ಕೆಸುವಿನ ಸೊಪ್ಪಿನ ಕರ್ಕ್ಲಿ ಮಾಡೋದು ಹೇಗೆ ಗೊತ್ತಾ

0
59

ಕೆಸುವಿನ ಸೊಪ್ಪಿನ ಕರ್ಕ್ಲಿ

ಮನೆಯ ತೋಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಕೆಸುವಿನ ಎಲೆಗಳನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ.ಕೆಸುವಿನ ಸೊಪ್ಪು ಆರೋಗ್ಯಕ್ಕೂ ಹಿತಕರ ಹಾಗೂ ಇದರ ಅಡುಗೆಯೂ ತುಂಬಾ ರುಚಿಕರವಾಗಿತ್ತದೆ. ಇದು ಅನ್ನದ ಜೊತೆ ಹಾಗೂ ರೊಟ್ಟಿ ಅಥವಾ ದೋಸೆಯ ಜೊತೆಯೂ ತಿನ್ನಬಹುದು.

ಬೇಕಾಗುವ ಪದಾರ್ಥಗಳು  : ಚೆನ್ನಾಗಿ ತೊಳೆದ ಕೆಸುವಿನ ಸೊಪ್ಪಿನ ಎಲೆ 1೦, ಹಸಿಮೆಣಸಿನ ಕಾಯಿ 2, ಹುಣಿಸೆ ಹಣ್ಣಿನ ರಸ 2 ಚಮಚ, ಉಪ್ಪು  ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು ಬೆಳ್ಳುಳ್ಳಿ  3 ರಿಂದ 4, ಇಂಗು 1 ಚಿಟಿಕೆ, ಓಂಕಾಳು 1 ಚಿಟಿಕೆ, ಕೊಬ್ಬರಿ ಎಣ್ಣೆ 1 ವರೆ ಚಮಚ, ಸಾಸಿವೆಕಾಳು 1 ಚಮಚ,

ಮಾಡುವ ವಿಧಾನ: ಕೆಸುವಿನ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ, ಉಪ್ಪು,ಹುಳಿ, ಕತ್ತರಿಸಿದ ಹಸಿಮೆಣಸಿನಕಾಯಿ, ಎಲ್ಲವನ್ನು ಬಾಂಡ್ಲಿಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿ.ಆ ಮಿಶ್ರಣ ಕರಗಿ ಪೇಸ್ಟ್ ಆಗುವಷ್ಟು ಬೇಯಿಸಿ. ಒಗ್ಗರಣೆಗೆ ಎಣ್ಣೆಯನ್ನು ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಕಾಳು, ಇಂಗು, ಓಂ ಕಾಳು, ಬೆಳ್ಳುಳ್ಳಿ ಇವೆಲ್ಲವನ್ನು ಹಾಕಿ. ಈಗ ಮೇಲೆ ಹೇಳಿದ ಕರ್ಕ್ಲಿಯ ಮಿಶ್ರಣಕ್ಕೆ ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ, ಹತ್ತು ನಿಮಿಷ ಪಾತ್ರೆಯನ್ನು ಮುಚ್ಚಿಡಿ. ಈಗ ಬಾಯಲ್ಲಿ ನೀರೂರಿಸುವ ಕೆಸುವಿನ ಕರ್ಕ್ಲಿ ತಯಾರು. ಮಾಡಲು ಬೇಕಾಗುವ ಸಮಯ 10 ನಿಮಿಷ. ಅನ್ನದ ಜೊತೆಗೆ ಗಟ್ಟಿಯಾಗಿ ಕಲಸಿ ತಿಂದು ಸವಿಯಿರಿ.

LEAVE A REPLY

Please enter your comment!
Please enter your name here