ದೇವರು

ದೋಷ ಪರಿಹರಿಸಲು ಈ ದೇವಸ್ಥಾನಕ್ಕೆ ಭೇಟಿ ಕೊಡಿ ಸಾಕು

ಹಾವುಗಳನ್ನು ಕಂಡರೆ ಎಲ್ಲರೂ ಭಯ ಪಡುತ್ತೇವೆ. ಏಕೆಂದರೆ ಅದು ಕಚ್ಚಿದರೆ ಬದುಕುವುದು ಕಷ್ಟ ಎಂದು. ಆದರೆ ನಾಗ ಪಂಚಮಿ ಬಂದರೆ ಆ ನಾಗನಿಗೆ ಹಾಲಿನ ಅಭಿಷೇಕ ಮಾಡುತ್ತೇವೆ. ನಾಗದೇವರುಗಳನ್ನು ಕಂಡರೆ ಭಯ ಎಷ್ಟು ಇರುತ್ತದೋ ಅಷ್ಟೇ ಭಕ್ತಿ ಸಹ ಇರುತ್ತದೆ. ಯಾರಾದರೂ ಹಾವುಗಳನ್ನು ಕಂಡರೆ ಕಚ್ಚುತ್ತೆ ಎಂಬ ಭಯದಿಂದ ಅವುಗಳನ್ನು ಕೊಲ್ಲಲ್ಲು ಪ್ರಯತ್ನ ಪಡುತ್ತಾರೆ. ಆದರೆ ಕೆಲವರು ಹಾವುಗಳನ್ನು ಒಡೆಯ ಬಾರದು ಎಂದು ಹಿಂಜರಿಯುತ್ತಾರೆ.ಏಕೆಂದರೆ ಹಾವುಗಳನ್ನು ಅದರಲ್ಲೂ ನಾಗರ ಹಾವುಗಳನ್ನು ಒಡೆದರೆ ಮನೆಯ ಮಂದಿಗೆಲ್ಲ ನಾಗ ದೋಷ ಸುತ್ತಿಕೊಳ್ಳುತ್ತದೆ ಎಂದು. ಹಾವುಗಳನ್ನು ಒಡೆದರೆ ನಾಗ …

Read More »

ಶ್ರೀ ರಾಘವೇಂದ್ರ ಸ್ವಾಮಿಯವರು ನಂಬಿದವರ ಕೈಬಿಡಲಾರರು.

ಕಲಿಯುಗದ ಕಾಮಧೇನು ಎನಿಸಿಕೊಂಡ ಶ್ರೀ ರಾಘವೇಂದ್ರಸ್ವಾಮಿ ಮೂಲ ಬೃಂದಾವನವಿರುವ ಮಂತ್ರಾಲಯ ಕೇವಲ ಧಾರ್ವಿುಕ ಕ್ಷೇತ್ರವಲ್ಲ. ಭಕ್ತಿಯಿಂದ ಸ್ಮರಣೆ ಮಾಡಿದ ಭಕ್ತರ ಕ್ಲೇಷ ಕಳೆವ ರಾಯರು ನೆಲೆಸಿರುವ ಈ ಪುಣ್ಯಭೂಮಿ ತನ್ನ ಧಾರ್ವಿುಕ, ಸಾಂಸ್ಕೃತಿಕ ಶೈಕ್ಷಣಿಕ ಶ್ರೀಮಂತಿಕೆಯ ಜತೆಗೆ ಜನರ ನೋವಿಗೂ ಮದ್ದೆರೆಯುವ ಮೂಲಕ ಭಕ್ತರ ಹೃದಯದಂಗಳದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಶ್ರೀ ಗುರುರಾಯರ ಪರಿಮಳ ಗ್ರಂಥದಂತೆ ಮಂತ್ರಾಲಯ ಸುಕ್ಷೇತ್ರದ ಪರಿಮಳ ಪ್ರಸಾದವೂ ಭಕ್ತರಲ್ಲಿ ಸಾತ್ವಿಕತೆಯ ಜಾಗೃತಿ ಮೂಡಿಸುತ್ತದೆ. ತಿರುಪತಿ ವೆಂಕಟೇಶ್ವರ ಸನ್ನಿದ್ಧಿಯ ಲಾಡು ಪಡೆದಿರುವ ಪ್ರಸಿದ್ಧಿಯಂತೆಯೇ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪರಿಮಳ ಪ್ರಸಾದವೂ …

Read More »

ಆದಿಚುಂಚನಗಿರಿಯಲ್ಲಿ ಶ್ರೀ ಕಾಲಭೈರವನ ಭವ್ಯ ದೇವಾಲಯ. ತಪ್ಪದೇ ನೋಡಿ ಬನ್ನಿ

ಆದಿಚುಂಚನಗಿರಿ ಕ್ಷೇತ್ರವು ದಕ್ಷಿಣ ಕ್ಷೇತ್ರದ ೭೧ನೇ ಪೀಠಾಧಿಪತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ನೇತೃತ್ವದಲ್ಲಿ ಅಭಿವೃದ್ಧಿಗೊಂಡಿತು. ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರವು ದಕ್ಷಿಣ ಭಾರತದಲ್ಲೇ  ಈ ದೇವರಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹಾಗೂ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಸಾಧಾರಣವಾಗಿ ಕಾಲಭೈರವನೆಂದರೆ ಕಾಶಿಯ ನೆನಪಾಗುತ್ತದೆ, ಉಜ್ಜಯಿನಿಯ ಕಾಲಭೈರವನೂ ಪ್ರಸಿದ್ಧನೇ ಸರಿ. ದಕ್ಷಿಣದಲ್ಲಿ ಈ ದೇವತೆಯ ದೇಗುಲಕ್ಕೆ ಇದ್ದ ಕೊರತೆಯು ಆದಿಚುಂಚನಗಿರಿಯ ಮಂದಿರದ ಮೂಲಕ ತುಂಬಿದಂತಾಗಿದೆ. ಆದಿಚುಂಚನಗಿರಿ ಕ್ಷೇತ್ರವು ಇತ್ತೀಚೆಗೆ ಪ್ರಸಿದ್ಧಿಗೆ ಬಂದಿದ್ದರೂ, ಅದು ಪುರಾತನ ಭೈರವ ಕ್ಷೇತ್ರ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೧೦ ಕಿ.ಮೀ.ಗಳ ದೂರದಲ್ಲಿ ಮಂಡ್ಯ ಜಿಲ್ಲೆ, …

Read More »

ಶ್ರೀ ರಾಮನ ಭಕ್ತ ಹನುಮಂತನ ಸಾಹಸದ ಬಗ್ಗೆ ಗೊತ್ತಾ? ತಿಳಿದುಕೊಳ್ಳಿ.

ರಾಮಾಯಣದ ಪಾತ್ರಗಳಲ್ಲಿ ಜನರ ಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ ‘ಸುಂದರಕಾಂಡ’ವೆಂದು ಕರೆದಿದ್ದಾರೆ. ನಮ್ಮ ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲಿ ಒಬ್ಬನಾದ ಹಾಗೂ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ, ಅಂಜನಾದೇವಿಯ ಮಗ, ರಾಮನ ಪರಮಭಕ್ತ, ಹಾಗೂ ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ಆಂಜನೇಯನು ಅಂಜನಾದೇವಿಯ ಪುತ್ರನು. ವಾಯುದೇವನಿಂದ ಹುಟ್ಟಿದವನು. ಆತನು ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ …

Read More »

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಮಹಿಮೆ ಏನೆಂಬುದು ನಿಮಗೆ ಗೊತ್ತೇ?

ನಮ್ಮ ಪುಣ್ಯಭೂಮಿ ಭಾರತದ ಒಂದು ಪವಿತ್ರ ಹಾಗೂ ಧಾರ್ಮಿಕ  ಸ್ಥಾನವಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಾರತೀಯರು ತಮ್ಮ ಜೀವನವನ್ನು  ಸಾರ್ಥಕಗೊಳಿಸಲು  ಪ್ರತಿಯೊಬ್ಬರೂ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಸ್ಥಾನ. ಶ್ರೀ ವೀರೇಂದ್ರ ಹೆಗ್ಗಡೆಯವರು ಇಲ್ಲಿನ ಧರ್ಮದರ್ಶಿಗಳು.  ಧರ್ಮಸ್ಥಳ ಮಂಜುನಾಥನಿಗೆ ಕೈ ಮುಗಿದು ಭಕ್ತಿಯಿಂದ ಬೇಡಿಕೊಂಡರೆ ನಮ್ಮ ಎಲ್ಲಾ ಸಮಸ್ಯೆಗಳೂ ದೂರವಾಗುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ. ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಎಂಟು ಶತಮಾನಗಳ ಇತಿಹಾಸವಿದ್ದು, ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಮಂಜುನಾಥ …

Read More »

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶೇಷತೆ ತಪ್ಪದೇ ತಿಳಿದುಕೊಳ್ಳಿ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.  ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ. ಶಬರಿಮಲೆ ಎಂಬ ಹೆಸರು ಬಂದಿದ್ದು ಹೀಗೆ: ರಾಮಾಯಣದಲ್ಲಿ ಶ್ರೀರಾಮನ ಭಕ್ತಳಾದ ಶಬರಿ ವನವಾಸಕ್ಕೆ ಬಂದಿದ್ದ ರಾಮನ ದರ್ಶನ ಪಡೆಯಬೇಕು ಎಂದು ನಿರ್ಧರಿಸಿದ್ದಳು. ಬೆಟ್ಟ ಸುತ್ತಿ ಬರುವ ರಾಮನ ದಣಿವಿಗೆ ಬುಟ್ಟಿಯ ತುಂಬಾ ಬೋರೆಹಣ್ಣನ್ನು ಇಟ್ಟುಕೊಂಡು ಕಾಯುತ್ತಿರಲು ಸೀತೆಯ ಅನ್ವೇಷಣೆಯಲ್ಲಿ ದುಃಖಿತನಾದ ರಾಮನನ್ನು ಆದರಪೂರ್ವಕವಾಗಿ ತನ್ನ ಕುಟೀರಕ್ಕೆ ಬರ …

Read More »

ಶನಿವಾರ ಶನಿದೇವರನ್ನು ಪೂಜಿಸಿದರೆ ನಿಮ್ಮ ಎಷ್ಟೋ ದೋಷಗಳು ದೂರ ಆಗುತ್ತೆ

ಶನಿಗ್ರಹವು ನಿಧಾನವಾಗಿ ಚಲಿಸುತ್ತದೆ. ಅಂದರೆ ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದು ಕೊಳ್ಳುವ ಸಮಯ ೩೦ ವರ್ಷಗಳು. ಶನಿಯನ್ನು ಶನೈಶ್ವರ, ಶನಿ ಭಗವಾನ್, ಶನಿದೇವ ಎಂದೆಲ್ಲಾ ಕರೆಯುತ್ತಾರೆ. ಶನಿಯು ಸೂರ್ಯದೇವನ ಪುತ್ರ. ಹಾಗು ಸೂರ್ಯನ ಹೆಂಡತಿ ಛಾಯ ನೆರಳಿನ ದೇವತೆ, ಹೀಗಾಗಿ ಛಾಯಾಪುತ್ರ ಎಂದೂ ಕರೆಯಲಾಗುತ್ತದೆ. ಹಿಂದೂಗಳ ಸಾವಿನ ದೇವತೆ ಯಮನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು. ಈತನು ಕಪ್ಪು ಬಣ್ದದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು, ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದು, ಬಾಣ ಹಾಗು ಎರಡು ಚಾಕು …

Read More »

ಇಂದು ಶುಕ್ರವಾರ ಸಿಗಂದೂರು ಚೌಡೇಶ್ವರಿಗೆ ನಮಿಸಿ ಶೇರ್ ಮಾಡಿ

ಕರ್ನಾಟಕದ ಅತ್ಯಂತ್ಯ ಶಕ್ತಿಶಾಲಿ ದೇವರುಗಳಲ್ಲಿ  ಸಿಗಂದೂರಿನ ಚೌಡೇಶ್ವರಿ ದೇವಿ ಸಹ ಒಂದು ಈ ದೇಗುಅಲಕ್ಕೆ ಸರಿ ಸುಮಾರು 300 ವರ್ಷಗಳ ಇತಿಹಾಸವಿದೆ. ಎಲ್ಲೆಲಿಂದಲೂ ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ ರಕ್ಷಿಸುವ ತಾಯಿ ಎಂದು ಜನರು ಚೌಡೇಶ್ವರಿಯನ್ನು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಸಿಗಂದೂರು ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಬದಿಯಲ್ಲಿದೆ, ಕಾಡಿನಿಂದ ಆವೃತ್ತವಾದ ಸಿಗಂದೂರು ಸಣ್ಣ ಊರು. ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಸುಂದಾರವಾದ ಸ್ಥಳ. ಸಾಗರದಿಂದ 45 ಕಿ.ಮೀ. ದೂರದಲ್ಲಿದೆ. ಸಿಗಂದೂರು ಸಮೀಪ ತುಮರಿ …

Read More »

ಸೋಮನಾಥಪುರದ ಶ್ರೀ ಚನ್ನಕೇಶವ ದೇವಾಲಯದ ಸೊಬಗನ್ನು ನೋಡಲು ಎರಡು ಕಣ್ಣುಗಳೂ ಸಾಲದು

ಸೋಮನಾಥಪುರ ಶ್ರೀ ಚೆನ್ನಕೇಶವ ದೇವಸ್ಥಾನ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನಲ್ಲಿರುವ ಸೋಮನಾಥಪುರವೆಂಬ ಪುಟ್ಟ ಗ್ರಾಮದಲ್ಲಿರುವ ಬಹು ದೊಡ್ಡ ದೇಗುಲವಿದು. ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಈ ದೇವಾಲಯ ಮೂರು ಗೋಪುರಗಳನ್ನು ಒಳಗೊಂಡಿದ್ದು ಕಾವೇರಿ ನದಿಯ ಎಡದಂಡೆಯ ಮೇಲಿದೆ. 13ನೇ ಶತಮಾನದಲ್ಲಿ ಹೊಯ್ಸಳ ಚಕ್ರವರ್ತಿ ಮುಮ್ಮಡಿ ನರಸಿಂಹನ ಆಳ್ವಿಕೆಯಲ್ಲಿ ದಂಡ ನಾಯಕನಾಗಿದ್ದ ಸೋಮನಾಥನು ಈ ದೇವಾಲಯವನ್ನು 1254-1291ರಲ್ಲಿ ನಿರ್ಮಾಣ ಮಾಡಿದ್ದು ಸೋಮನಾಥಪುರದ ಉದಯಕ್ಕೆ ಕಾರಣಕರ್ತನಾದ. ಈತ ಅಂದು ಇಲ್ಲಿ ನಿರ್ಮಿಸಿದ್ದ ಚೆನ್ನಕೇಶವ ದೇವಸ್ಥಾನ ಇಂದು ವಿಶ್ವಪ್ರಸಿದ್ಧಿಯಾಗಿದೆ. ಇದು ಇಂದು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಬೆಳೆದಿದೆ. ಈ ದೇವಾಲಯದ ಶಿಲ್ಪಗಳು ನಮ್ಮನ್ನು …

Read More »

ಇಂದು ಗುರುವಾರ ರಾಯರ ಮಹಿಮೆ ತಪ್ಪದೇ ಓದಿ

ಶ್ರೀ ರಾಘವೇಂದ್ರ ಸ್ವಾಮಿಗಳ ಬಾಲ್ಯದ ಹೆಸರು ವೆಂಕಣ್ಣಭಟ್ಟರೆಂದು. ಮುಂದೆ ಯತಿಗಳಾಗಿ ಸಿದ್ಧಿಪಡೆದು ಶ್ರೀರಾಘವೆಂದ್ರ ಸ್ವಾಮಿಗಳೆಂದು ಜಗದ್ವಿಖ್ಯಾತರಾದರು. ಅವರು ಸ್ಥಾಪಿಸಿದ ಶ್ರೀಮಠವು, ಆಂಧ್ರಪ್ರದೇಶದ ಮಂತ್ರಾಲಯಂ ರೋಡ್ ರೈಲ್ವೆ ನಿಲ್ದಾಣಕ್ಕೆ ೮ ಕಿ.ಮೀ.ದೂರದಲ್ಲಿದೆ. ಮಂತ್ರಾಲಯವು ಆಂಧ್ರ ಪ್ರದೇಶ ದಲ್ಲಿ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿನ ಒಂದು ಊರು. ಶ್ರೀ ರಾಘವೇಂದ್ರ ಸ್ವಾಮಿ ರವರ ನೆಲೆವೀಡಾಗಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳ. ತುಂಗಭದ್ರಾ ನದಿಯ ದಂಡೆಯಲ್ಲಿದೆ. ರಾಘವೇಂದ್ರ ಸ್ವಾಮಿಗಳ ಗಂಥ ಸಂಪತ್ತು ತುಂಬಾ ದೊಡ್ಡದು. ಬಹಳ ಸರಳ ಹಾಗೂ ಸುಲಭ. ಇವರ ಧ್ಯಾನದಲ್ಲಿ ತೊಡಗಿದರೆ ನೆಮ್ಮದಿ, ಶಾಂತಿಯುತ ಬದುಕು ನಡೆಸಬಹುದು ಎಂಬ …

Read More »
error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ