ಗಂಡಸರು ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತೇ?

0
62

ಪ್ರತಿಯೊಬ್ಬರಿಗೂ ಕೂಡ ಮದುವೆ ಆಗಬೇಕು ಮಕ್ಕಳು ಆಗಬೇಕು ಎಂಬ ಆಸೆ ಇರುತ್ತದೆ ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರು ಕೂಡ ಮಕ್ಕಳು ಆಗದೆ ಒದ್ದಾಡುತ್ತಾರೆ ಹೋಗದೆ ಇರುವ ಆಸ್ಪತ್ರೆಗಳು ಇಲ್ಲ ಹೋಗದೆ ಇರುವ ದೇವಸ್ಥಾನಗಳು ಇಲ್ಲ ಹಾಗೆ ಸುತ್ತಾಡುತ್ತಾರೆ ಆದರೂ ಕೂಡ ಮಕ್ಕಳ ಭಾಗ್ಯ ಮಾತ್ರ ಸಿಗುವುದಿಲ್ಲ ಆದರೆ ಮಕ್ಕಳು ಆಗದೆ ಇರುವುದಕ್ಕೆ ಮಹಿಳೆಯರೇ ಕಾರಣ ಎಂದು ಎಲ್ಲರೂ ಹೇಳುವುದು ಆದರೆ ಮಕ್ಕಳು ಆಗದೆ ಇರುವುದಕ್ಕೆ ಗಂಡಸರು ಕೂಡ ಕಾರಣ ಆಗಿರುತ್ತಾರೆ ಅದು ಹೇಗೆ ಗೊತ್ತೇ. ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಬಿಡುತ್ತಾರೆ ಆದರೆ ಮದುವೆ ಮಾಡುತ್ತಿರುವ ಆ ಗಂಡಸರ ವಯಸ್ಸು ಎಷ್ಟು ಏನು ಎಂಬುದನ್ನು ವಿಚಾರಿಸುವುದಿಲ್ಲ ಆದರೆ ಪುರುಷರ ವಯಸ್ಸು ಕೂಡ ಮಕ್ಕಳು ಆಗದೆ ಇರುವುದಕ್ಕೆ ಕಾರಣ ಆಗುತ್ತದೆ.

ಪುರುಷರು ಅಪ್ಪನಾಗುವ ವಯಸ್ಸು ಸರಿಯಾಗಿ ಇಪ್ಪತ್ತೈದರಿಂದ 35 ವರ್ಷಗಳು ಮಾತ್ರ ಈ ವಯಸ್ಸಿನಲ್ಲೇ ಇರುವವರಿಗೆ ಮಾತ್ರ ಮಕ್ಕಳು ಆಗುತ್ತಾರೆ ಆದರೆ ಈ ವಯಸ್ಸಿನಲ್ಲಿ ಇನ್ನು ಎಂಜಾಯ್ ಮಾಡಬೇಕು ಮಕ್ಕಳು ಜವಾಬ್ದಾರಿ ಎಂಬ ಹೊಣೆ ಬೇಡ ಎಂದು ಪ್ಲಾನ್ ಮಾಡಿಕೊಂಡು ಸರಿಯಾದ ವಯಸ್ಸಿಗೆ ಮಕ್ಕಳು ಮಾಡಿಕೊಳ್ಳುವುದಿಲ್ಲ ಆದರೆ ಇದರಿಂದ ವಯಸ್ಸು ಆಗುವುದು ಕಾಣಿಸುವುದಿಲ್ಲ. ನಂತರ 35 ವರ್ಷಗಳ ನಂತರ ಮಕ್ಕಳನ್ನು ಮಸಿಕೊಳ್ಳಲು ಹೋದರೆ ಮಕ್ಕಳು ಆಗುವುದು ಕಷ್ಟ ಮಕ್ಕಳು ಆದರೂ ಆರೋಗ್ಯವಾಗಿ ಇರುವುದಿಲ್ಲ. ಹಾಗೆಯೇ ಪುರುಷನೊಬ್ಬ ತಂದೆಯಾಗುವ ಬಗ್ಗೆ ಯಾಕೆ ಮಾತಾಡುತ್ತೇವೆ ಅಂದರೆ ವೀರ್ಯಾಣು ಉತ್ಪತ್ತಿ ಮಾಡುವಲ್ಲಿ ಟೆಸ್ಟಸ್ಟಿರೋನ್ ಎಂಬ ಹಾರ್ಮೋನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ವಯಸ್ಸಾದ ಮೇಲೆ ಮಕ್ಕಳಾಗುವ ಸಾಧ್ಯತೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕೂಡ ಕಾಡುತ್ತದೆ

ಮೂವತ್ತೈದು ವರ್ಷ ದಾಟಿದ ಮೇಲೆ ಪುರುಷರ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತ ಹೋಗುತ್ತದೆ ಮತ್ತು ವೀರ್ಯಾಣುವಿನ ಗುಣಮಟ್ಟ ಸಹ ಕಡಿಮೆಯಾಗುತ್ತದೆ ಹಾಗೆಯೇ ಮಹಿಳೆಯರಲ್ಲಿ 25 ರಿಂದ 30 ವರ್ಷ ತಾಯಿಯಾಗಲು ತುಂಬಾ ಒಳ್ಳೆಯ ಸಮಯ 30 ದಾಟಿದ ಮೇಲೆ ಮೆನೋಪಸ್ಸ್ ಸಮಯ ಶುರುವಾಗುತ್ತದೆ. ಹೆಣ್ಣುಮಕ್ಕಳ ಆರೋಗ್ಯದಲ್ಲಿ ಏನಾದರು ವ್ಯತ್ಯಾಸ ಕಂಡು ಬಂದಲ್ಲಿ ಅವುಗಳು ಗರ್ಭಧಾರಣೆ ಮಾಡಿದ ಸಮಯದಲ್ಲಿ ಮಕ್ಕಳಿಗೆ ತೊಂದರೆ ಉಂಟು ಮಾಡಲಿದೆ. ಪುರುಷರಲ್ಲಿ 30 ರಿಂದ 35 ವರ್ಷ ತಂದೆಯಾಗಲು ಬೆಸ್ಟ್ ಅಂತೇ ಯಾಕೆಂದರೆ ಈ ಸಮಯದಲ್ಲಿ ವೀರ್ಯಾಣುಗಳು ಆರೋಗ್ಯಕರವಾಗಿರುತ್ತದೆ ಎಂಬುದು ವೈದ್ಯರ ಮಾತು ಹಾಗಾಗಿ ಮದುವೆ ಮುಂಚೆ ಗಂಡು ಮತ್ತು ಹೆಣ್ಣಿನ ವಯಸ್ಸಿನ ಬಗ್ಗೆ ಗಮನ ಹರಿಸಬೇಕು ಹಾಗೂ ಮದುವೆ ಆದ ಗಂಡು ಹೆಣ್ಣು ತಮ್ಮ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಮಕ್ಕಳನ್ನು ಮಾಡಿಕೊಳ್ಳಬೇಕು ಫ್ಯಾಮಿಲಿ ಪ್ಲಾನಿಂಗ್ ಅದು ಇದು ಎಂದು ಕುಳಿತು ಕಾಲ ಹೋದ ಮೇಲೆ ಕೊರಗಬೇಡಿ ತುಂಬಾ ಮುನ್ನೆಚ್ಚರಿಕೆ ವಹಿಸಿರಿ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಆರೋಗ್ಯ ಮಾಹಿತಿ ಸಿಗಲಿ.

LEAVE A REPLY

Please enter your comment!
Please enter your name here