ಡಯಟ್ ಮಾತ್ರೆ ಜೀವ ತೆಗೆಯುವ ಸಾಧ್ಯತೆ ಇರುತ್ತೆ ಎಚ್ಚರಿಕೆ

0
88

ಡಯಟ್ ಮಾತ್ರೆ ಆರೋಗ್ಯಕ್ಕೆ ತುಂಬಾ ತುಂಬಾ ಡೇಂಜರ್

ಸಾಮಾನ್ಯವಾಗಿ ಎಲ್ಲರೂ ತಾವು ಸುಂದರವಾಗಿ ಕಾಣಿಸ್ತಾ ಇರಬೇಕು ಯಾವಾಗಲು ತೆಳ್ಳಗೆ ಬಳಕುವ ಬಳ್ಳಿಯ ಹಾಗೆ ಇರಬೇಕು ಎಂದು ಇಷ್ಟ ಪಡುತ್ತಾರೆ. ಆದರೇ ಸ್ವಲ್ಪ ದಪ್ಪಗಾಗ ತೊಡಗಿದರೆ ಸಾಕು ಅವರಲ್ಲಿ ಟೆನ್ಸನ್ ಪ್ರಾರಂಭವಾಗುತದೆ, ದಪ್ಪ ಕಡಿಮೆ ಮಾಡಲು ಹರಸಾಹಸ ಮಾಡುತ್ತಾರೆ. ತಾವು ದಿನ ನಿತ್ಯ ವ್ಯಾಯಾಮ ಉತ್ತಮ ಆಹಾರ ಕ್ರಮಗಳನ್ನು ಅನುಸರಿಸಿದರೆ ದಪ್ಪ ಕಡಿಮೆ ಮಾಡಬಹುದು ಎಂದು ಗೊತ್ತಿದ್ದರು, ವ್ಯಾಯಾಮ ಮಾಡಲು ಸೋಮಾರಿತನ, ಆಹಾರ ಕ್ರಮ ವಹಿಸಲು ಬಾಯಿಯ ಚಪಲ ಅದಕ್ಕಾಗಿ ಜಾಹೀರಾತುಗಳ ಮೊರೆ ಹೋಗುತ್ತಾರೆ, ಸಣ್ಣಗಾಗ ಬೇಕೆ ಈ ಮಾತ್ರೆ ಸೇವಿಸಿ 7 ದಿನಗಳಲ್ಲಿ 5 ಕೆ ಜಿ ತೂಕ ಕಡಿಮೆ ಮಾಡಬೇಕೆ ಇದನ್ನು ಸೇವಿಸಿ ಇಂತಹ ಜಾಹೀರಾತುಗಳಿಗೆ ಸ್ನೇಹಿತರಾಗಿ ಬಿಡುತ್ತಾರೆ. ಆದರೆ ಇಂತಹ ಡಯಟ್ ಪಿಲ್ಸ್ ಗಳು ದೇಹದ ಮೇಲೆ ಅನೇಕ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ, ಆದ್ದರಿಂದ ಡಯಟ್ ಪಿಲ್ಸ್ ಸೇವಿಸುವ ಮೊದಲು ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗಾದರೇ ಅವುಗಳೇನು? ಡಯಟ್ ಮಾತ್ರೆಗಳು ಶೀಘ್ರವಾಗಿ ತೂಕವನ್ನು ಕಡಿಮೆ ಮಾಡುವುದರಿಂದ ದೇಹದಲ್ಲಿ ನಿಶ್ಯಕ್ತಿ ಎಂಬುದು ಕಾಣಿಸುತ್ತದೆ.

ಡಯಟ್ ಮಾತ್ರೆಗಳನ್ನು 30 ರಿಂದ 45 ದಿನಗಳು ಸೇವಿಸುವಾಗ ತೂಕ ಕಡಿಮೆಯಾಗಿದೆ ಎಂದು ಮಾತ್ರೆ ಸೇವನೆ ಬಿಟ್ಟು ಬಿಡುತ್ತಾರೆ, ಆದರೆ ತದನಂತರ ಅವರು ತುಂಬ ದಪ್ಪ ಆಗುತ್ತರೆ ಆಗ ಮತ್ತೆ ಮಾತ್ರೆ ಸೇವನೆ ಪ್ರಾರಂಭಿಸುತ್ತಾರೆ ಆದ ಕಾರಣ ಮಾತ್ರೆಗಳನ್ನು ಬಿಟ್ಟಿರಲಾರದಷ್ಟು ಸಂಬಂದ ಬೆಳೆದುಬಿಡುತ್ತದೆ.

ಡಯಟ್ ಮಾತ್ರೆಗಳು ದೇಹದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಎ. ಡಿ. ಇ. ಮತ್ತು ಕೆ. ವಿಟಮಿನಗಳನ್ನು ಕಡಿಮೆ ಮಾಡುವುದರಿಂದ ಅನಾರೋಗ್ಯಗಳು ಹೆಚ್ಚಾಗುತ್ತದೆ.

ಡಯಟ್ ಮಾತ್ರೆಗಳು ಮಕ್ಕಳಲಾಗದಿರುವಿಕೆ, ಕಿಡ್ನಿ ಸಮಸ್ಯೆ, ಕೂದಲು ಉದರುವಿಕೆ, ಎದೆನೋವು, ಹೃದಯದ ಸಮಸ್ಯೆ, ಮುಂತಾದವಗಳಿಗೆ ಆಮಂತ್ರಣವನ್ನು ಕೊಡುತ್ತದೆ.

ಒಂದು ಪಡೆಯಲು ಮತ್ತೊಂದು ಬಿಟ್ಟು ಕೊಡಬೇಕು ಎಂಬಂತೆ ಬಳ್ಳಿಯಂತೆ ಬಳುಕುವ ಆಸೆಯಿಂದ,ಉತ್ತಮ ಆರೋಗ್ಯವನ್ನು ಬಿಟ್ಟುಕೊಟ್ಟಂತೆ ಆಗುತ್ತದೆ ಆದ್ದರಿಂದ ಉತ್ತಮ ವ್ಯಾಯಾಮ, ಯೋಗ, ಆಹಾರ ಕ್ರಮಗಳನ್ನು ಬಳಸುವುದು ಉತ್ತಮ..

LEAVE A REPLY

Please enter your comment!
Please enter your name here