ಈ ಲಕ್ಷಣಗಳು ಕಂಡು ಬಂದರೆ ಹೃದಯಾಘಾತವಾಗಬಹುದು

0
96

ಈ ಲಕ್ಷಣಗಳು ಕಂಡು ಬಂದರೆ ಹೃದಯಾಘಾತವಾಗಬಹುದು ಏನೆಂದು ತಿಳಿಯಲು ಮುಂದೆ ಓದಿ.

ಈಗಿನ ಕಲುಷಿತ ವಾತಾವರಣಕ್ಕೆ ಮನುಷ್ಯನ ಖಾಯಿಲೆಗಳು ತುಂಬಾ ಜಾಸ್ತಿಯಾಗಿದೆ. ಅದರಲ್ಲೂ ಹೃದಯಾಘಾತ ಹಾಗೂ ಹೃದಯಸಂಬಂಧಿ ಕಾಯಿಲೆಗೆಳು ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗುತ್ತಿದೆ ಎಂಬ ಮಾಹಿತಿಯು ಎಲ್ಲರೂ ಅರಿತಿರುವಂತದ್ದು. ಇಡಿಯ ದೇಹಕ್ಕೆ ರಕ್ತವನ್ನು ಹೃದಯ ಪೂರೈಸಿದರೂ, ಹೃದಯಕ್ಕೇ ರಕ್ತ ಒದಗಿಸುವ ಪ್ರಮುಖ ರಕ್ತನಾಳವಾದ coronary artery ಯಲ್ಲಿಯೇ ರಕ್ತದ ಪರಿಚಲನೆಗೆ ತಡೆ ಇರುವುದು ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣಗಳು ಎನ್ನಬಹುದು.

ಇತ್ತೀಚಿನ ವರ್ಷಗಳಲ್ಲಿ ಹೃದಯ ಸ್ತಂಭನದಿಂದ ಚಿಕ್ಕ ವಯಸ್ಸಿನವರಿಂದ ಹಿಡಿದು ದೊಡ್ಡವರಿಗೂ ಸಹ ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಮತ್ತು ಹಠಾತ್ತಾಗಿ ಸಾವು ಸಂಭವಿಸುತ್ತಿದೆ. ಹೃದಯದ ನಾಳಗಳಲ್ಲಿ ತೊಂದರೆ ಇದ್ದರೆ ದೇಹವೇ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳನ್ನು ಗಮನಿಸಿ ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಹಾಗೂ ತಕ್ಷಣ ಅಗತ್ಯವಿರುವ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಮಾರಕ ರೋಗದಿಂದ ರಕ್ಷಣೆ ಪಡೆಯಬಹುದು.

ಹೃದಯ ರೋಗದ ಲಕ್ಷಣಗಳು ಕಂಡು ಬಂದಾಗ ಎಚ್ಚರಿಕೆ ವಹಿಸಿ

ಒಂದು ವೇಳೆ ನಿಮ್ಮ ಆಯಸ್ಸು ಅರವತ್ತು ದಾಟಿದ್ದು ಸ್ಥೂಲಕಾಯ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳಿದ್ದರೆ ಹೃದಯಾಘಾತದ ಸಾಧ್ಯತೆಗಳನ್ನು ಈ ಸ್ಥಿತಿಗಳು ಹೆಚ್ಚಿಸುತ್ತವೆ. ಆದ್ದರಿಂದ ಹೃದಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಹೃದಯಾಘಾತದ ಮುನ್ಸೂಚನೆಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡುತ್ತೇವೆ. ಒಂದು ವೇಳೆ ಇವುಗಳಲ್ಲಿ ಯಾವುದಾದರೊಂದನ್ನು ಅನುಭವಿಸಿದ್ದರೂ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಹೃದಯಾಘಾತದ ಪ್ರಮುಖ ಸೂಚನೆಗಳು ಒಂದು ತಿಂಗಳ ಮೊದಲೇ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಸೂಚನೆಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು.

ದೀರ್ಘಕಾಲದ ನಿದ್ರಾಹೀನತೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು

ಬೆನ್ನು, ಕುತ್ತಿಗೆ, ಕೆಳದವಡೆ ಹಾಗೂ ತೋಳುಗಳಲ್ಲಿ ನೋವು ಈ ಭಾಗದಲ್ಲಿ ನಿಧಾನವಾಗಿ ಏರುತ್ತಾ ಹೋದಂತೆ, ಆಗಾಗ ಬರುವಂತೆ, ಚಿಕ್ಕದಾಗಿ ನೋವು ಕಾಣಿಸಿಕೊಳ್ಳುತ್ತದೆ.

ಆಗಾಗ ಹೊಟ್ಟೆನೋವು, ಅಥವಾ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಒತ್ತಡ ಹಾಗೂ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ.

ಸುಸ್ತು ಹೆಚ್ಚುವುದು, ವಿಶ್ರಾಂತಿ ಪಡೆದರೂ ಸುಸ್ತೇ ಸುಸ್ತು, ನಾಲ್ಕು ಹೆಜ್ಜೆ ಇಡಲಿಕ್ಕೂ ಸಾಧ್ಯವಿಲ್ಲದಷ್ಟು ನಿತ್ರಾಣತೆ ಆವರಿಸಿ ನಿತ್ಯದ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲದಂತೆ ಆಗುತ್ತದೆ.

ಸಾಮಾನ್ಯವಾಗಿ ಹೃದಯದ ಭಾಗದಲ್ಲಿ ನೋವಿದ್ದರೆ ಮಾತ್ರವೇ ಹೃದಯಾಘಾತದ ಸೂಚನೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಹೃದಯಾಘಾತಕ್ಕೂ ಮುನ್ನ ಇಡಿಯ ಎದೆಯ ಭಾಗದಲ್ಲಿ ಸೂಜಿಗಳು ಚುಚ್ಚಿದಂತೆ ನೋವಾಗುತ್ತದೆ.

ಇಂತಹ ಲಕ್ಷಣಗಳು ಕಂಡು ಬಂದರೆ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.

LEAVE A REPLY

Please enter your comment!
Please enter your name here