ಜ್ಯೋತಿಷ್ಯ ಹಾಗೂ ವಾಸ್ತು ಪ್ರಕಾರ ಮಣ್ಣಿನ ಪಾತ್ರೆಗಳಿಂದ ಈ ರೀತಿ ಮಾಡಿದರೆ ನಿಮ್ಮ ಅದೃಷ್ಟ ಬದಲಾಗುವ ಸಾಧ್ಯತೆ ಹೆಚ್ಚಿದೆ

0
108

ನೀವು ನಾವು ಎಲ್ಲಾ ನೋಡಿರುತ್ತೇವೆ. ನಮ್ಮ ಹಿರಿಯರು ಮನೆ ಕಟ್ಟಲು ಅಡುಗೆ ಮಾಡುವ ವಸ್ತುಗಳು ಇನ್ನೂ ಅನೇಕ ರೀತಿಯ ವಸ್ತುಗಳನ್ನು ಮಣ್ಣಿನಿಂದಲೇ ಮಾಡಿ ಬಳಸುತ್ತಿದ್ದರು. ನಮಗೆ ಜೀವ ನೀಡಿದ್ದು ಈ ಭೂಮಿ ಈ ಪ್ರಕೃತಿ. ಹಾಗಾಗಿ ಭೂಮಿಯಲ್ಲಿ ಸಿಗುವ ಮಣ್ಣಿನಿಂದ ಎಲ್ಲವನ್ನು ಮಾಡಿ ಬಳಸಿದರೆ ಆರೋಗ್ಯವೃದ್ಧಿ ಆಗುವುದು. ಹಾಗೆ ಸಕಾರತ್ಮಕ ಶಕ್ತಿ ಹೆಚ್ಚುವುದು. ಅದೃಷ್ಟ ಒಲಿಯುವುದು ಎಂದು ನಂಬಿದ್ದರು. ಜ್ಯೋತಿಷ್ಯ ಹಾಗೂ ವಾಸ್ತು ಪ್ರಕಾರ ಕೂಡ ಇದನ್ನು ಮನೆಯಲ್ಲಿ ಕಚೇರಿಗಳಲ್ಲಿ ಇಟ್ಟುಕೊಂಡರೆ ಸಕಾರತ್ಮಕ ಶಕ್ತಿ ಹೆಚ್ಚುವುದು. ಋಣಾತ್ಮಕ ಶಕ್ತಿಯಿಂದ ಮುಕ್ತಿ ಗೊಳಿಸುವುದು ಎಂದು ಹೇಳಲಾಗುತ್ತದೆ.

ಗಡಿಗೆ ಅಥವಾ ಮಣ್ಣಿನ ಬಿಂದಿಗೆ. ಒಂದು ಗಡಿಗೆಯಲ್ಲಿ ನೀರನ್ನು ತುಂಬಿ ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಇಡಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಬುಧ ಮತ್ತು ಚಂದ್ರನ ಗ್ರಹಸ್ಥಾನ ಚಲನೆಯ ಪರಿಣಾಮದಿಂದ ಉಂಟಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರಿಗೆ ಅವಕಾಶ ಅದೃಷ್ಟ ಯಶಸ್ಸಿನ ಬಾಗಿಲು ತೆರೆಯುತ್ತದೆ. ಮಾನಸಿಕ ಅಥವಾ ಒತ್ತದದಿಂದ ತೊಂದರೆ ಪಡುತ್ತಿದ್ದಾರೆ ಎಂದರೆ ಗಡಿಗೆಯಿಂದ ನೀರನ್ನು ನಿಮ್ಮ ಮನೆಯ ಸಮೀಪ ಇರುವ ಯಾವುದಾದರೂ ಗಿಡಕ್ಕೆ ಹಾಕಿ. ಗಡಿಗೆಯಲ್ಲಿ ಇಟ್ಟ ನೀರನ್ನು ಕುಡಿದರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಮಣ್ಣಿನ ಲೋಟ ನಮ್ಮ ಹಿಂದೂ ಜ್ಯೋತಿಷ್ಯದ ಪ್ರಕಾರ ಮಣ್ಣಿನ ಲೋಟದಲ್ಲಿ ಚಹಾ ಮಜ್ಜಿಗೆ ನೀರು ಕುಡಿಯುವುದರಿಂದ ನಮ್ಮ ರಾಶಿಯಲ್ಲಿನ ಮಂಗಳ ಗ್ರಹದ ಸ್ಥಾನದಿಂದ ತೊಂದರೆ ಅನುಭವಿಸುತ್ತಿದ್ದರೆ ಇದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಒಂದು ಮಣ್ಣಿನ ಲೋಟದಲ್ಲಿ ನೀರನ್ನು ತುಂಬಿಸಿ ಪ್ರತಿ ಶನಿವಾರ ಮಧ್ಯಾಹ್ನ ಒಂದು ಮರದ ಕೆಳಗೆ ಇಟ್ಟರೆ ಯಾವುದೇ ರೀತಿಯ ಶನಿ ಸಮಸ್ಯೆಯಾದರೂ ಕಡಿಮೆಯಾಗುತ್ತದೆ. ಪ್ರಾಣಿ ಪಕ್ಷಿಗಳು ಕುಡಿಯಲು ಮಣ್ಣಿನ ಲೋಟದಲ್ಲಿ ನೀರನ್ನು ತುಂಬಿಸಿಟ್ಟರೆ ನಿಮ್ಮ ಉದ್ಯೋಗದಲ್ಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮನೆಯ ಅಲಂಕಾರಿಕ ವಸ್ತುವನ್ನಾಗಿ ಯಾವುದೇ ಮಣ್ಣಿನ ಪ್ರಾಣಿ ಪಕ್ಷಿ ಗೊಂಬೆಯನ್ನು ತಂದು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟವನ್ನು ತರುತ್ತದೆ. ಮಣ್ಣಿನ ದೀಪ ನಮ್ಮ ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಹಾಗೆ ಮಣ್ಣಿನ ದೀಪವನ್ನು ತುಳಸಿ ಗಿಡದ ಹತ್ತಿರ ಅಥವಾ ಗಿಡದ ಕೆಳಗೆ ಈ ದೀಪವನ್ನು ಹಚ್ಚುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಅಪಶ್ರುತಿ ಅನ್ನು ಕಡಿಮೆ ಮಾಡುತ್ತದೆ. ಹಣಕಾಸು ಮತ್ತು ಉದ್ಯೋಗದ ವಿಷಯವಾಗಿ ಬಳಲುತ್ತಿದ್ದರೆ ಶನಿವಾರಗಳಲ್ಲಿ ಅರಳಿಮರದ ಕೆಳಗೆ ಈ ದೀಪವನ್ನು ಹಚ್ಚಬೇಕು. ಮಕ್ಕಳಿಲ್ಲ ಮಗು ಬೇಕು ಎನ್ನುವವರು ನಾಲ್ಕು ದಿಕ್ಕಿಗೂ ಬತ್ತಿ ಬರುವಂತಹ ಮಣ್ಣಿನ ದೀಪವನ್ನು ತೆಗೆದುಕೊಂಡು ಪ್ರತಿದಿನ ಬೆಳಿಗ್ಗೆ ಶ್ರೀಕೃಷ್ಣ ದೇವರಿಗೆ ಈ ದೀಪವನ್ನು ಹಚ್ಚಿ. ಈ ಲೇಖನವನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here