ಅಧಿಕ ರಕ್ತದೊತ್ತಡದಿಂದ ಬಳುಲುತ್ತಿದ್ದೀರಾ? ಹಾಗಿದ್ದಲ್ಲಿ ಇಲ್ಲಿದೆ ಕೆಲವು ಸಲಹೆಗಳು..

0
48

ಅಧಿಕ ರಕ್ತದೊತ್ತಡದಿಂದ ಬಳುಲುತ್ತಿದ್ದೀರಾ? ಹಾಗಿದ್ದಲ್ಲಿ ಇಲ್ಲಿದೆ ಕೆಲವು ಸಲಹೆಗಳು..

ಹತ್ತು ಮಂದಿ ವಯಸ್ಕರಲ್ಲಿ ಸುಮಾರು ಏಳು ಮಂದಿಗೆ ಅಧಿಕ ರಕ್ತದೊತ್ತಡದ ಸಮಸ್ಯೆಯ ಪರಿಣಾಮ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸುತ್ತದೆ. ವ್ಯಾಯಾಮದ ಕೊರತೆ, ಅಧಿಕ ಉಪ್ಪಿನಾಂಶ ಇರುವ ಆಹಾರ ಸೇವನೆಯಿಂದ ಯುವಕರಲ್ಲೂ  ಈ ಸಮಸ್ಯೆ ಕಾಣುತ್ತಿದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಇಲ್ಲಿದೆ ಕೆಲವು ಸಲಹೆಗಳು..

೧) ಪ್ರತಿದಿನ ಜಾಗಿಂಗ್ ಮಾಡಿ.

ಇದರಿಂದ  ಆಮ್ಲಜನಕದ ಹೀರಿಕೊಳ್ಳುವಿಕೆ ಸುಧಾರಿಸುವುದಲ್ಲದೇ ರಕ್ತದೊತ್ತಡ ಕಡಿಮೆಯಾಗುತ್ತದೆ.

೨) ಮಡಿಕೆ ಮೊಸರು ಸೇವಿಸಿ.

ದಿನಕ್ಕೆ ಒಂದು ಗ್ಲಾಸ್ ಮಡಿಕೆಯಲ್ಲಿ ಇಟ್ಟ ಮೊಸರನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು.

೩) ಬಾಳೇಹಣ್ಣು ಸೇವಿಸಿ.

ದಿನಕ್ಕೆ ೫ ಬಾಳೆಹಣ್ಣನ್ನು ಸೇವಿಸುವುದರಿಂದ ಇದರಲ್ಲಿನ ಪೊಟ್ಯಾಷಿಯಂ ಖನಿಜದ ಹೇರಳತೆಯಿಂದ ಅಧಿಕ ರಲ್ತದೊತ್ತಡ ಕಡಿಮೆಯಾಗುವುದು.

೪) ಉಪ್ಪಿನ ಸೇವನೆ ಕಡಿಮೆ ಮಾಡಿ.

ಉಪ್ಪಿನಾಂಶವು ದೇಹದ ದ್ರವಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಅಪದಮನಿಯಲ್ಲಿ ರಕ್ತದ ಒತ್ತಡ ಜಾಸ್ತಿಯಾಗುತ್ತದೆ. ಬಿಸ್ಕತ್, ಬೇಕರಿ ತಿಂಡಿ, ಸಿದ್ಧ ಆಹಾರಗಳ ಸೇವನೆಯಿಂದ ಶೇ- ೮೦ರಷ್ಟು ಉಪ್ಪು ನಮ್ಮ ದೇಹ ಸೇರುತ್ತದೆ.

೫)ಕಾಫಿ ಸೇವನೆ ಕಡಿಮೆ ಮಾಡಿ.

ದಿನಕ್ಕೆ ೫೦೦ ಗ್ರಾಂ ಗಿಂತ ಹೆಚ್ಚು ಕಾಫಿ ಸೇವನೆಯಿಂದ ರಕ್ತದೊತ್ತಡ ಹೆಚ್ಚುತ್ತದೆ. ಕಾಫಿಯಲ್ಲಿ ಇರುವ ಕೆಫಿನ್ ಎಂಬ ಅಂಶವು ರಲ್ತನಾಳವನ್ನು ಬಿಗಿಯಾಗಿಸಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here