ಇದಕ್ಕೇನಾದರೂ ಸ್ವಲ್ಪ ಡ್ಯಾಮೇಜ್ ಆದ್ರೂ ಪ್ರತಿ ಮನುಷ್ಯನಿಗೂ ಸ್ಕಿನ್ ಕ್ಯಾನ್ಸರ್ ನಿಂದ ಸಾಯಬೇಕಾಗುತ್ತೆ

0
28

ನಾವು ಈ ಭೂಮಿ ಮೇಲೆ ಇಷ್ಟೊಂದು ಆನಂದವಾಗಿ ಜೀವನ ಮಾಡಲು ತುಂಬಾ ಕಾರಣಗಳು ಇವೆ. ಸಾಮನ್ಯವಾಗಿ ನಮ್ಮೆಲ್ಲರಿಗೂ ಗೊತ್ತಿರುವ ಸತ್ಯ ನೀರು ಗಾಳಿ ಆಹಾರ ಆದರೆ ಇವುಗಳಿಗಿಂತ ಅತೀ ಮುಖ್ಯ ಆದ ಕಾರಣ ಸಹ ಒಂದಿದೆ ಅದರಿಂದನೆ ನಾವು ಈ ಭೂಮಿ ಮೇಲೆ ಇಷ್ಟೊಂದು ಸಂತೋಷವಾಗಿ ಜೀವನ ಮಾಡುತ್ತಾ ಇದ್ದೇವೆ. ಈ ಭೂಮಿ ಮೇಲೆ ನಾವು ಬದುಕಿದ್ದೇವೆ ಅಂದರೂ ನಮ್ಮ ಭೂಮಿ ಮೇಲೆ ಜೀವ ಹುಟ್ಟಬೇಕು ಅಂದರೂ ಅದುವೇ ಮುಖ್ಯ ಕಾರಣ. ಅದು ಏನು ಅಂದ್ರೆ ಓಝೋನ್ ಲೇಯರ್. ನಮ್ಮ ಭೂಮಿಗೆ ಸುಮಾರು ಹದಿನೇಳು ರಿಂದ ಐವತ್ತು ಕಿಮೀ ಎತ್ತರದಲ್ಲಿ ಈ ಓಝೋನ್ ಲೆಯರ್ ಇರುತ್ತೆ. ಇದು ನಮ್ಮ ಸೂರ್ಯನಿಂದ ನೇರವಾಗಿ ಭೂಮಿಗೆ ಬರುವ ಅಲ್ಟ್ರಾ ವಯಲೆಟ್ ರೇಸ್ ಅನ್ನು ತಡೆದು ನಮ್ಮನ್ನು ರಕ್ಷಿಸುತ್ತದೆ.

ಒಂದು ವೇಳೆ ಈ ಓಝೋನ್ ಲೆಯೆರ್ ಏನಾದ್ರೂ ಒಂದರಷ್ಟು ನಾಶವಾದರೆ ಭೂಮಿ ಮೇಲೆ ಎರಡರಷ್ಟು ಸ್ಕಿನ್ ಕ್ಯಾನ್ಸರ್ ಚರ್ಮ ರೋಗಗಳು ಬೆಳೆಯುತ್ತೆ ಒಂದು ವೇಳೆ ಈ ಓಝೋನ್ ಲೇಯರ್ ಇಲ್ಲ ಅಂದರೆ ಸೂರ್ಯನಿಂದ ಬರುವ ಅಲ್ಟ್ರಾ ವಯಲೆಟ್ ರೇಸ್ ಇಂದ ಈ ಭೂಮಿ ಮೇಲೆ ಇರುವವರು ಎಲ್ಲ ನಿಮಿಷದಲ್ಲಿ ಕುರುಡರಾಗುತ್ತಾರೆ ನಮ್ಮಲ್ಲಿ ಇರುವ ಡಿಎನ್ಎ ಡ್ಯಾಮೇಜ್ ಆಗಿ ನಾವೆಲ್ಲ ವಿಚಿತ್ರ ಆಕಾರಕ್ಕೆ ಬದಲಾಗಿ ಬಿಡುತ್ತೇವೆ. ಈ ಅಲ್ಟ್ರಾ ವಯಲೆಟ್ ರೇಸ್ ಇಂದ ಭೂಮಿ ಮೇಲೆ ಇರುವ ಪ್ರತೀ ಒಬ್ಬರೂ ಸ್ಕಿನ್ ಕ್ಯಾನ್ಸರ್ ಇಂದ ಸಂಕಟ ಪಡುತ್ತಾರೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಓಝೋನ್ ಲೇಯರ್ ಇಲ್ಲ ಅಂದರೆ ಈ ಭೂಮಿ ಮೇಲೆ ಯಾವ ಜೀವಿ ಕೂಡಾ ಬದುಕುವುದಿಲ್ಲ ಅಂತಹ ಈ ಓಝೋನ್ ಲೇಯರ್ ಗೆ ಅಂಟಾರ್ಟಿಕಾ ಪ್ರದೇಶದಲ್ಲಿ ತೂತು ಬಿದ್ದಿದೆ ಎನ್ನುವ ವಿಷಯ ಮೂರು ಜನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಈ ತೂತಿಗೆ ಕಾರಣ ಕ್ಲೋರೊ ಫ್ಲೋರೋ ಕಾರ್ಬನ್ ಅಂತ ಈ ಪ್ರಪಂಚಕ್ಕೆ ಅವರ ರೀಸರ್ಚ್ ಇಂದ ತಿಳಿಸುತ್ತಾರೆ.

ನಿಮಗೆ ಗೊತ್ತಾ ಒಂದು ಕ್ಲೋರೋ ಫ್ಲೋರೋ ಕಾರ್ಬನ್ ಅಣುವು ಲಕ್ಷ ಓಝೋನ್ ಅಣುಗಳನ್ನು ನಾಶ ಮಾಡುತ್ತದೆ ಅಂತ ಇವರ ರೀಸರ್ಚ್ ನಿಂದ ಪ್ರಪಂಚದಾದ್ಯಂತ ಕ್ಲೊರೋ ಫ್ಲೋರ್ ಅಣುವನ್ನು ಬ್ಯಾನ್ ಮಾಡಿದ್ದಾರೆ. ಒಂದು ವೇಳೆ ಏನಾದರೂ ಈ ವಿಜ್ಞಾನಿಗಳು ಇಲ್ಲ ಅಂದಿದ್ದರೆ ಕ್ಲೋರೋ ಫ್ಲೋರ್ ಕಾರ್ಬನ್ ಇಂದ ಓಝೋನ್ ಲೇಯರ್ ಪೂರ್ತಿಯಾಗಿ ನಾಶವಾಗಿ ಎಷ್ಟೋ ರೀತಿಯ ಜೀವಿಗಳು ಕಣ್ಮರೆ ಆಗುತ್ತಿದ್ದವು ನಾವೆಲ್ಲರೂ ಸ್ಕಿನ್ ಕ್ಯಾನ್ಸರ್ ಇಂದ ಸಂಕಟ ಪಡಬೇಕಿತ್ತು ನಿಜವಾಗಲೂ ಇವರು ಪ್ರಪಂಚಕ್ಕೆ ದೇವರು.

ನಾವೆಲ್ಲರೂ ಟೆಕ್ನಾಲಜಿ ಬೆಳೆಸ್ತಾ ಇದ್ದೇವೆ ಉದ್ದಾರ ಮಾಡ್ತಾ ಇದ್ದೇವೆ ಎಂದು ಕೊಂಡಿದ್ದೇವೆ ಆದರೆ ಟೆಕ್ನಾಲಜಿ ಬೆಳೀತಾ ಇದ್ದಂಗೆ ನಾವು ವಿನಾಶದ ಅಂಚಿಗೆ ಹೋಗುತ್ತಾ ಇದ್ದೇವೆ. ಒಂದಲ್ಲ ಒಂದು ದಿನ ನಾವು ಈ ವಿನಾಶವನ್ನು ನೋಡಲೇಬೇಕು ಅದು ಯಾವ ರೂಪದಲ್ಲಿ ಬರುತ್ತೆ ಅನ್ನುವುದು ಯಾರಿಗೂ ಗೊತ್ತಿಲ್ಲ ನಾವು ಈ ಭೂಮಿ ಮೇಲೆ ತುಂಬಾ ರೀತಿಯ ಮಾಲಿನ್ಯ ಗಳನ್ನು ಮಾಡಿದ್ದೇವೆ ವಾಯು ಮಾಲಿನ್ಯ ಜಲ ಮಾಲಿನ್ಯ ಪರಿಸರ ಮಾಲಿನ್ಯ ಕೊನೆಗೆ ನಾವು ಅಂತರ್ಜಲ ಕೂಡಾ ನಾಶ ಮಾಡಿ ಆಗಿದೆ ಇದು ಕೊನೆಗೆ ನಮ್ಮ ವಿನಾಶಕ್ಕೆ ದಾರಿ ತೋರುತ್ತದೆ ಈ ರೀತಿಯಾಗಿ ಯಾವುದೋ ಒಂದು ರೂಪದಲ್ಲಿ ನಮ್ಮ ಪ್ರಪಂಚ ಈ ಟೆಕ್ನಾಲಜಿ ಇಂದಾನೆ ನಾಶ ಆಗಬಹುದು.

LEAVE A REPLY

Please enter your comment!
Please enter your name here