ತಲೆನೋವು ಕಡಿಮೆ ಮಾಡುವ ಮನೆ ಮದ್ದುಗಳು

0
90

ಎಲ್ಲರಲ್ಲು ಹೆಚ್ಚಾಗಿ ಕಂಡುಬರುವ ತಲೆನೋವನ್ನು ಕಡಿಮೆ ಮಾಡುವುದು ಹೇಗೇ?

ನಮ್ಮ ಇಂದಿನ ಕೆಲಸ ಒತ್ತಡ, ಯೋಚನೆ, ಆಹಾರ ಸೇವನೆ, ನಿದ್ರಾ ಸಮಸ್ಯೆ ಇವುಗಳಿಂದ ಬಹು ಬೇಗನೆ ಬಂದು ಅಪ್ಪರಿಸುವಂತಹದು ತಲೆನೋವು ಇದು ಜಾಸ್ತಿಯಾದರೆ ತಲೆಯನ್ನೇ ಕಿತ್ತು ಎಸೆಯುವಷ್ಟು ಕೋಪ ಬರುತ್ತದೆ.ಇದನ್ನು ಕಡಿಮೆ ಮಾಡಿಕೊಳ್ಳಲು ಮಾತ್ರೆಗಳ ಮೊರೆ ಹೋಗುತ್ತೇವೆ, ಮಾತ್ರೆಗಳಿಲ್ಲದ ಮನೆಯಿಲ್ಲ ಎಂಬಂತಾಗಿದೆ. ಈ ಮಾತ್ರೆಗಳು ಕ್ಷಣದಲ್ಲಿ ತಲೆನೋವು ಹೋಗಿಸುತ್ತದೆ ಆದರೆ ಅದರ ಅಡ್ಡ ಪರಿಣಾಮ ಹೇಳತೀರದು ಆದ್ದರಿಂದ ಈ ಮಾತ್ರೆಗಳನ್ನು ಬಿಟ್ಟು ಆರೋಗ್ಯದಾಯಕ ಔಷಧಿಗಳಿಂದ ತಲೆನೋವು ಕಡಿಮೆಮಾಡಬಹುದು.

ಸ್ವಲ್ಪ ತಲೆ ನೋವು ಬರುವಾಗಲೇ  ಪೊಟ್ಯಾಸಿಯಂ ಮತ್ತು ಮೆಗ್ನಿಸಿಯಂ ಅನ್ನು ಹೆಚ್ಚು  ಒಳಗೊಂಡಿರುವ ಬಾಳೆಹಣ್ಣನ್ನು ತಿಂದರೆ ತಲೆನೋವು ಮಂಗಮಯಾವಾಗುತ್ತದೆ.

ಪೈನಾಪಲ್ ಸೇವನೆ ನಮ್ಮ ತಲೆನೋವನ್ನು ಕಡಿಮೆ ಮಾಡುತ್ತದೆ ಅದಕ್ಕೆ ಪೈನಾಪಲ್ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ

ಹೆಚ್ಚಿನ ನೀರಿನಿಂದ ಸಮೃದ್ಧವಾಗಿರುವ ಪೊಟ್ಯಾಸಿಯಂ ಮತ್ತು ಮೆಗ್ನಿಸಿಯಂ ಗಳಿಂದ ಆವೃತವಾಗಿರುವ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಹಾಗು ಇದು ಈ ಬಿಸಿಲಿನ ಕಾಲಕ್ಕೆ ತುಂಬಾ ದೇಹಕ್ಕೆ ತಂಪು ನೀಡುತ್ತೆ

ಮುಳ್ಳುಸೌತೆ ಸಹ ನೀರಿನ ಅಂಶ ಹೆಚ್ಚಾಗಿದ್ದು ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸಿ ತಲೆನೋವು ಕಡಿಮೆ ಮಾಡುತ್ತದೆ. ಊಟದ ಜೊತೆಗೆ ಮುಳ್ಳುಸೌತೆ ತಿನ್ನುವ ಅಭ್ಯಾಸ ಇರಲಿ

ಕೊತ್ತಂಬರಿ ಸೊಪ್ಪು, ಜೀರಿಗೆ, ಶುಂಠಿಯನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿದ ನಂತರ ಅದನ್ನು ಫಿಲ್ಟರ್ ಮಾಡಿ ಸೇವಿಸಿದರೆ ತಲೆನೋವು ಕಡಿಮೆಮಾಡುತ್ತದೆ.

ನಿಂಬೆಹಣ್ಣಿನ ರಸಕ್ಕೆ ಉಪ್ಪನ್ನು ಸೇರಿಸಿ ಸೇವಿಸುತ್ತಾ ಬಂದರೆ ತಲೆನೋವು ಕಡಿಮೆಯಾಗುತ್ತದೆ.

ನೈಸರ್ಗಿಕವಾದ ಗಾಳಿ ಮತ್ತು ಬೆಳಕು ಬರುವ ಕಡೆ 10 ನಿಮಿಷ ಪ್ರಾಣಾಯಾಮವನ್ನು ಮಾಡುವುದರಿಂದ ತಲೆನೋವು ಕಡಿಮೆ ಮಾಡಿಕೊಳ್ಳಬಹುದು.

ಮೆಗ್ನಿಸಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಹೆಚ್ಚಾಗಿ ಇರುವ ಸೊಪ್ಪು, ತರಕಾರಿಗಳನ್ನು ತಿನ್ನುವುದರಿಂದ ಸಹ ತಲೆನೋವು ಕಡಿಮೆಯಾಗುತ್ತದೆ. ಜೊತೆಗೆ ಸೇಬುಹಣ್ಣಿನ ಮೇಲೆ ಸ್ವಲ್ಪ ಉಪ್ಪು ಹಾಕಿ ತಿಂದು ನಂತರ ನೀರು ಕುಡಿದರೆ ತಲೆನೋವು ಕಡಿಮೆಯಾಗುತ್ತದೆ.

2 ಅಥವಾ 3 ವಿಳ್ಳೆದೇಲೆ ಯನ್ನು ಅರೆದು ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ಹೀಗೇ ಮಾಡುತ್ತ ನಿಮ್ಮ ತಲೆನೋವನ್ನು ನಿವಾರಿಸಿಕೊಳ್ಳಿ ಮಾತ್ರೆಗಳ ಸೇವನೆ ಬಿಟ್ಟುಬಿಡಿ.

LEAVE A REPLY

Please enter your comment!
Please enter your name here