ಈ ದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

0
12

ಮೇಷ: ಈ ದಿನ ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ, ಮತ್ತು ನಿಮ್ಮ ದೈನಂದಿನ ಚಟುವಟಿಕೆ ಮೇಲೆ ಹೆಚ್ಚಿನ ಗಮನ ಕೊಡಿ, ನೀವು ಮೂಲ ರಾಮ ದೇವರ ಪ್ರಾರ್ಥನೆ ಮತ್ತು ಪೂಜೆ ಮಾಡಿದ್ರೆ ಇಂದು ನಿಮಗೆ ಯಾವುದೇ ರೀತಿಯ ಸಮಸ್ಯೆ ಬರೋದಿಲ್ಲ

ವೃಷಭ; ಈ ದಿನ ನಿಮ್ಮ ರಾಶಿಗೆ ಹೆಚ್ಚಿನ ಶುಭ ಫಲ ಇದೆ ನೀವು ನಿಮ್ಮ ಸ್ನೇಹಿತರೊಡನೆ ಇಂದು ಎಚ್ಚರಿಕೆಯಿಂದ ವ್ಯವಹಾರ ಮಾಡಿದ್ರೆ ಯಾವುದೇ ರೀತಿಯ ಸಮಸ್ಯೆ ಬರೋದಿಲ್ಲ ಈ ದಿನ ಹೆಚ್ಚಿನ ಫಲವನ್ನು ಕಾಣಲು ನೀವು ಹನುಮಾನ್ ಚಾಲೀಸ ೨ ಬಾರಿ ಓದಿ

ಮಿಥುನ: ನಿಮ್ಮ ಹಲವು ಸಮಸ್ಯೆಗಳ ನಡುವೆಯೂ ನೀವು ಅಂದುಕೊಂಡ ಕೆಲಸವನ್ನು ಸಾಧಿಸುವಿರಿ ನಿಮ್ಮ ವಿರೋಧಿಗಳಿಗೆ ನೀವು ಸೆಡ್ಡು ಹೊಡೆದು ನಿಲ್ಲುವ ದಿನ ಆಗಲಿದೆ. ನೀವು ಈ ದಿನ ಮತ್ತಷ್ಟು ಹೆಚ್ಚಿನ ಲಾಭ ಪಡೆಯಲು ವಿಷ್ಣು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯಿರಿ.

ಕರ್ಕಾಟಕ: ಅನ್ಯಾಯವನ್ನು ಕಂಡು ನೀವು ಎದುರಾಳಿಯ ವಿರುದ್ದ ಹೋರಾಡಿ ಗೆಲ್ಲುವಿರಿ. ನಿಮಗೆ ಏನಾದ್ರು ಮಾನಸಿಕ ಕಿರುಕುಳ ಇದ್ದರೆ ಇಂದಿಗೆ ಎಲ್ಲವು ಕಡಿಮೆಯಾಗುತ್ತದೆ. ನೀವು ಮತ್ತಷ್ಟು ಲಾಭವನ್ನು ಪಡೆಯಲು ಹನುಮಾನ್ ಚಾಲೀಸ ಓದಿ ವಿಶೇಷ ಲಾಭ ಪಡೆಯುತ್ತೀರಿ.

ಸಿಂಹ: ಇಂದು ಈ ರಾಶಿಯವರಿಗೆ ಗೌರವ ಮನ್ನಣೆ ದೊರಯುತ್ತದೆ. ನಿಮ್ಮ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಯಾವುದೇ ಸಮಸ್ಯೆ ಇಂದು ನಿಮಗೆ ಬರುವುದಿಲ್ಲ. ನೀವು ಇಂದು ಗಣೇಶನ ದರ್ಶನ ಪಡೆದರೆ ವಿಶೇಷ ಲಾಭ ಪಡೆಯುತ್ತೀರಿ.

ಕನ್ಯಾ : ಈ ದಿನ ನಿಮ್ಮ ರಾಶಿಗೆ ಅದೃಷ್ಟ ಒಲಿದು ಬರುವ ಸಾಧ್ಯತೆ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ಇಷ್ಟು ದಿನ ನೀವು ಹಲವು ಸಮಸ್ಯೆಗಳಿಂದ ನೊಂದ್ದಿದೀರಿ ಉತ್ತಮ ಕಾಲ ನಿಮಗಾಗಿ ಕಾದಿದೆ, ನೀವು ನಿಮ್ಮ ರಾಶಿಗೆ ಹೆಚ್ಚು ಫಲ ಸಿಗಲು ಸಾಧ್ಯವಾದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿಕೊಳ್ಳಿ.

ತುಲಾ: ಈ ದಿನ ನಿಮ್ಮ ರಾಶಿಗೆ ಹಣದ ಸಮಸ್ಯೆ ಎದುರಾಗುವ ಅಥವ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು, ನೀವು ಈ ದಿನ ಪಕ್ಷಿಗಳಿಗೆ ಧ್ಯಾನ ಹಾಕಿದ್ರೆ ನಿಮಗೆ ಹೆಚ್ಚಿನ ಲಾಭ ಸಿಗುತ್ತೆ ಈ ದಿನ ಆರಾಮದಾಯಕ.

ವೃಶ್ಚಿಕ: ಈ ದಿನ ನೀವು ನಿಮ್ಮ ಹಳೆಯ ಗೆಳಯ ಅಥವ ಗೆಳತಿಯನ್ನು ಭೇಟಿ ಮಾಡುವ ಅವಕಾಶ ಬರುತ್ತೆ ಹಣ ಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಕಬ್ಬಿಣ ವ್ಯಾಪಾರಿಗಳಿಗೆ ಇಂದು ನಷ್ಟವಾಗುವ ಸಾಧ್ಯತೆ ಹೆಚ್ಚು.

ಧನು: ಇಂದು ನೀವು ಎಷ್ಟೇ ಶ್ರಮ ಪಟ್ಟರು ಮಾಡಿದ ಕೆಲ್ಸಕ್ಕೆ ಸರಿಯಾಗಿ ನಿಮಗೆ ಮನ್ನಣೆ ದೊರೆಯುವುದಿಲ್ಲ. ಇಂದು ನೀವು ಹೆಚ್ಚು ಜಾಗ್ರತೆಯಿಂದಲೇ ಕೆಲಸ ಮಾಡಿ. ದುರ್ಗಾ ಸ್ತೋತ್ರ ಪಾರಾಯಣ ಮಾಡಿದ್ರೆ ನಿಮ್ಮ ಕಷ್ಟಗಳು ದೂರ ಆಗುತ್ತದೆ.

ಮಕರ: ಇಂದು ನಿಮ್ಮ ಮೇಲೆ ವಿನಾಕಾರಣ ಕೆಲವು ಆಪಾದನೆ ಮತ್ತು ಆರೋಪ ಬಂದರು ಬರಬಹುದು. ನಿಮ್ಮ ರಾಶಿಯ ಮೇಲೆ ಹೆಚ್ಚು ಭಗವಂತನ ಕೃಪೆ ಇರುವುದರಿಂದ ಎಲ್ಲ ಸಮಸ್ಯೆಗಳಿಂದ ಪಾರಾಗುವ ಅವಕಾಶ ನಿಮಗೆ ಇದೆ ಆದರು ನೀವು ಇಂದು ಹನುಮಂತನ ದರ್ಶನ ಪಡೆಯಿರಿ.

ಕುಂಭ: ಈ ‌ದಿನ ನಿಮ್ಮ ರಾಶಿಗೆ ಗೃಹಿಣಿಯರು ಹೆಚ್ಚಿನ ಜವಾಬ್ದಾರಿ ಬರುವ ಸಾಧ್ಯತೆ ಇದೆ, ಮಾಡುವ ಕೆಲ್ಸದ್ದಲ್ಲಿ ಹೆಚ್ಹಿನ ಜಾಗೃತಿವಹಿಸಿಕೊಳ್ಳಿ, ನೀವು ಈ ದಿನದ ಹೆಚ್ಚಿನ ಶುಭ ಲಾಭವನ್ನು ಪಡೆಯಲು, ಶಿವನ ಸ್ತುತಿ ಪಾರಾಯಣ ಮಾಡಿಕೊಳ್ಳಿ.

ಮೀನಾ : ಈ ದಿನ ನಿಮ್ಮ ರಾಶಿಗೆ ಕೆಲಸದ ನಿಮಿತ್ತ ಅಥವ ಬೇರೆ ಒಂದು ಕಾರಣದಿಂದ ನೀವು ದೂರ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಿದೆ, ನಿಮ್ಮ ಸುತ್ತಮುತ್ತಲು ನಿಮ್ಮ ಜನರನ್ನು ನಿಮ್ಮೊಂದಿಗೆ ಇದ್ದಾರೆ ಅಂದುಕೊಂಡರು ನೀವು ಹೆಚ್ಚಿನ ಜಾಗೃತಿವಹಿಸಿದರೆ ಮಾತ್ರ ನಿಮ್ಮ ಸಮಸ್ಯೆ ದೂರ ಆಗುತ್ತೆ ಎಚ್ಚರ.

LEAVE A REPLY

Please enter your comment!
Please enter your name here