ಕ್ಯಾರೆಟ್ ಚಟ್ನಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

0
42

ಕ್ಯಾರೆಟ್ ಚಟ್ನಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಬೇಕಾಗುವ ಪಧಾಥಗಳು-

*ಕಡಲೆಬೇಳೆ ಸ್ವಲ್ಪ

*ಉದ್ದಿನಬೇಳೆ ಸ್ವಲ್ಪ

*ಒಣ ಮೆಣಸಿನಕಾಯಿ ಸ್ವಲ್ಪ

*ಎಣ್ಣೆ ಸ್ವಲ್ಪ

*ಬೆಳ್ಳುಳ್ಳಿ ೪ಎಸಳು

*ಕತ್ತರಿಸಿದ ಈರುಳ್ಳಿ ೧

*ಕ್ಯಾರೆಟ್ ೧ ಬಟ್ಟಲು

* ರುಚಿಗೆ ತಕ್ಕಷ್ಟು ಉಪ್ಪು

* ಹುಳಿ ಸ್ವಲ್ಪ

ಮಾಡುವ ವಿಧಾನ:

ಮೊದಲು ಬಾಣೆಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಈರುಳ್ಳಿ ಬೆಳ್ಳುಳ್ಳಿ ಕ್ಯಾರೆಟ್ ಹಾಕಿ ಹುರಿದುಕೊಳ್ಳಬೇಕು. ನಂತರ ಮಿಕ್ಸಿಗೆ ಹುರಿದುಕೊಂಡ ಮಿಶ್ರಣವನ್ನು ಹಾಕಿ ಸ್ವಲ್ಪ ಉಪ್ಪು, ಕಾಯಿತುರಿ, ಹುಳಿ, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ, ರುಬ್ಬಿಕೊಂಡ ಚಟ್ನಿಗೆ ಹಾಕಿ ಕಲಸಿ. ರುಚಿಕರವಾದ ಕ್ಯಾರೆಟ್ ಚಟ್ನಿ  ರೊಟ್ಟಿ ಅಥವಾ ಊಟದ ಜೊತೆ ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here