಶನಿ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂದು ಶಾಸ್ತ್ರ ಹೇಳಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಿ. ಶನಿವಾರ ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ಕಣ್ಣಿಗೆ ಸ್ವಲ್ಪ  ಕಾಡಿಗೆಯನ್ನು ಹಚ್ಚಿಕೊಳ್ಳಿ. ಅದು ಅಸಾಧ್ಯ ಎಂದಾದರೆ ಕಾಡಿಗೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ