ಟೊಮೆಟೋ ಹಣ್ಣು ಉಪಯೋಗ ತಿಳಿದರೆ ಈಗಲೇ ತಿನೋಕ್ಕೆ ಶುರು ಮಾಡ್ತೀರ

0
69

ಟೊಮೆಟೋ ಇಂದು ಕೇವಲ ತರಕಾರಿಯಾಗಿ ಉಳಿದಿಲ್ಲ. ಅದು ಶ್ರೇಷ್ಟ ಮಟ್ಟದ ಔಷಧವಾಗಿ ತನ್ನ ಗುಣವನ್ನು ತೋರಿಸಿ ಕೊಟ್ಟಿದೆ. ಅದ್ದರಿಂದ ಇದನ್ನು ತರಕಾರಿಯಂತೆಯಲ್ಲದೆ ನಾವು ತಿನ್ನುವ ಹಣ್ಣುಗಳ ಗುಂಪಿನಲ್ಲಿ ಸೇರಿಸಿಕೊಂಡು ಗೌರವದೊಂದಿಗೆ ಇತರ ಹಣ್ಣುಗಳಂತೆ ಇದನ್ನು ಮೆಲ್ಲುವ ಯೋಗ್ಯ ಕಾಲ ಒದಗಿ ಬಂದಿದೆ.

ಸುಲಭ ಬೆಲೆಗೆ ಸಿಗುವ ಟೊಮೆಟೋ ಹಣ್ಣು ಕ್ಯಾನ್ಸರಿನಂತಹ ಭಯಾನಕ ರೋಗ ನಿರೋಧಕವಾಗಿದೆ. ಸ್ತನ ಕ್ಯಾನ್ಸರನ್ನು ತಡೆಯ ಬಲ್ಲದು. ಇದರಲ್ಲಿ ಕ್ಯಾನ್ಸರ ನಿರೋಧಕವಾದ ಎಂಟಿ ಒಕ್ಸಿಡೆಂಟ್ ಲಿಕೋಪಿನ ಎಂಬ ಅಂಶ ಹೆಚ್ಚಿದೆ. ಇದು ಈ ತರಕಾರಿಗೆ ಆಕರ್ಷಕ ಕೆಂಪು ಬಣ್ಣವನ್ನು ನೀಡಿದೆ.

ಇದು ಬೊಜ್ಜು ನಿರೋಧಕ. ಪ್ರತಿ ಮುಂಜಾನೆ ಉಪಹಾರಕ್ಕಿಂತ ಮುಂಚೆ ಒಂದೆರಡು ಟೊಮೊಟೋ ತಿಂದು ಬೊಜ್ಜನ್ನು ಇಳಿಸಿಕೊಳ್ಳಬಹುದು. ಹಣ್ಣು ಹೃದಯವನ್ನು ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ನೀಗುತ್ತದೆ

ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮುಂತಾದ ಲವಣಗಳಿವೆ. ಬಿ. 1, ಬಿ. 2, ಮತ್ತು ಸಿ. ಎ ಮಿಟಾಮಿನಗಳಿವೆ.

ಟೊಮೆಟೋ ರಸ ಹೊಟ್ಟೆಯನ್ನು ಸ್ವಚ್ಛಮಾಡುತ್ತದೆ. ಇದು ಅಜೀರ್ಣ, ವಾಯು, ಮಲಬದ್ಧತೆ ನಿವಾರಕ. ಟೊಮೆಟೊದಲ್ಲಿರುವ ಕಬ್ಬಿಣ ಸುಲಭ ಪಚನಕಾರಿ, ಆದ್ದರಿಂದ ರಕ್ತಹೀನತೆಯಿದ್ದವರು ಟೊಮೆಟೋ ತಿನ್ನಬೇಕು. ಮಕ್ಕಳಿಗೆ ಕಿತ್ತಳೆ ರಸಕ್ಕಿಂತ ಟೊಮೆಟೋ ರಸ ಉತ್ತಮ. ಟೊಮೆಟೋ ರಸಕ್ಕೆ ಬೆಲ್ಲ, ಕಲ್ಲು,ಸಕ್ಕರೆ,ಜೇನು, ಖರ್ಜೂರ ರಸಗಳಲ್ಲೊಂದನ್ನು ಸೇರಿಸಬೇಕು.

ಸಾಮಾನ್ಯ ಜ್ವರವಿದ್ದಾಗ ಟೊಮೆಟೋ ಜ್ಯೂಸ ಸಾರುಗಳನ್ನು ಆಹಾರವಾಗಿ ಕೊಡಬಹುದು. ಕಣ್ಣಿನ ತೊಂದರೆಗೆ ಟೊಮೆಟೋ ರಸ ಸೇವಿಸಬೇಕು. ಇದನ್ನು ಹಸಿಯಾಗಿ ತಿನ್ನುವುದು ಯೋಗ್ಯ. ಊಟದ ಹೊತ್ತಿಗೆ ಸವತೆ, ಗಜರಿ, ಉಳ್ಳಾಗಡ್ಡೆಗಳ ತಾಳೆಗಳ ಜೊತೆ ಟೊಮೆಟೋ ತಾಳೆಗಳನ್ನು ಇಟ್ಟು ಅಲಂಕರಿಸಲಾಗುತ್ತದೆ. ಟೊಮೆಟೋ ಗೊಜ್ಜು, ಕೋಸಂಬರಿ ಸಾರುಗಳು ಅಡುಗೆ ಮನೆಯಲ್ಲಿ ತಯಾರಾಗುತ್ತವೆ. ಟೊಮೆಟೋ ಕೆಚಪ್ಪು, ಟೊಮೆಟೋ ಜಾಮುಗಳನ್ನು ಮನೆಯಲ್ಲಿ ಮಕ್ಕಳೂ ಸಿದ್ಧಪಡಿಸಿ ತಿನ್ನಬಹುದು. ಚಿಪ್ಪಿಕಲ್ಲು ಶೆಟ್ಲಿ ಸಾರುಗಳಿಗೆ ಟೊಮೆಟೊ ಹಣ್ಣಿನ ಬೆರಕೆ ಮಹತ್ತರ ರುಚಿ ಕೊಡುತ್ತದೆ. ಹೀಗೆ ನಮ್ಮ ನಾಡಿನಲ್ಲಿ ಟೊಮೆಟೊ ಹಣ್ಣಿನಿಂದ ನೂರಾರು ರೀತಿಯಲ್ಲಿ ಅಡುಗೆ ತಯಾರಿಸಲಾಗುತ್ತದೆ.

ಒಂದು ಮಾತನ್ನು ಗಮನಿಸಿರಿ. ಟೊಮೆಟೊ ಗಿಡದ ಎಲೆದಂಟುಗಳು ಮನುಷ್ಯರಿಗೆ, ಪ್ರಾಣಿಗಳಿಗೆ ಸೇವನೆಗೆ ಯೋಗ್ಯವಲ್ಲ

LEAVE A REPLY

Please enter your comment!
Please enter your name here