ಕಿಡ್ನಿ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವಿಸಬಾರದು

0
68

ಮನುಷ್ಯನ ದೇಹದಲ್ಲಿನ ಅಂಗಗಳಲ್ಲಿ ಪ್ರಮುಖವಾದ ಅಂಗ ಕಿಡ್ನಿ ಸಹ ಇದು ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸಿ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕೆಲಸವನ್ನು ಮಾಡುತ್ತದೆ. ಯಾವುದೇ ಮಾನವ ತಮ್ಮ ದೇಹದ ಒಳಗಡೆ ಇರುವ ಅಂಗಾಂಗಗಳ ಕಡೆ ಹೆಚ್ಚಾಗಿ ಗಮನ ಕೊಡುವುದಿಲ್ಲ ಯಾವುದಾದರೂ ರೋಗ ನಮ್ಮನ್ನು ಕಾಡುತ್ತಿದೆ ಎಂದು ಗೊತ್ತಾದಾಗಲೇ ದೇಹದ ಒಳಗಿನ ಅಂಗಾಂಗಗಳ ಪ್ರಾಮುಖ್ಯತೆ ಹರಿವು ನಮಗೆ ಆಗುವುದು.

ಈ ಕಿಡ್ನಿ ಸಮಸ್ಯೆ ಆಗುವುದಕ್ಕೆ ಮುಖ್ಯ ಕಾರಣ ನಾವು ಸೇವಿಸುವ ಆಹಾರದಿಂದ ಹಾಗಾಗಿ ಕಿಡ್ನಿ ಸಮಸ್ಯೆ ಬಂದ ಮೇಲೆ ನೋವು ತಿನ್ನುವ ಬದಲು ಮೊದಲೇ ಮುಂಜಾಗ್ರತೆ ವಹಿಸಿಕೊಂಡರೆ ಕಿಡ್ನಿ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಬಹುದು. ಕಿಡ್ನಿ ಸಮಸ್ಯೆ ಬಂದ ಮೇಲು ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ ಅದು ಅವರ ಪ್ರಾಣಕ್ಕೆ ತೊಂದರೆ ಆಗುತ್ತದೆ ಹಾಗಾಗಿ ಕಿಡ್ನಿ ಸಮಸ್ಯೆ ಬಂದ ಮೇಲೆ ಯಾವುದೇ ಕಾರಣಕ್ಕೂ ಕೆಲವು ಆಹಾರಗಳನ್ನು ಸೇವಿಸಬಾರದು ಅವು ಯಾವ ಆಹಾರಗಳು ಎಂದು ತಿಳಿಯೋಣ

ಕಿಡ್ನಿ ಸಮಸ್ಯೆ ಎಂದು ವೈದ್ಯರ ಬಳಿ ಹೋದಾಗ ವೈದ್ಯರು ಮೊದಲು ಹೇಳುವುದು ಮಾಂಸಾಹಾರ ಸೇವನೆ ಮಾಡಬೇಡಿ ಎಂದು ಏಕೆಂದರೆ ಪ್ರಾಣಿಗಳ ಮಾಂಸದಲ್ಲಿ ಪ್ರೋಟೀನ್ ಅಂಶ ಇರುತ್ತದೆ ಮಾಂಸ ಮತ್ತು ಕೆಲವೊಂದು ಮೀನುಗಳಲ್ಲಿ ಕೂಡ ಫೋಸ್ಪರಸ್ ಮತ್ತು ಪ್ಯೂರಿನ್ ಅಂಶ ಕೂಡ ಇರುತ್ತದೇ ಈ ಫೋಸ್ಪರಸ್ ಅಂಶ ಕಿಡ್ನಿಗೆ ತುಂಬಾ ಕೆಟ್ಟದು. ಅದರಲ್ಲೂ ಈಗಾಗಲೇ ಹಾನಿಗೊಂಡಿರುವ ಕಿಡ್ನಿಗೆ ಇದು ತುಂಬಾ ಮಾರಕ. ಕಾಫಿ ದ್ರಾಕ್ಷಿ ಕಿತ್ತಳೆ ಹಸಿರೆಲೆ ತರಕಾರಿಗಳು ಇವುಗಳಲ್ಲಿ ಒಕ್ಸಾಲಿಕ್ ಆಮ್ಲ ಅಥವಾ ಒಕ್ಸಾಲೇಟ್ ಅಂಶ ಇರುತ್ತದೆ ಇದನ್ನು ಕಿಡ್ನಿ ಸಮಸ್ಯೆ ಇರುವವರು ಸೇವಿಸಿದರೆ ಕಿಡ್ನಿಗೆ ಹಾನಿ ಆಗುತ್ತದೆ.

ಕಿಡ್ನಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಬಾರದು ಅಧಿಕ ರಕ್ತದೊತ್ತಡ ಮತ್ತು ಕಿಡ್ನಿಯ ಅಸಮರ್ಪಕ ನಿರ್ವಹಣೆಗೆ ಪರಸ್ಪರ ಸಂಬಂಧವಿದೆ. ಒಂದರಿಂದ ಇನ್ನೊಂದಕ್ಕೆ ಅಡ್ಡಪರಿಣಾಮಗಳು ಕೂಡ ಇವೆ ಹಾಗಾಗಿ ಆಹಾರದಲ್ಲಿ ಹೆಚ್ಚು ಉಪ್ಪು ಸೇವಿಸಬಾರದು. ಕಿಡ್ನಿ ಸಮಸ್ಯೆ ಇರುವವರು ಹೆಚ್ಚು ಉಪ್ಪಿನಕಾಯಿಯನ್ನು ಸೇವಿಸಬಾರದು. ಕಿಡ್ನಿಯು ತೀವ್ರ ರೀತಿಯಲ್ಲಿ ಹಾನಿಗೆ ಒಳಗಾದಾಗ ಪೊಟಾಶಿಯಂ ಸೇವನೆಯು ಕೂಡ ಸಮಸ್ಯೆಯನ್ನು ಉಂಟು ಮಾಡುತ್ತದೆ.ಎಕೆಂದರೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚು ಇರುತ್ತದೆ ಇದು ಕಿಡ್ನಿ ಸಮಸ್ಯೆ ಇರುವವರಿಗೆ ತುಂಬಾ ಅಪಾಯಕಾರಿ ಹಾಗಾಗಿ ಮಿತವಾಗಿ ಸೇವಿಸಬೇಕು.

ಚಾಕಲೇಟ್ ಹಾಲು ಹಾಗೂ ಹಾಲಿನಿಂದ ತಯಾರಿಸುವ ಇತರ ಉತ್ಪನ್ನಗಳು ಬೀಜಗಳು ಮತ್ತು ಒಣಹಣ್ಣುಗಳು ಇವುಗಳು ಕೂಡ ಕಿಡ್ನಿಯಲ್ಲಿ ಫೋಸ್ಪರಸ್ ಅನ್ನು ಹೆಚ್ಚು ಮಾಡುತ್ತದೆ ಹಾಗಾಗಿ ಇದು ಕಿಡ್ನಿಗೆ ಅಪಾಯಕಾರಿ. ಹಾಗಾಗಿ ಕಿಡ್ನಿ ಸಮಸ್ಯೆ ಇರುವವರು ಆದಷ್ಟು ತಮ್ಮ ನಿತ್ಯ ಆಹಾರದ ಕ್ರಮದಲ್ಲಿ ಜಾಗೃತೆ ವಹಿಸಬೇಕು. ಆಗ ಕಿಡ್ನಿ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗುತ್ತದೆ.ಹಾಗೂ ಬೇಗ ಗುಣ ಪಡಿಸಿಕೊಳ್ಳಬಹುದು. ತಪ್ಪದೇ ಈ ಮಾಹಿತಿ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here