ಈ ಹಣ್ಣಿನಲ್ಲಿರುವ ಪ್ರಯೋಜನ ತಿಳಿದರೆ ನೀವೂ ಇದನ್ನೇ ಮಾಡ್ತೀರ.

0
63

ಪಪ್ಪಾಯಿ ಹಣ್ಣು ತಿನ್ನೋದ್ರಿಂದ ಏನೆಲ್ಲಾ ಉಪಯೋಗ ಇದೆ ನೋಡಿ.

ಪಪ್ಪಾಯಿ ಹಣ್ಣು ಜೀರ್ಣಕಾರಿಯಾಗಿದ್ದು ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಪರಂಗಿ ಹಣ್ಣು ಹಿತ್ತಲಲ್ಲಿ ಬೆಳೆಯುವ ಹಣ್ಣು.ಇದು ಪೋಷಕಾಂಶಗಳನ್ನು ಹೊಂದಿದ ಹಣ್ಣು. ಇದರಲ್ಲಿ ನಾರಿನಂಶ ಹೇರಳವಾಗಿದೆ. ಜೊತೆಗೆ ಕೆರೋಟಿನ್ , ವಿಟಮಿನ್ ಸಿ , ಖನಿಜ ಲವಣಗಳು ಹೇರಳವಾಗಿದೆ.ಅಷ್ಟೆ ಅಲ್ಲ ದೆ ವಿಟಮಿನ್ ಎ ಪೊಟಾಷಿಯಂ ಸಹ ಬಚ್ಚಿಟ್ಟು ಕೊಂಡಿದೆ. ಹಣ್ಣು ಹೃದಯದ ಆರೋಗ್ಯ ಕಾಪಾಡುತ್ತದೆ. ಬೀಜ ಹಾಗೂ ಎಳೆಗಳು ಚರ್ಮ ಸಂಬಂಧಿತ ಕಾಯಿಲೆಗಳು, ಹೊಟ್ಟೆಯ ಹುಳುವನ್ನು ಸಹ ದೂರ ಮಾಡುತ್ತದೆ.

ನಿಮ್ಮನ್ನು ರೋಗಿಯನ್ನಾಗಿ ಮಾಡುವ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಪಪ್ಪಾಯ ಒದಗಿಸುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಪಪ್ಪಾಯದಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣವು ಮಧುಮೇಹಿಗಳಿಗೆ ತಿನ್ನಲು ಯೋಗ್ಯವಾಗಿದೆ. ಮಧುಮೇಹ ಇಲ್ಲದವರೂ ಕೂಡ ಅದರಿಂದ ರಕ್ಷಣೆ ಹೊಂದಲು ಇದನ್ನು ನಿಯಮಿತವಾಗಿ ಸೇವಿಸಬಹುದು. ಯವ್ವೌನವನ್ನು ಪ್ರತಿಯೊಬ್ಬರೂ ಬಯಸುವುದು ಸಾಮಾನ್ಯ. ಆದರೆ ಇದನ್ನು ಹೇಳಿದಷ್ಟು ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಪಪ್ಪಾಯವನ್ನು ದಿನವೂ ತಿನ್ನುವುದು ನಿಮ್ಮ ವಯಸ್ಸನ್ನು 5 ವರ್ಷ ಕಡಿಮೆಯಾದಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಬೇಟಾ ಕ್ಯಾರಟೀನ್ ರೇಡಿಕಲ್ ಹಾನಿಯಿಂದ ತ್ವಚೆಯನ್ನು ರಕ್ಷಿಸುತ್ತದೆ ಮತ್ತು ನೆರಿಗೆಗಳು ಹಾಗೂ ಇತರ ಮುಪ್ಪಿನ ಲಕ್ಷಣಗಳನ್ನು ತೊಡೆದುಹಾಕುತ್ತದೆ.

ಕೂದಲಿನ ಆರೋಗ್ಯಕ್ಕೆ, ಹದಿನೈದು ದಿನಗಳಿಗೊಮ್ಮೆ, ಚೆನ್ನಾಗಿ ಹಣ್ಣಾಗಿರುವ ಪಪ್ಪಾಯ ಸಿಪ್ಪೆ, ತಿರುಳು, ಬೀಜ ಸಮೇತ ನುಣ್ಣಗೆ ಅರೆಯಬೇಕು. ಇದನ್ನು ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತೊಳೆಯಬೇಕು. ಇದರಿಂದ ಕೂದಲು ಕಾಂತಿಯುಕ್ತವಾಗುತ್ತವೆ. ಅತಿಯಾದ ತೂಕವನ್ನು ಹೊಂದಿರುವವರು ತಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯವನ್ನು ಸೇರಿಸುವುದು ಅತ್ಯವಶ್ಯಕ. ಕ್ಯಾಲೋರಿ ಕಡಿಮೆ ಇರುವ ಈ ಹಣ್ಣು ನಿಮ್ಮ ಕರುಳಿನ ಚಲನೆಯನ್ನು ತೆರವುಗೊಳಿಸಿ ತೂಕ ಇಳಿಕೆಯಾಗುವಂತೆ ಮಾಡುತ್ತದೆ. ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಗಾಗ್ಗೆ ಪಪ್ಪಾಯಿ ಸಿಪ್ಪೆಯಿಂದ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿದರೆ ಮುಖದ ಕಲೆಗಳು ನಿವಾರಣೆಯಾಗುವುದು. ಮೊಸರು ಮತ್ತು ಪಪ್ಪಾಯ ಮಿಕ್ಸ್ ಮಾಡಿದ ಪೇಸ್ಟನ್ನು ಹೇರ್ ಪ್ಯಾಕ್ ಮಾಡಿ. ಅರ್ಧ ಗಂಟೆ ಬಳಿಕ ಕಡಲೆ ಹಿಟ್ಟು ಉಪಯೋಗಿಸಿ ತೊಳೆಯಿರಿ. ಹೊಟ್ಟು ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.ಪಪ್ಪಾಯಿ ಬೀಜ ಹಾಗೂ ಸ್ವಲ್ಪ ಪಪ್ಪಾಯಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ಒಂದು ಚಮಚ ಜೇನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿದರೆ ಹೊಳಪು ಮತ್ತಷ್ಟು ಹೆಚ್ಚುವುದು.  ಅರೆಪಕ್ವ ಹಣ್ಣನ್ನು ತುರಿದು ಗಾಯಗಳಿಗೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ. ಪಪ್ಪಾಯ ಕಾಯಿಯ ರಸ, ಜೇನುತುಪ್ಪ ಒಂದೊಂದು ಚಮಚವನ್ನು ಬಿಸಿನೀರಿಗೆ ಹಾಕಿ ಸೇವಿಸಿದರೆ ಜಂತು ಹುಳಗಳ ನಿವಾರಣೆಯಾಗುತ್ತದೆ. ಕಾಯಿಯನ್ನು ಜಜ್ಜಿ ಹಿಂಡಿ ರಸ ತೆಗೆದು ಹಚ್ಚಿದರೆ ಚಿಬ್ಬು  ಹಾಗೂ ಚರ್ಮ ರೋಗಗಳು ವಾಸಿಯಾಗುತ್ತವೆ. ನಿತ್ಯ ಪಪ್ಪಾಯ ಸೇವಿಸುವುದರಿಂದ ಮೂತ್ರ ಕೋಶದಲ್ಲಿ ಕಲ್ಲುಗಳುಂಟಾಗುವುದಿಲ್ಲ. ಮೂತ್ರ ನಾಳದಲ್ಲಿ ಕಲ್ಲುಗಳಿದ್ದರೆ ಇದರ ಸೇವನೆ ಒಳ್ಳೆಯದು. ಅಲ್ಲದೆ ಮೂತ್ರಜನಕವಾಗಿಯೂ ಕೆಲಸ ಮಾಡುತ್ತದೆ. ಹಣ್ಣು, ಹಾಲು, ಜೇನುತುಪ್ಪ ಸೇರಿಸಿ ಕೊಟ್ಟರೆ ಮಕ್ಕಳಿಗೆ ಉತ್ತಮ ಟಾನಿಕ್ ಹಾಗೂ ನರದೌರ್ಬಲ್ಯಕ್ಕೂ ಒಳ್ಳೆಯದು. ಒಂದು ಚಮಚ ಬೀಜದ ರಸ, ಹತ್ತು ಹನಿ ನಿಂಬೆರಸದೊಂದಿಗೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ನೀಡುವುದರಿಂದ ಅಥವಾ ಹಣ್ಣಿನೊಂದಿಗೆ ಕೆಲವು ಬೀಜ ಸೇವನೆಯಿಂದ ಜಂತು ಹುಳಗಳನ್ನು ನಿವಾರಿಸಬಹುದು.

ಎಲೆಯನ್ನು ಬಿಸಿಮಾಡಿ ನೋವಿರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಆಹಾರದ ನಂತರ ಪ್ರತಿದಿನ ಹಣ್ಣನ್ನು ಸೇವಿಸಿದರೆ ಜೀರ್ಣಕಾರಿ ಹಾಗೂ ಮಲಬದ್ಧತೆ ನಿವಾರಣೆ. ಯಕೃತ್ತಿನ ತೊಂದರೆಗೆ ಒಂದು ಚಮಚ ಪಪ್ಪಾಯ ಕಾಯಿಯ ಹಾಲಿಗೆ ಅರ್ಧ ಲೋಟ ಬಿಸಿನೀರು ಸೇರಿಸಿ ಊಟಕ್ಕೆ ಮುಂಚೆ ಸೇವಿಸಬೇಕು. ಪರಂಗಿ ಹಣ್ಣಿನ ತಿರುಳನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ಬೆಚ್ಚನೆಯ ನೀರಿನಿಂದ ತೊಳೆದರೆ ಮೊಡವೆ ನಿವಾರಣೆಯಾಗುತ್ತದೆ. ರಾತ್ರಿ ಕುರುಡಿನಿಂದ ಬಳಲುವವರು ಈ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. ಬಾಣಂತಿಯರು ಸೇವಿಸುವುದರಿಂದ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ. ಬೊಜ್ಜು ನಿವಾರಣೆಗೆ, ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದರೆ ಈ ಹಣ್ಣಿನ ಸೇವನೆ ಒಳ್ಳೆಯದು ಮತ್ತು ರೋಗ ನಿರೋಧಕಶಕ್ತಿ ಹೆಚ್ಚಿಸುತ್ತದೆ. ಮುಟ್ಟು ಸರಿಯಾಗಿ ಆಗದ ಮಹಿಳೆಯರು ಬೀಜವನ್ನು ಪುಡಿಮಾಡಿ ಜೇನುತುಪ್ಪದೊಂದಿಗೆ ಸೇವಿಸಬೇಕು.

LEAVE A REPLY

Please enter your comment!
Please enter your name here