ಈ ಸೂಚನೆಗಳು ಕಂಡು ಬಂದ್ದಲ್ಲಿ ನಿಮಗೆ ಹಾರ್ಟ್ ಅಟ್ಯಾಕ್ ಸ್ವಲ್ಪ ಸಮಯದಲ್ಲೇ ಆಗುತ್ತೆ ಅಂತ ಅರ್ಥ

0
157

ಇಂದಿನ ವೇಗದ ಜೀವನದಲ್ಲಿ ಹೃದಯಾಘಾತ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ. ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಈ ಲೇಖನದಲ್ಲಿ ಭಾರತೀಯ ಆರೋಗ್ಯ ಇಲಾಖೆ ಪ್ರಕಾರ ಹೃದಯಾಘಾತ ಎಂದರೆ ಏನು ಮನುಷ್ಯನಿಗೆ ಹೃದಯಾಘಾತದ ಸಮಯದಲ್ಲಿ ಏನೆಲ್ಲಾ ಮುನ್ಸೂಚನೆಗಳು ಸಿಗುತ್ತವೇ ಎಂದು ತಿಳಿಸಿಕೊಳ್ಳುತ್ತೇವೆ. ಭಾರತೀಯ ಆರೋಗ್ಯ ಇಲಾಖೆಯ ಪ್ರಕಾರ ಹೃದಯಾಘಾತ ಎಂದರೇನು ಎಂದು ಸುಲಭವಾಗಿ ಮೊದಲು ಅರ್ಥ ಮಾಡಿಕೊಳ್ಳೋಣ. ಮನುಷ್ಯನ ಹೃದಯ ಆರೋಗ್ಯಕರವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಆಮ್ಲಜನಕ ಸಮೃದ್ಧವಾಗಿರುವ ರಕ್ತದ ಪೂರೈಕೆ ಅವಶ್ಯಕವಾಗಿ ಬೇಕಾಗಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಎದೆಯ ಮಧ್ಯ ಭಾಗದಿಂದ ಸ್ವಲ್ಪ ಎಡ ಭಾಗಕ್ಕೆ ಮನುಷ್ಯರಿಗೆ ಹೃದಯ ಕಂಡುಬರುತ್ತದೆ. ಹಾಗೆಯೇ ಪ್ರತಿಸಾರಿ ಹೃದಯದ ಬಡಿತ ಆದಾಗಲು ಮನುಷ್ಯನ ದೇಹಕ್ಕೆ ಬೇಕಾಗಿರುವ ಅವಶ್ಯಕವಾಗಿರುವ ರಕ್ತವನ್ನು ಹೃದಯ ತನ್ನ ಮೂಲಕವೇ ಹೊರಹಾಕುತ್ತದೆ.

ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಹೇಗೆ ರಕ್ತದ ಅವಶ್ಯಕತೆ ಇದೆಯೋ ಅದೇ ರೀತಿ ಹೃದಯಕ್ಕೂ ಸಹ ರಕ್ತದ ಅವಶ್ಯಕತೆ ಇದೆ. ಆರೋಗ್ಯವಂತ ಮನುಷ್ಯನಲ್ಲಿ ಹೃದಯಬಡಿತ ವಯಸ್ಸಿಗೆ ತಕ್ಕಂತೆ ಆರೋಗ್ಯಕ್ಕೆ ತಕ್ಕಂತೆ ಬದಲಾಗುತ್ತದೆ. ವಿಶ್ವ ಆರೋಗ್ಯ ಇಲಾಖೆ ಪ್ರಕಾರ ಆರೋಗ್ಯವಂತ ಮನುಷ್ಯನ ಹೃದಯ ನಿಮಿಷಕ್ಕೆ ಸುಮಾರು ಅರವತ್ತರಿಂದ ನೂರು ಬಾರಿ ಬಡೆದುಕೊಳ್ಳುತ್ತದೆ. ಅಂದರೆ ದಿನದ ಲೆಕ್ಕದಲ್ಲಿ ಹೃದಯ ಒಂದು ಲಕ್ಷಕ್ಕಿಂತಲೂ ಹೆಚ್ಚು ಬಾರಿ ಆರೋಗ್ಯವಂತರಲ್ಲಿ ಬಡೆದುಕೊಳ್ಳುತ್ತದೆ. ಖಾಸಗಿ ಹೃದಯ ನಿಮಿಷಕ್ಕೆ ಎಪ್ಪತ್ತೆರದು ಬಾರಿ ಬಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಈ ಹೃದಯದ ಲೆಕ್ಕಾಚಾರ ಮೊದಲೇ ಹೇಳಿದಂತೆ ವಯಸ್ಸು ಆರೋಗ್ಯದ ಮೇಲೆ ಅರವತ್ತರಿಂದ ನೂರರವರಗೆ ಬಡೆದುಕೊಳ್ಳುತ್ತದೆ. ಇದೇ ರೀತಿ ಪ್ರತಿಸಾರಿ ಹೃದಯ ಬಡಿದುಕೊಂಡಾಗಲು ಮನುಷ್ಯನ ದೇಹದ ಬೇರೆ ಅಂಗಗಳಿಗೆ ಬೇಕಾದ ರಕ್ತವನ್ನು ಹೃದಯದ ಮೂಲಕವೇ ಪಂಪ್ ಮಾಡುತ್ತದೆ ಅಥವಾ ಹೊರಹಾಕುತ್ತದೆ.

ಸರಳವಾಗಿ ಹೃದಯಾಘಾತ ಏನು ಅಂದರೆ ಯಾವಾಗ ಮನುಷ್ಯನ ಹೃದಯ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಹಕ್ಕೆ ಅಗತ್ಯವಿರುವ ರಕ್ತವನ್ನು ತನ್ನ ಮೂಲಕ ಹೊರಹಾಕಲು ವಿಫಲವಾಗುತ್ತದೋ ಅಂತಹ ಪ್ರಕ್ರಿಯೆಯನ್ನು ಹೃದಯ ವ್ಯೆಪಲ್ಯ ಹಾಗೂ ಅದರಿಂದ ಮಾನವನ ಮೇಲೆ ಉಂಟಾಗುವ ಆರೋಗ್ಯದ ಕೆಟ್ಟ ಪರಿಣಾಮವನ್ನು ಹೃದಯಾಘಾತ ಎಂದು ಕರೆಯುತ್ತಾರೆ. ಇನ್ನು ಹೃದಯಾಘಾತದ ಲಕ್ಷಣಗಳು ಅಥವಾ ಮುನ್ಸೂಚನೆಗಳು ಯಾವ್ಯಾವುದು ಎಂದು ತಿಳಿಯೋಣ. ಭಾರತೀಯ ಆರೋಗ್ಯ ಇಲಾಖೆ ಪ್ರಕಾರ ಮುಂದೆ ಹೇಳಲಾಗಿರುವ ಎಲ್ಲಾ ಸಮಸ್ಯೆಗಳೂ ಸಹ ಹೃದಯಾಘಾತದ ಮುನ್ಸೂಚನೆಗಳಾಗಿವೆ. ಎದೆಯ ಭಾಗದಲ್ಲಿ ಒತ್ತಡ ಎದೆ ಅಥವಾ ಹೃದಯ ಭಾಗದಲ್ಲಿ ಬಿಗಿಯಾಗಿ ಹಿಡಿದುಕೊಂಡಂತಹ ಅನುಭವ ಯಾವುದೇ ರೀತಿಯ ಎದೆಯ ನೋವು ಹೃದಯ ಹಿಸುಕುವಂತಹ ಅನುಭವ ಎದೆಯ ಮಧ್ಯ ಭಾಗದಲ್ಲಿ ಕಾಣುವಂತಹ ಈ ಮೇಲಿನ ನೋವಿನ ಅನುಭವ ನಿಧಾನವಾಗಿ ಕುತ್ತಿಗೆ ಹಿಂಬಾಗ ಮತ್ತು ಕ್ಯೆಗಳಿಗೆ ಹರಡುತ್ತದೆ.

ಇದು ಹೃದಯಾಘಾತದ ದೊಡ್ಡ ಹಾಗೂ ಪ್ರಮುಖ ಮುನ್ಸೂಚನೆ. ಇವುಗಳ ಜೊತೆಗೆ ಇನ್ನಷ್ಟು ಮುನ್ಸೂಚನೆಗಳು ಏನೆನೆಂದು ತಿಳಿದುಕೊಳ್ಳೋಣ. ಹೃದಯಾಘಾತದಿಂದ ಉಂಟಾಗುವ ನೋವು ಎರಡು ಕ್ಯೆಗಳು ಹಲ್ಲಿನ ದವಡೆ ಹಾಗೂ ತಲೆ ಕುತ್ತಿಗೆ ಹಿಂಭಾಗದ ಕಡೆಗೆ ಹರಡುತ್ತದೆ. ಆದರೆ ಕೆಲವರಲ್ಲಿ ಹೃದಯದ ನೋವೇ ಬರದೆ ಕ್ಯೆಗಳು ಹಲ್ಲಿನ ದವಡೆ ಹಾಗೂ ತಲೆ ಮತ್ತು ಕುತ್ತಿಗೆ ಹಿಂಭಾಗದ ನೋವು ಕಾಣಿಸಿಕೊಂಡು ಹೃದಯಘಾತವಾಗಿದೆ ಎಂದು ವಿಶ್ವ ಆರೋಗ್ಯ ಇಲಾಖೆ ವರದಿ ಮಾಡಿದೆ. ಹೆಚ್ಚಾಗಿ ಸುಸ್ತು ಯಾವುದೇ ನಿರ್ದಿಷ್ಟ ಅಥವಾ ಪ್ರಮುಖ ಕಾರಣವಿಲ್ಲದೆ ನಿಶ್ಯಕ್ತಿ ಅಥವಾ ಹೆಚ್ಚಾಗಿ ಸುಸ್ತು ಕಂಡುಬಂದರೆ ಅದನ್ನು ಸಹ ಹೃದಯಾಘಾತದ ಲಕ್ಷಣಗಳು ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಈ ಅನುಭವ ಹೃದಯಾಘಾತಕ್ಕಿಂತ ಕೆಲವು ದಿನಗಳ ಮುಂಚೆಯೇ ಮನುಷ್ಯರಲ್ಲಿ ಕಾಣುತ್ತದೆ. ಇಂತಹ ಅನುಭವ ಆಗುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ದೇಹದಲ್ಲಿ ಊತ ಹೃದಯವು ಸಹಜವಾಗಿ ರಕ್ತವನ್ನು ಹೊರಹಾಕದಿದ್ದರೆ ಮನುಷ್ಯನ ಕಾಲಿನ ಪಾದಗಳು ಮತ್ತು ಕ್ಯೆಗಳು ಮತ್ತು ಹೊಟ್ಟೆ ಇನ್ನಿತರ ಭಾಗಗಳಲ್ಲಿಯೂ ಊತ ಕಂಡುಬರುತ್ತದೆ. ಇದು ಕೂಡ ಹೃದಯಾಗತದ ಲಕ್ಷಣ ಕೂಡಲೇ ವ್ಯೆದ್ಯರನ್ನು ಭೇಟಿ ಮಾಡಿ. ಇಲ್ಲದ ಶೀತ ಹೃದಯದಲ್ಲಿ ಸರಿಯಾದ ಆಮ್ಲಜನಕದ ಪೂರೈಕೆ ಆಗದಿದ್ದರೆ ಶೀತ ನಿಲ್ಲುವುದಿಲ್ಲ ದೀರ್ಘಕಾಲದಿಂದ ಶೀತ ನಿಲ್ಲುತ್ತಿಲ್ಲ ಎಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಈ ಲೇಖನವನ್ನು ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here