ಕರ್ಪೂರದ ಉಪಯೋಗಗಳ ಬಗ್ಗೆ ತಿಳಿದರೆ ನೀವು ಅಚ್ಚರಿ ಪಡ್ತೀರ

0
22

ಕರ್ಪೂರವನ್ನು ನಾವು ದೇವಸ್ಥಾನಗಳಲ್ಲಿ ಮನೆಗಳಲ್ಲಿ ಅಥವಾ ಯಾವುದೇ ಶುಭ ಸಮಾರಂಭಗಳಲ್ಲಿ ಪೂಜೆ ಕಾರ್ಯಗಳಿಗೆ ಉಪಯೋಗಿಸುತ್ತೇವೆ. ಆದರೆ ಕರ್ಪೂರ ಒಬ್ಬರೇ ಪೂಜೆಗೆ ಸೀಮಿತವಾಗಿರದೆ ಆರೋಗ್ಯದ ವಿಚಾರದಲ್ಲಿ ಕೂಡ ಇದು ಬಹಳ ಉಪಯುಕ್ತವಾದ ಪದಾರ್ಥವಾಗಿದೆ. ಅದು ಹೇಗೆ ಅಂತೀರಾ ಇದನ್ನು ಪೂರ್ತಿಯಾಗಿ ಓದಿ. ಕರ್ಪೂರದ ಬಗ್ಗೆ ಹೇಳುವುದಾದರೆ ಕರ್ಪೂರವನ್ನು ಸಿನಮೋಮಮ್ ಕ್ಯಾoಪೋರ ಎಂಬ ಮರದ ತೊಗಟೆಯಿಂದ ತಯಾರಿಸುತ್ತಾರೆ. ಕರ್ಪೂರವನ್ನು ಪೂಜೆ ಕಾರ್ಯಗಳಲ್ಲಿ ಬಿಟ್ಟು ಬೇರೆ ಉಪಯೋಗಗಳ ಬಗ್ಗೆ ಹೇಳುವುದಾದರೆ. ಮನೆಯಲ್ಲಿ ಇರುವೆಗಳು ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಕರ್ಪೂರವನ್ನು ನೀರಿನಲ್ಲಿ ಮಿಶ್ರಣ ಮಾಡಿ ಆ ನೀರನ್ನು ಇರುವ ಜಾಗದಲ್ಲಿ ಹಾಕಿರಿ ಇದರಿಂದ ಮನೆಯಲ್ಲಿ ಇರುವಗಳ ಸಮಸ್ಯೆ ಕಡಿಮೆಯಾಗುತ್ತದೆ.

ಮಲಗುವ ನಿಮ್ಮ ಹಾಸಿಗೆಯಲ್ಲಿ ಹುಳಗಳು ಇದ್ದರೆ ಮಸ್ಲಿನ್ ಎಂಬ ಚೀಲದಲ್ಲಿ ಕರ್ಪೂರವನ್ನು ಹಾಕಿ ಹಾಸಿಗೆಯ ಕೆಳ ಭಾಗದಲ್ಲಿ ಇಡುವುದರಿಂದ ಹಾಸಿಗೆ ಇಲ್ಲಿರುವ ಹುಳಗಳು ಸಾಯುತ್ತವೆ. ಮುಂದೆ ಮತ್ತೆ ಹಾಸಿಗೆಯಲ್ಲಿ ಹುಳಗಳು ಬರುವುದಿಲ್ಲ. ಮುಖದ ಮೇಲೆ ಮೊಡವೆಗಳು ಸಮಸ್ಯೆ ಹೆಚ್ಚಾಗಿದ್ದಾರೆ ಹೊರಗಡೆ ಸಿಗುವ ಅನೇಕ ರಾಸಾಯನಿಕ ಕ್ರೀಮ್ ಗಳನ್ನು ಹಚ್ಚುವ ಬದಲು ನೈಸರ್ಗಿಕವಾಗಿ ಮನೆಯಲ್ಲೇ ಔಷಧಿಯನ್ನು ತಯಾರು ಮಾಡಿಕೊಳ್ಳಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಮನೆಯಲ್ಲೇ ಸಿಗುವ ಕರ್ಪೂರವನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಂಡು ನುಣ್ಣಗೆ ಆಗುವಂತೆ ಮಾಡಿಕೊಳ್ಳಿ.

ನಂತರ ಈ ಕರ್ಪೂರದ ಪುಡಿಯನ್ನು ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಜೊತೆ ಮಿಶ್ರಣ ಮಾಡಿ ಪೇಸ್ಟ್ ರೀತಿ ಮಾಡಿ ಕೊಳ್ಳಿ ನಂತರ ಈ ಎಣ್ಣೆಯಿಂದ ನಮ್ಮ ಮುಖವನ್ನು ಪ್ರತಿನಿತ್ಯ ಮಸಾಜ್ ಮಾಡುವುದರಿಂದ ಮುಖದ ಮೇಲಿನ ಮೋಡವೆಗಳು ಕಾಲ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ತಲೆ ಕೂದಲು ಉದುರುವ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಕೊಬ್ಬರಿ ಎಣ್ಣೆಯ ಜೊತೆ ಕರ್ಪೂರವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿರಿ ನಂತರ ಇದು ತಣ್ಣಗಾದ ಮೇಲೆ ತಲೆಗೆ ಹಚ್ಚಿಕೊಳ್ಳಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಇದನ್ನು ಮಾಡುವುದರಿಂದ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಕಜ್ಜಿ ಅಥವಾ ತುರಿಕೆ ಸಮಸ್ಯೆ ಕಂಡುಬಂದಲ್ಲಿ ಕರ್ಪೂರವನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ನೀರಿನಲ್ಲಿ ಮಿಶ್ರಣ ಮಾಡಿರಿ ನಂತರ ಇದನ್ನು ಅಲರ್ಜಿ ಆಗಿರುವ ಚರ್ಮದ ಜಾಗದಲ್ಲಿ ಅಚ್ಚರಿ ಇದರಿಂದ ಚರ್ಮದ ಅಲರ್ಜಿ ಸಮಸ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.

ಎಲ್ಲರೂ ಹೊಗೆಯಿಂದ ಪರಿಸರ ಮಾಲಿನ್ಯವಾಗುತ್ತದೆ ಎಂದು ಹೇಳುತ್ತಾರೆ ಆದರೆ ಕರ್ಪೂರ ದಿಂದ ಬರುವ ಹೊಗೆಯಿಂದ ಸಣ್ಣ ಸಣ್ಣ ಕ್ರಿಮಿಗಳು ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಮತ್ತು ಈ ಹೊಗೆಯಿಂದ ಆಸ್ತಮಾ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಕೈ ಕಾಲುಗಳ ನೋವಿನಿಂದ ಬಳಲುತ್ತಿದ್ದರೆ ಕೊಬ್ಬರಿ ಎಣ್ಣೆಯ ಜೊತೆ ಕರ್ಪೂರವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿರಿ ನಂತರ ಈ ಎಣ್ಣೆಯನ್ನು ಕೈ ಕಾಲುಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ತಿಳಿಯಿರಿ ನಾವು ಹೇಳಿರುವ ಮಾಹಿತಿ ಶುದ್ದ ಕರ್ಪೂರ ಬಳಕೆ ಮಾಡಿದ್ರೆ ಮಾತ್ರ ಈ ಲಾಭಗಳು ಪಡೆಯುತ್ತೀರಿ. ಇತ್ತೇಚೆಗೆ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬ್ರಾಂಡ್ ಕರ್ಪೂರಗಳು ಬಂದಿದೆ ಅದೆಲ್ಲವೂ ತಿಳಿದು ನಂತರ ಖರೀದಿ ಮಾಡಿರಿ ಇಲ್ಲವಾದಲ್ಲಿ ಯಾವುದೇ ಉಪಯೋಗ ಇಲ್ಲ. ಈ ಉಪಯುಕ್ತ ನಕಲು ಮಾಡಲು ಸಾಧ್ಯ ಇಲ್ಲವೇ ಆದ್ದರಿಂದ ಶೇರ್ ಮಾಡಿ ಮಾಹಿತಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here