ಅರಿಶಿಣಕ್ಕೆ ಲಂಗ್ಸ್ ಕ್ಯಾನ್ಸರ್ ದೂರ ಮಾಡುವ ಶಕ್ತಿ ಇದೆ ಅಂತೆ

0
18

ಅರಿಶಿಣ ಯಾರಿಗೆ ಗೊತ್ತಿಲ್ಲ ಹೇಳಿ ಅದನ್ನು ನಾವು ನಮ್ಮ ಆಹಾರದಲ್ಲಿ ಬಳಸುತ್ತೇವೆ. ಪೂಜೆಗೆ ಬಳಕೆ ಮಾಡುತ್ತೇವೆ. ಬಣ್ಣಗಳಿಗೂ ಬಳಕೆ ಮಾಡುವ ಪದ್ಧತಿ ನಮ್ಮಲ್ಲಿದೆ. ಭಾರತದ ಅತಿ ಹೆಚ್ಚು ಬಳಕೆಯಲ್ಲಿರುವ ಸಾಂಬಾರ ಪದಾರ್ಥಗಳಲ್ಲಿ ಒಂದು ಎನಿಸಿಕೊಂಡಿರುವ ಅರಿಶಿಣದಲ್ಲಿ ಅದೆಂತ ಅದ್ಭುತವಾದ ಔಷಧೀಯ ಗುಣಗಳಿವೆ ಎಂದು ಗೊತ್ತಾದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಅರಿಶಿಣದ ಕಷಾಯವನ್ನು ಪ್ರತಿ ನಿತ್ಯವೂ ಸೇವಿಸುವುದರಿಂದ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಏನು ಅನ್ನೋದು ಗೊತ್ತಾದರೆ ನೀವು ಈ ಅರಿಶಿಣವನ್ನು ಮತ್ತೆ ಬಿಡೋದಕ್ಕೆ ಹೋಗುವುದಿಲ್ಲ. ಇಷ್ಟಕ್ಕೂ ಏನಿದೆ ಅರಿಶಿಣದಲ್ಲಿ ಭಾರತೀಯರು ಅರಿಶಿಣಕ್ಕೆ ಯಾಕಷ್ಟು ಪ್ರಾಧಾನ್ಯತೆಯನ್ನು ಕೊಡುತ್ತಾ ಬಂದಿದ್ದಾರೆ ಅನ್ನೋದನ್ನ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

ಅರಿಶಿಣ ಭಾರತದಲ್ಲಿ ಅತಿ ಹೆಚ್ಚು ಮಹತ್ವ ಪಡೆದುಕೊಂಡಿರುವ ಪದಾರ್ಥ ಅದಕ್ಕೆ ಪೂಜ್ಯ ಸ್ಥಾನವನ್ನು ನಾವು ಕೊಟ್ಟಿದ್ದೇವೆ. ಶುಭ ಕಾರ್ಯಗಳಿಂದ ಹಿಡಿದು ಆಹಾರದವರೆಗೆ ಪ್ರತಿಯೊಂದರಲ್ಲೂ ಅರಿಶಿಣ ಬೇಕೇ ಬೇಕು. ಭಾರತ ಕಾಂಬೋಡಿಯಾ ಚೀನಾ ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬೆಳೆಯಲಾಗುವ ಅರಿಶಿಣವನ್ನು ಭಾರತದಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಾರೆ. ಮತ್ತು ಬಳಕೆ ಮಾಡುತ್ತಾರೆ. ಈ ಅರಿಶಿಣದಲ್ಲಿ ಅದೆಂಥಾ ಔಷಧೀಯ ಗುಣಗಳಿವೆ ಎಂದರೆ ಅದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ನಾವು ಸದಾ ಕಾಲ ಡಾಕ್ಟರ್ ಗಳಿಂದ ದೂರ ಇರಬಹುದು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ದೇಹದ ತೂಕ ಹೆಚ್ಚಾದಾಗ ಅರಿಶಿಣದ ಕಷಾಯವನ್ನ ಬಳಕೆ ಮಾಡುವುದರಿಂದ ಸಹಜವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಅರಿಶಿನ ಅಗತ್ಯ ಎಣ್ಣೆಯಂಶ ಮ್ಯಾಂಗನೀಸ್ ಪೊಟ್ಯಾಶಿಯಂ ವಿಟಮಿನ್ ಇ ವಿಟಮಿನ್ ಸಿ ಕ್ಯಾಲ್ಸಿಯಂ ಕಬ್ಬಿಣ ಝಿನ್ಕ ಹೀಗೆ ಸಾಕಷ್ಟು ಅಂಶಗಳಿಂದ ಕೂಡಿದೆ ಅರಿಶಿನದ ನೀರನ್ನು ಸೇವಿಸುವುದರಿಂದ ದೇಹದ ಮೆಟಬಾಲಿಸಂ ಹೆಚ್ಚಾಗುತ್ತದೆ.

ದೇಹದೊಳಗಿನ ವಿಷಯುಕ್ತ ಅಂಶಗಳನ್ನು ತೆಗೆದುಹಾಕುವುದಕ್ಕೆ ಅರಿಶಿಣದ ನೀರು ಸಹಾಯ ಮಾಡುತ್ತದೆ. ಕೊಬ್ಬಿನ ಅಂಶವನ್ನು ನಿವಾರಿಸುತ್ತದೆ. ಹಾಗೆ ಕೊಬ್ಬಿನಂಶ ಯುಕ್ತ ಆಹಾರ ಸೇವನೆಯ ಸೆಳೆತವನ್ನ ಕೂಡ ಇದು ಕಡಿಮೆ ಮಾಡುತ್ತೆ ಒಂದು ಸ್ಪೂನ್ ಅರಿಶಿಣದ ಪುಡಿ ಕಾಲು ಕಪ್ ಬಿಸಿ ನೀರು ಹಾಗೂ ಮುಕ್ಕಾಲು ಕಪ್ ಹಾಲನ್ನು ಬೆರೆಸಿ ಅದನ್ನು ನೀರಲ್ಲಿ ಹಾಕಿ 10 ನಿಮಿಷ ಕುದಿಸಿ ಆ ನಂತರ ಅದಕ್ಕೆ ರುಚಿಗೆ ಬೇಕಾದಷ್ಟು ಜೇನನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯುವುದಕ್ಕೆ ಶುರು ಮಾಡಿ. ಹೀಗೆ ಮಾಡಿದ ಕೆಲವೇ ವಾರಗಳಲ್ಲಿ ನಿಮ್ಮ ದೇಹದಲ್ಲಿನ ಬದಲಾವಣೆಗಳು ನಿಮ್ಮ ಗಮನಕ್ಕೆ ಬರುತ್ತದೆ. ದೇಹ ಹಗುರವಾಗುವುದು ಅಷ್ಟೇ ಅಲ್ಲದೆ ಚೈತನ್ಯ ಪೂರ್ಣಗೊಳ್ಳುತ್ತದೆ.

ಇನ್ನು ಈ ವಿಷಯ ಕೇಳಿದ್ರೆ ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸೈಂಟಿಫಿಕ್ ಆಗಿ ಪ್ರೂವ್ ಆಗಿರೋ ಅಂಶ. ನಾವು ಬಳಸುವ ಶುದ್ಧ ಅರಿಶಿಣದಲ್ಲಿ ಬ್ರೆಸ್ಟ್ ಕ್ಯಾನ್ಸರ್ ಲಂಗ್ಸ್ ಕ್ಯಾನ್ಸರ್ ಪ್ರೊಸ್ಟೇಟ್ ಕ್ಯಾನ್ಸರ್ ಸೇರಿದಂತೆ ಹಲವು ಕ್ಯಾನ್ಸರ್ ಗಳನ್ನ ಗುಣಪಡಿಸುವ ಶಕ್ತಿ ಅರಿಶಿಣಕ್ಕಿದೆ. ಕ್ಯಾನ್ಸರ್ ಕಾರಕ ಸೆಲ್ ಗಳು ಬೆಳೆಯದಂತೆ ಕ್ಯಾನ್ಸರ್ ಕಾರಕ ಸೆಲ್ ಗಳು ಹರಡದಂತೆ ಹಾಗೂ ಇರುವ ಸೆಲ್ ಗಳನ್ನು ನಾಶ ಮಾಡುವಲ್ಲಿ ಹರಿಶಿಣ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇನ್ನು ಇದರಲ್ಲಿನ ಕರ್ಕ್ಯೂಮಿನ್ ಅಂಶ ಬ್ರೈನ್ ಟ್ಯೂಮರ್ ನಿಂದ ನಮ್ಮನ್ನ ಕಾಪಾಡುತ್ತದೆ. ಅದಕ್ಕಾಗಿ ನಾವು ಅರಿಶಿಣವನ್ನು ಬೆಣ್ಣೆ ಆಲಿವ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಸೇವನೆ ಮಾಡಬೇಕು. ಅಥವಾ ಅರಿಶಿಣದ ಕಷಾಯ ಕೂಡ ಬಳಕೆ ಮಾಡಬಹುದು.

ಇನ್ನು ಡಿಪ್ರೆಶನ್ ನಿದ್ರಾಹೀನತೆ ಮಾನಸಿಕ ಸಮಸ್ಯೆಗಳು ಅಧಿಕ ರಕ್ತದೊತ್ತಡ ಆತಂಕ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೂ ಪರಿಹಾರ ಈ ಅರಿಶಿಣದಲ್ಲಿದೆ. ಅದಕ್ಕಾಗಿ ನಾಲ್ಕು ಕಪ್ ನೀರಿಗೆ ಎರಡು ಟೇಬಲ್ ಸ್ಪೂನ್ ಅರಿಶಿಣ ನಾಲ್ಕು ಸ್ಪೂನ್ ಜೇನು ಹಾಗು ಅರ್ಧ ಸ್ಪೂನ್ ನಿಂಬೆ ರಸ ಬೆರೆಸಿ ಪಾನೀಯವನ್ನು ನೀವು ತಯಾರು ಮಾಡಿಕೊಂಡು ಅದನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಡಿಪ್ರೆಷನ್ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಈ ಮೇಲಿನ ಅನುಕರಣೆಯನ್ನು ಪಾಲಿಸಿದರೆ ಒಳ್ಳೆಯ ಫಲಿತಾಂಶವನ್ನು ನೋಡಬಹುದು. ಇದನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here