ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಹರಕೆ ಹೊತ್ತರೆ ನೆರವೇರುವುದು ಖಂಡಿತ.

0
83

ಬೆಂಗಳೂರಿನಲ್ಲಿ ಸ್ಥಿತವಿರುವ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಹರಕೆ ಹೊತ್ತರೆ ನೆರವೇರುವುದು ಖಂಡಿತ.

ಬೆಂಗಳೂರಿನ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದು. ಕ್ರಿ. ೯ ನೇ ಶತಮಾನದಲ್ಲಿ ಬೃಹತ್ ಬಂಡೆಯೊಂದನ್ನು ಕೊರೆದು ಈ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಪ್ರತಿವರ್ಷ ‘ಮಕರ ಸಂಕ್ರಾತಿಯ ದಿನ’ ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಬಹಳ ದೂರ ಪ್ರದೇಶಗಳಿಂದ ಬರುತ್ತಾರೆ.

ಈ ದೇವಾಲಯದ ವಿಶಾಲ ಪ್ರಾಂಗಣದಲ್ಲಿ ಬಹಳ ಅಪರೂಪವಾದ ಹಾಗೂ ಅತ್ಯಂತ ಸುಂದರವಾದ ಶಿಲಾರಚನೆಗಳಿವೆ. ಅತ್ಯಂತ ಸುಂದರ ಹಾಗೂ ರಮಣೀಯವಾದ ಈ ದೇವಾಲಯದ ಮುಂಭಾಗದಲ್ಲಿ ವಿಜಯನಗರ ಶೈಲಿಯ 14 ಕಂಬಗಳಿರುವ ಮಂಟಪವಿದೆ.

ಇದು ಶಿವನ ಮಂದಿರವಾಗಿದ್ದು, ನಂದಿಯ ವಿಗ್ರಹವೂ ಮುಂದೆ ಇದೆ. ಮತ್ತೊಂದು ವಿಶೇಷವೆಂದರೆ ಅಗ್ನಿಯ ವಿಗ್ರಹ. ಇದಕ್ಕೆ 2 ತಲೆ, 7 ಕೈ ಹಾಗೂ 3 ಕಾಲುಗಳಿವೆ. ಇಲ್ಲಿರುವ ಅಗ್ನಿಯನ್ನ ಪೂಜಿಸಿದರೆ ಕಣ್ಣಿನ ದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇದೆ.

ದೇವಾಲಯದ ಪಕ್ಕದಲ್ಲೇ ಇರುವ ತಿಮ್ಮೇಶಪ್ರಭು ಉದ್ಯಾನದಲ್ಲಿ ‘ಸಂಗೀತ, ನೃತ್ಯ ಕಾರಂಜಿ’ಯೂ ಇದೆ. ಪ್ರತಿ ರವಿವಾರದ ಸಂಜೆ 7ರ ನಂತರ ಇಲ್ಲಿ ‘ನೃತ್ಯಕಾರಂಜಿ’ಯನ್ನೂ ವೀಕ್ಷಿಸಲು ಎಲ್ಲ ಕಡೆಯಿಂದಲೂ ಜನರು ಬರುತ್ತಾರೆ.

20 ಸಾವಿರವರ್ಷಗಳ ಇತಿಹಾಸವಿರುವ ಈದೇವಾಲಯದ ಶಿವಲಿಂಗ ದಕ್ಷಿಣಾಭಿಮುಖವಾಗಿ ಇರುವುದೇ ಇಲ್ಲಿಯ ವಿಶೇಷತೆಗಳಲ್ಲೊಂದು.

ಈ ಗುಹಾಂತರ ದೇವಾಲಯದಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಒಂದು ಸುರಂಗವು ವಿಶ್ವನಾಥನ ನೆಲೆವೀಡಾದ ಕಾಶಿಗೂ ಹೋಗುತ್ತದೆಂಬುದು ನಂಬಿಕೆ. ಇನ್ನೊಂದು ತುಮಕೂರು ರಸ್ತೆಯಲ್ಲಿರುವ ಶಿವಗಂಗೆಗೆ ಹೋಗುತ್ತದೆ.

ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಹಾಗೂ ಭಾರದ್ವಾಜರ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಮಾರ್ಗದಲ್ಲಿ ಸಪ್ತ ಮಾತೃಕೆಯರಾದ ‘ಬ್ರಾಹ್ಮೀ’, ‘ಮಾಹೇಶ್ವರಿ’, ‘ವಾರಾಹಿ’, ‘ಚಾಮುಂಡಿ’, ‘ವೈಷ್ಣವಿ’ ಹಾಗೂ ‘ಶ್ರೀದೇವಿ’, ‘ಭೂದೇವಿ’ಯ ವಿಗ್ರಹಗಳೂ ಇವೆ.

ಇಲ್ಲಿ ಹರಕೆಹೊತ್ತವರಿಗೆ ಅವರ ಆಸೆಗಳು ನೆರವೇರುವುದು ಖಂಡಿತವೆಂದು ಜನರ ನಂಬಿಕೆಯಿದೆ. ಹಾಗಾಗಿ, ಈ ಸ್ಥಳ ಬಹಳ ಪ್ರಸಿದ್ದಿಪಡೆದಿದೆ.

LEAVE A REPLY

Please enter your comment!
Please enter your name here