ತಲೆ ನೋವು ಮತ್ತು ತಲೆಸುತ್ತುವಿಗೆ ಮನೆ ಮದ್ದು

0
85

ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು. ನೀವು ಮಾಡಬೇಕಾದ್ದು ಇಷ್ಟೆ, ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ, ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.

ಒಂದು ಲೋಟದಲ್ಲಿ ಹದವಾದ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬುವನ್ನು ಬೆರೆಸಿ.ಇದನ್ನು ಕುಡಿದರೆ ನಿಮ್ಮ ತಲೆನೋವು ತಕ್ಷಣ ಕಡಿಮೆ ಆಗುತ್ತದೆ.ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ.ಇದು ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ ಮುಕ್ತಿ ನೀಡುತ್ತದೆ.

ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು.ಇದು ನೋವು ನಿವಾರಕವಾದ್ದರಿಂದ ಬೇಗ ತಲೆನೋವು ನಿವಾರಿಸುತ್ತದೆ

ತಲೆನೋವನ್ನು ನಿವಾರಿಸಲು ಸುಲಭ ಉಪಾಯವೆಂದರೆ ದಾಲ್ಚಿನ್ನಿ ಪುಡಿಯನ್ನು ನೀರು ಬೇರೆಸಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.ಇದನ್ನು ಹಣೆಗೆ ಹಚ್ಚಿದರೆ ತಕ್ಷಣ ನೋವು ಕಡಿಮೆ ಆಗುತ್ತದೆ.

ಕೊತ್ತಂಬರಿ,ಸಕ್ಕರೆ ಯನ್ನು ನೀರಿನೊಂದಿಗೆ ಬೆರೆಸಿ ಕುಡಿದರೆ ತಲೆನೋವಿನಿಂದ ಪರಿಹಾರ ದೊರಕುವುದು.ಸಾಮಾನ್ಯ ತಂಡಿಯಿಂದ ತಲೆನೋವು ಬಂದಿದ್ದರೆ ಈ ರೀತಿ ಮಾಡಿ ಕುಡಿಯುವುದರಿಂದ ಕಡಿಮೆ ಆಗುತ್ತದೆ.

15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1 ಚಮಚದಷ್ಟು ರಸ ಕುಡಿಯಿರಿ. ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.

ಕೊತ್ತಂಬರಿ ಸೊಪ್ಪು ,ಜೀರಿಗೆ ಮತ್ತು ಶುಂಟಿ ಬೆರೆಸಿ ಮಾಡಿದ ಕಷಾಯ ಅಥವಾ ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು ಬೇಗ ಕಡಿಮೆ ಆಗುತ್ತದೆ. ಬಿಸಿ ನೀರಿಗೆ ಮೇಲೆ ಹೇಳಿದ ಪದಾರ್ಥ ಮಿಶ್ರಮಾಡಿ 5 ನಿಮಿಷಗಳವರೆಗೆ ಕುದಿಸಿ.ನಂತರ ಆ ನೀರನ್ನು ದಿನದಲ್ಲಿ ಎರಡು ಬಾರಿಯಾದರೂ ಕುಡಿಯಿರಿ. ನಿಮಗೆ ಉತ್ತಮ ಎನಿಸುವವರೆಗೂ ಕುಡಿಯುತ್ತಿರಿ.

ಇಂಗನ್ನು ತೆಂಗಿನ ಎಣ್ಣೆಯಲ್ಲಿ ಅರೆದು ಹಣೆಗೆ ಹಚ್ಚಿದರೆ ತಲೆನೋವ್ವು ಕಡಿಮೆ ಆಗುತ್ತದೆ. ಕೀಲು ನೋವ್ವಿಗೂ ಇದನ್ನು ಹಚ್ಚಿದರೆ ನೋವ್ವು ಕಡಿಮೆ ಆಗುತ್ತದೆ.

ಬಿಸಿಲಲ್ಲಿ ತಿರುಗುವುದರಿಂದ ಉಂಟಾಗುವ ತಲೆನೋವ್ವಿಗೆ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಅದರ ರಸವನ್ನು ಸೇವಿಸುವುದು ಪರಿಣಾಮಕಾರಿ.

ನಿಂಬೆ ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರೆದು ಹಣೆಗೆ ಹಚ್ಚುವುದರಿಂದ ಅರೆ ತಲೆನೋವು ಗುಣವಾಗುತ್ತದೆ.

ದಿನವು 10 ರಿಂದ 15 ಒಣದ್ರಾಕ್ಷಿಗಳನ್ನು ತಿಂದು ಹಾಲು ಕುಡಿಯುವುದರಿಂದ ದುರ್ಬಲತೆಯಿಂದ ತಲೆ ತಿರುಗುವುದು ನಿಲ್ಲುತ್ತದೆ.

ನೆಲ್ಲಿಕಾಯಿಯ ಶರಬತ್ತು ಮಾಡಿ ಕುಡಿಯುವುದರಿಂದ ತಲೆ ತಿರುಗುವುದು ನಿಲ್ಲುತ್ತದೆ.

ಹುಣಿಸೆ ಹಣ್ಣಿನ ಸಕ್ಕರೆ ಪಾನಕ ಕುಡಿದರೆ ತಲೆನೋವು ಪರಿಹಾರವಾಗುತ್ತದೆ.

ಉಷ್ಣದಿಂದ ತಲೆನೋವ್ವು ಉಂಟಾದರೆ ಕಲ್ಲಂಗಡಿಯ ರಸವನ್ನು ತೆಗೆದು ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ.

ರಾತ್ರಿ 5 ರಿಂದ 6 ಹನಿ ಬಾದಾಮಿ ತೈಲವನ್ನು ಮೂಗಿಗೆ ಹಾಕಿದರೆ ತಲೆನೋವು ಕಡಿಮೆ ಆಗುತ್ತದೆ.

ಸೇಬಿಗೆ ಸ್ವಲ್ಪ ಉಪ್ಪು ಹಚ್ಚಿ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.

ಏಲಕ್ಕಿ ಚೂರ್ಣ ಬೆರೆಸಿದ ನಿಂಬೆ ಪಾನಕ ಸೇವಿಸಿದರು ತಲೆ ತಿರುಗು ನಿಲ್ಲುತ್ತದೆ.

LEAVE A REPLY

Please enter your comment!
Please enter your name here