ಕೂದಲು ಉದುರುವುದನ್ನು ತಡೆಯಲು ದಿವ್ಯ ಔಷಧ.. ಇದನ್ನು ಮಾಡಿ ನೋಡಿ.

1
193

ಸಾಮಾನ್ಯವಾಗಿ ದಾಸವಾಳ ಎಂದರೆ ಜನರಿಗೆ ಅಸಡ್ಡಯ ಮನೋಭಾವವಿದೆ. ಕೇವಲ ದೇವರ ಪೂಜೆಗೆ ಮಾತ್ರ ಅಂದುಕೊಂಡಿದ್ದಾರೆ. ಆಯುರ್ವೇದ ಔಷಧಿಗಳಲ್ಲಿ ದಾಸವಾಳ ಹೂವಿನ ಬಳಕೆ ಮಾಡುತ್ತಾರೆ. ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು.

ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು  ಹೀಗೆ ಮಾಡಿ ನೋಡಿ.

ದಾಸವಾಳ-ಈರುಳ್ಳಿ : ದಾಸವಾಳದ ರಸ, ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ತೊಳೆಯಿರಿ.

ದಾಸವಾಳ–ನೆಲ್ಲಿ : ದಾಸವಾಳ ಹಾಗೂ ನೆಲ್ಲಿ ರಸವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ದಾಸವಾಳ ಹಾಗೂ ಆಲಿವ್ ಆಯ್ಲ್ : ಇದನ್ನು ಶಾಂಪೂ ರೀತಿಯಲ್ಲಿಯೂ ಬಳಸಬಹುದು. ದಾಸವಾಳದ ಎಲೆ ಹಾಗೂ ಹೂವನ್ನು ಮಿಶ್ರಮಾಡಿ ಅದಕ್ಕೆ ಸ್ವಲ್ಪ ಹನಿ ಆಲಿವ್ ಆಯಿಲ್ ಮಿಕ್ಸ್ ಮಾಡಿ ಬಳಸಿ.

ದಾಸವಾಳ-ಕರಿಬೇವು : ದಾಸವಾಳ ಹಾಗೂ ಕರಿಬೇವಿನ ಎಲೆಯ ರಸಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ.

ದಾಸವಾಳ –ಮೆಂತ್ಯೆ : ಮೆಂತ್ಯೆಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಮೆಂತ್ಯೆ ಜೊತೆ ದಾಸವಾಳ ಸೇರಿಸಿ ಮಿಕ್ಸಿ ಮಾಡಿ. ಇದನ್ನು ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಈ ಮಿಶ್ರಣದಿಂದ ಕೂದಲು ಹೊಳಪು ಪಡೆಯುವ ಜೊತೆಗೆ ಕೂದಲು ಉದುರುವುದು ಕಡಿಮೆಯಾಗುತ್ತದೆ

1 COMMENT

LEAVE A REPLY

Please enter your comment!
Please enter your name here