ಈ ಮಂತ್ರ ಹೇಳಿದ್ರೆ ನಿಮಗೆ 10 ಲಾಭ

0
102

ಓಂ ನ್ನು ಪಠಿಸುವುದರಿಂದ ಏನೆಲ್ಲಾ ಲಾಭವಿದೆ. ಬನ್ನಿ ತಿಳಿದುಕೊಳ್ಳೋಣ.

“ಓಂ” ಎಂಬುದು ಒಂದು ಪವಿತ್ರ ಬೀಜಾಕ್ಷರ ಮಂತ್ರ. ಹಿಂದೂ ಧರ್ಮದಲ್ಲಿ ಇದಕ್ಕೆ ಪವಿತ್ರ ಸ್ಥಾನ ಇದೆ. ‘ಓಂ’ ಎನ್ನುವುದು ಒಂದು ಸಂಯುಕ್ತಾಕ್ಷರ.

‘ಅ’ , ‘ಉ’ ‘ಮ್’ ಇವುಗಳ ಸಂಗಮವೇ ಓಂಕಾರ. (ಅ+ಉ+ಮ್ = ಓಂ).
‘ಅ’ಕಾರ ಶಬ್ದವು ಗಂಟಲಿಂದ ಉಗಮವಾಗಿ, ಬಾಯಿ ಮತ್ತು ಗಂಟಲಿನ ಮಧ್ಯಂದ ‘ಉ’.
ಬಾಯಿ ಮುಚ್ಚಿದರೆ ಹೊರಬರುವುದೇ ‘ಮ್’.

ಪ್ರತಿಯೊಂದು ಮಂತ್ರವೂ ಓಂ ಎಂಬ ಪ್ರಣವಾಕ್ಷರದಿಂದಲೇ ಶುರುವಾಗುತ್ತದೆ.ಯಾವ ಕಾರ್ಯವನ್ನು ಮಾಡುವುದಾದರೂ ಮೊದಲು ಓಂಕಾರ ಜಪಿಸಿದರೆ ಅದರ ನಾದ ನಮ್ಮ ಅಂತರಾಳಲ್ಲಿ ಹೊಕ್ಕಿ ಶುಭ ಉಂಟುಮಾಡುತ್ತದೆ. ಓಂಕಾರ ಜಪವು ಘಂಟಾನಾದ ಶಬ್ದಕ್ಕೆ ಹೋಲಿಸಿದ್ದಾರೆ. ಇದು ಮನಸ್ಸಿಗೆ  ಆಹ್ಲಾದಕರವಾದ ಪ್ರಶಾಂತತೆ ಅನುಭವ ಉಂಟು ಮಾಡಿ ಶರೀರವನ್ನು ಪರಮಾನಂದವಾಗಿ ಪ್ರಚೋದಿಸುತ್ತದೆ. ಹಾಗಾಗಿ ಓಂಕಾರವನ್ನು  ಶ್ರೇಯಸ್ಸಿನ ಚಿಹ್ನೆಯಾಗಿ ಗುರುತಿಸಲಾಗಿದೆ.

ಹಿಂದೂ ಧರ್ಮದ ಅನುಸಾರ ‘ಓಂ’ ಗೆ ತನ್ನದೇ ಆದ ಮಹತ್ವ ಇದೆ. ‘ಓಂ’ ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ ‘ಓಂ’ ಉಚ್ಛಾರ ಮಾಡದೇ ಮಂತ್ರ ಪೂರ್ಣವಾಗುವುದಿಲ್ಲ.

ಓಂ ಉಚ್ಚರಣೆ ಮಾಡುವುದರಿಂದ ಸರ್ವ ರೋಗ ನಿವಾರಣೆ ಅಗುವುದು. ಬನ್ನಿ  ಯಾವಯಾವ ರೋಗಗಳು ನಿವಾರಣೆ ಅಗುವುದೆಂದು ತಿಳಿದುಕೊಳ್ಳೋಣ.

೧. ‘ಓಂ’ ಮತ್ತು ಥಾಯ್‌ರಾಯ್ಡ್‌ : ‘ಓಂ’ ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥಾಯ್‌ರಾಯ್ಡ್‌ ಗ್ರಂಥಿ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

೨. ಓಂ ಮತ್ತು ಭಯ : ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು ‘ಓಂ’ ಎಂದು ಉಚ್ಛರಿಸಿ.

೩. ‘ಓಂ’ ಮತ್ತು ಒತ್ತಡ : ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

೪. ‘ಓಂ’ ಮತ್ತು ರಕ್ತ ಸಂಚಾರ : ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ‘ಓಂ’ ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

೫. ‘ಓಂ’ ಮತ್ತು ಪಚನ ಕ್ರಿಯೆ : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.

೬. ‘ಓಂ’ ಮತ್ತು ಸ್ಫೂರ್ತಿ : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.

೭. ‘ಓಂ’ ಮತ್ತು ಸುಸ್ತು : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ ಓಂ ಉಚ್ಛಾರ ಮಾಡುವುದು.

೮. ‘ಓಂ’ ಮತ್ತು ನಿದ್ರೆ : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

೯. ‘ಓಂ’ ಮತ್ತು ಶ್ವಾಸಕೋಶ : ಓಂ ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.

೧೦. ‘ಓಂ’ ಮತ್ತು ಬೆನ್ನೆಲುಬು : ಓಂ’ ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ.

LEAVE A REPLY

Please enter your comment!
Please enter your name here