ಗ್ಯಾಸ್ ಮತ್ತು ಅಜೀರ್ಣತೆ ಇದ್ರೆ ಇಷ್ಟು ಮಾಡಿ ಸಾಕು

0
113

ಅನಾರೋಗ್ಯ ಸಮಸ್ಯೆಗಳಲ್ಲಿ ಒಂದಾದ ಅಜೀರ್ಣತೆ ಮತ್ತು ಗ್ಯಾಸ್ ಅನ್ನು ಉಂಟು ಮಾಡುವ ಆಹಾರ ಪದಾರ್ಥಗಳು ಯಾವುವು?

ಸೇವಿಸಿದ ಆಹಾರ ಜೀರ್ಣವಾಗದೆ ಹೊಟ್ಟೆಯಲ್ಲಿ ತಳಮಳ ಕಾಣಿಸುತ್ತದೆ. ಇದಕ್ಕೆ ಕಾರಣ ನಾವು ಸೇವಿಸುವ ಅನಾರೋಗ್ಯಕರ ಆಹಾರ ಪದ್ಧತಿ ಆಗಿರುತ್ತದೆ. ದೇಹದಲ್ಲಿ ಉಂಟಾಗುವ ಹುಳಿತೇಗು, ಗ್ಯಾಸ್ಟ್ರಿಕ್, ಮತ್ತು ಅಜೀರ್ಣತೆ, ಎಂಬುದು ಜೊತೆಯಲ್ಲಿ ಒಟ್ಟಿಗೆ ನೆಡೆಯುವ ಹೊಟ್ಟೆಯ ಸಮಸ್ಯೆಯಾಗಿರುತದೆ. ಅತಿಯಾದ ಆಸಿಡ್ ಹೊಟ್ಟೆಯಲ್ಲಿ ಉತ್ಪತ್ತಿಯಾದಾಗ ಅಜೀರ್ಣತೆ, ಗ್ಯಾಸ್ಟ್ರಿಕ್ ಸಮಸ್ಯೆ ಉತ್ಪತ್ತಿಯಾಗುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು,ತೇಗು, ಎದೆ ಉರಿ, ಅತಿಯಾದ ಅನಿಲ, ಹೊಟ್ಟೆ ನೋವು, ತಲೆನೋವು, ಮುಂತಾದವು ಕಾಣಿಸುತ್ತವೆ.

ಹಾಗಾದ್ರೆ  ಯಾವ ರೀತಿಯ ಆಹಾರ ಸೇವನೆ ಅಜೀರ್ಣಗೆ ಕಾರಣ ಎಂಬುದು ತಿಳಿದುಕೊಂಡರೆ ಸಮಸ್ಯೆಯಿಂದ ದೂರವಿರಬಹುದು. ಅಜೀರ್ಣ ಮತ್ತು ಗ್ಯಾಸ್ ತರುವ ಆಹಾರ ಪದಾರ್ಥಗಳು.

ಚಿಪ್ಸ್: ಎಣ್ಣೆ ಮತ್ತು ಬೊಜ್ಜಿನ ಅಂಶವಿರುವ ಆಹಾರ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ, ಎಣ್ಣೆ ಗ್ಯಾಸ್ ಉತ್ಪತಿ ಮಾಡಿ ಅಜೀರ್ಣತೆಯಿಂದ ಬಳಲುವಂತಾಗುತದೆ,ಆದ್ಧರಿಂದ ಫಾಸ್ಟ್ ಫುಡ್ ಗಳಾದ ಬರ್ಗರ್, ಫ್ರೆಂಚ್ ಫ್ರೈ, ಆಲೂ ಚಿಪ್ಸ್, ಪಕೋಡ, ಬೆಣ್ಣೆ, ಇವುಗಳಿಂದ ದೂರವಿರುವುದು ಒಳಿತು.

ಖಾರ ಪದಾರ್ಥ: ಅತಿಯಾದ ಖಾರ ಆರೋಗ್ಯಕ್ಕೆ ಒಳಿತಲ್ಲ, ಕೆಂಪು ಮೆಣಸಿನಕಾಯಿ ಪುಡಿ, ಚಾಟ್ ಮಸಾಲೆ, ಅತಿಯಾಗಿ ಮಸಾಲೆ ಪದಾರ್ಥಗಳನ್ನು ಬೆರೆಸಿದ ಆಹಾರಗಳು ಬೇಗ ಜೀರ್ಣವಾಗದ ಕಾರಣ ಗ್ಯಾಸ್ಟ್ರಿಕ್ ಉಂಟಾಗಿ ಎದೆ ಉರಿ ಕಾಣಿಸುತ್ತದೆ.

ಕಾಫಿ ಮತ್ತು ಟೀ: ಬೆಳಿಗ್ಗೆ ಎದ್ದ ತಕ್ಷಣ ಕಾಫೀ, ಟೀ ಕುಡಿಯಲೇ ಬೇಕು ಎನ್ನಿಸುತ್ತದೆ, ಕಾಫೀ, ಟೀ ಕುಡಿಯದೇ ಮುಂದಿನ ಕೆಲಸವೇ ಸಾಗುವುದಿಲ್ಲ ಎನ್ನುವವರು ಇದ್ಹರೆ ಆದರೆ ಅತಿಯಾದ ಕಾಫೀ, ಟೀ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉತ್ಪತ್ತಿ ಮಾಡುತ್ತದೆ.

ಕಾರ್ಬೋನೇಟ್ ಪಾನೀಯ: ಕೋಕ್, ಸೋಡಾ, ಬೆರೆಸಿರುವ ಪಾನೀಯ ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆಯಲ್ಲಿರುವ ಆಹಾರವನ್ನು ಮೇಲಕ್ಕೆ ತಳ್ಳುತದೆ ಇದ್ದರಿಂದ ಗ್ಯಾಸ್ಟ್ರಿಕ್ ಉತ್ಪತ್ತಿಯಾಗುತ್ತದೆ.

ಹಾಲು: ಲ್ಯಾಕ್ಟೋಸ್ ಕೊರತೆಯಿರುವವರು ಹಾಲನ್ನು ಜೀರ್ಣಸಿಕೊಳ್ಳಲು ತೊಂದರೆ ಉಂಟಾಗಿ ಅಜೀರ್ಣತೆ ಉಂಟಾಗುತ್ತದೆ.

ನಟ್ಸ್: ಕೆಲವು ನಟ್ಸ್ ಗಳು ಜೀರ್ಣಿಸಿಕೊಳ್ಳಲು ಕಷ್ಟವೆನಿಸಿದರೆ ಅದರ ಸೇವನೆಯನ್ನು ತ್ಯಜಿಸಬೇಕು ನಟ್ಸ್ಗಳಲ್ಲಿ ಟ್ಯಾನಿಸ್ ಇರುವುದರಿಂದ ಅಜೀರ್ಣತೆ ಉಂಟಾಗುತ್ತದೆ.

ವ್ಯಾಯಾಮದ ಕೊರತೆ: ಕೇವಲ ಆಹಾರವಷ್ಟೇ ಅಲ್ಲ ವ್ಯಾಯಾಮ ಕೂಡ ಅಜೀರ್ಣತೆಗೆ ಕಾರಣವಾಗುತ್ತದೆ.

ಗಟ್ಟಿಯಾದ ಪದಾರ್ಥಗಳು: ತುಂಬ ಗಟ್ಟಿ ಪದಾರ್ಥಗಳನ್ನು ಕೆಲವರು ಜಗಿಯದೆ ಹಾಗೇ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಹಾಗೆಯೇ ಕೆಲವರು ಟಿ ವಿ ನೋಡುತ್ತ, ಇಲ್ಲ ಬೇರೆ ಕೆಲಸ ಮಾಡುತ್ತ ಆಹಾರ ಸೇವಿಸುವುದರಿಂದ, ಹಾಗೆಯೇ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇದ್ಧರು ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಕಾಣಿಸುತ್ತದೆ. ಆದ್ದರಿಂದ ಉತ್ತಮ ಆಹಾರ ಕ್ರಮವನ್ನು ಅನುಕರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗೇ ಅಜೀರ್ಣತೆ ಮತ್ತು ಗ್ಯಾಸ್ ತೊಂದ್ರೆ ಸಮಸ್ಯೆ ಬರದ ಹಾಗೇ ಜಾಗೃತಿವಹಿಸಿ.

LEAVE A REPLY

Please enter your comment!
Please enter your name here