ಗ್ಯಾಸ್ ಟ್ರಬಲ್ ಸಮಸ್ಯೆ ಈ ಮನೆ ಮದ್ದು ಮಾಡಿ ಸಾಕು

0
132

ಗ್ಯಾಸ್ ಟ್ರಬಲ್ ಸಮಸ್ಯೆ ಇದೆಯೇ? ಹಾಗಾದರೆ ಹೀಗೆ ಮಾಡಿ. ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಏನೋ ಸಂಕಟ, ಹೊಟ್ಟೆ ಉರಿ, ನೋವು ಬಂದಂತೆ ಭಾಸವಾಗುವುದು, ಇವೆಲ್ಲ ಲಕ್ಷಣಗಳು ಕಂಡು ಬಂದಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿ. ಒಂದು ಚಮಚ ಕೊತ್ತಂಬರಿ ಬೀಜ ಮತ್ತು ಸ್ವಲ್ಪ ಒಣಶುಂಠಿಯನ್ನು ಜಜ್ಜಿ ಎರಡು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಶೋಧಿಸಿ, ಜೇನುತುಪ್ಪ ಸೇರಿಸಿ ಸೇವಿಸಿ. ಈ ಕಷಾಯಕ್ಕೆ ಜೇನುತುಪ್ಪ ಬದಲು ಕಲ್ಲು ಸಕ್ಕರೆಯನ್ನೂ ಬಳಸಬಹುದು, ಕೊತ್ತಂಬರಿ ಬೀಜ ಪುಡಿಮಾಡಿಟ್ಟುಕೊಂಡರೆ ತಕ್ಷಣಕ್ಕೆ ಕಷಾಯ ತಯಾರಿಸಲು ಅನುಕೂಲವಾಗುತ್ತದೆ. ಗ್ಯಾಸ್ ಸಮಸ್ಯೆ ಕಡಿಮೆ ಆಗುವವರೆಗೂ ಈ ಕಷಾಯವನ್ನು ಕುಡಿಯುತ್ತಿರಿ.

ಸೈಂಧವ ಲವಣದೊಂದಿಗೆ ಬೆಳ್ಳುಳ್ಳಿ ರಸವನ್ನು ಮಿಶ್ರ ಮಾಡಿಕೊಳ್ಳಿ. ಈ ಬೆಳ್ಳುಳ್ಳಿ ರಸವನ್ನುಪ್ರತಿದಿನ ದಿನಕ್ಕೆರಡು ಬಾರಿ ಸೇವಿಸಿ.

ಅಡುಗೆ ಉಪ್ಪು, ಒಣಶುಂಠಿ ಚೂರ್ಣ, ಜೀರಿಗೆ ಮತ್ತು ಸಕ್ಕರೆ ಪ್ರತಿಯೊಂದನ್ನೂ ಒಂದು ಟೀ ಚಮಚದಷ್ಟು ತೆಗೆದುಕೊಂಡು ಒಂದು ನಿಂಬೆರಸದೊಂದಿಗೆ ಮಿಶ್ರಮಾಡಿ. ಈ ಮಿಶ್ರಣಕ್ಕೆ ಒಂದು ಗ್ಲಾಸ್ ಬಿಸಿ ನೀರು ಸೇರಿಸಿ, ಚೆನ್ನಾಗಿ ಕಲಕಿ ಕುಡಿಯಿರಿ.

ಮುಂಜಾನೆ ಎದ್ದ ಕೂಡಲೇ ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

ಒಂದು ಗ್ಲಾಸ್ ನೀರಿಗೆ ಒಂದು ನಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚದಷ್ಟು ಅಡಿಗೆ ಸೋಡ ಸೇರಿಸಿ. ಅದನ್ನುಆಗಾಗ ಸೇವಿಸಿದಲ್ಲಿ ಅಜೀರ್ಣದ ಹೊಟ್ಟೆನೋವು ನಿವಾರಣೆಯಾಗುವುದು.

ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ತಯಾರಿಸಿ. ಎರಡು ದಿನಗಳಿಗೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುತ್ತಿದ್ದರೆ ಹೊಟ್ಟೆ ಉರಿ ಕಮ್ಮಿಯಾಗುತ್ತಾ ಹೋಗುತ್ತದೆ.

ಪ್ರತಿದಿನವೂ ಒಂದು ಎಳನೀರು ಕುಡಿಯುವ ಅಭ್ಯಾಸ ಒಳ್ಳೆಯದು. ಇತರೆ ತಂಪು ಪಾನೀಯ ಆರೋಗ್ಯಕ್ಕೆ ಒಳ್ಳೆಯದಲ್ಲ.

ಹುರುಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಬಸಿಯಿರಿ. ಒಂದು ಬಟ್ಟಲಿಗೆ ಸ್ವಲ್ಪ ತುಪ್ಪ ಸೇರಿಸಿ, ಸೇವಿಸಿ. ದಿನದಲ್ಲಿ ಎರಡು ಬಾರಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುವುದು.

ಪ್ರತಿದಿನವೂ ತಪ್ಪದೇ ನಡಿಗೆ, ಜಾಕಿಂಗ್ ಗೆ ಹೋಗುವ ಪದ್ಧತಿ ಇಟ್ಟುಕೊಳ್ಳಿ. ಆದರೆ, ಹೊಟ್ಟೆ ನೋವಿದ್ದಾಗ ಕಷ್ಟ ಪಟ್ಟು ದೈಹಿಕ ಕಸರತ್ತು ಮಾಡಲು ಪ್ರಯತ್ನಿಸಬೇಡಿ.

ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಮಸಾಲೆ ಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ.

ಹೊಟ್ಟೆ ನೋವು, ಹೊಟ್ಟೆ ಉರಿ ಇದ್ದಾಗ ಕಾಫಿ, ಟೀ, ಮಧ್ಯಪಾನ, ಕೋಲ್ಡ್ ಡ್ರಿಂಕ್ಸ್, ಧೂಮಪಾನ ಬಿಟ್ಟು ಬಿಡಿ.

ಕೊಬ್ಬಿನ ಪದಾರ್ಥಗಳಾದ ತೆಂಗು, ಕೆನೆ ಮೊಸರು, ಪೇಡಾ, ಮಾಂಸ ಕೂಡಾ ಸೇವನೆಗೆ ಯೋಗ್ಯವಲ್ಲ.

ಹೊಟ್ಟೆಗೆ ಹಸಿವಾದಾಗ ಏನಾದರು ತಿನ್ನುತ್ತಿರಿ.. ಖಾಲಿ ಇದ್ದಷ್ಟೂ ಹೆಚ್ಚು ಕಷ್ಟ ಆಗುತ್ತದೆ.

ಸೇಬು, ಕ್ಯಾರೆಟ್, ಬೀಟ್ ರೂಟ್ ಜ್ಯೂಸ್, ಹುರುಳಿಕಾಯಿ, ನಾರು ಬೇರಿನ ತರಕಾರಿ ಉತ್ತಮ.

LEAVE A REPLY

Please enter your comment!
Please enter your name here