ತುಳಸಿಯಿಂದ ಏನೆಲ್ಲಾ ಪ್ರಯೋಜನ ಇದೆ ಅನ್ನೋದು ನಿಮಗೆ ಗೊತ್ತಿದೆಯಾ? ಓದಿ ತಿಳಿದುಕೊಳ್ಳಿ.

0
93

ತುಳಸಿಯಿಂದ ಏನೆಲ್ಲಾ ಪ್ರಯೋಜನ ಇದೆ ಅನ್ನೋದು ನಿಮಗೆ ಗೊತ್ತಿದೆಯಾ? ಓದಿ ತಿಳಿದುಕೊಳ್ಳಿ.

ತುಳಸಿ ಸಸ್ಯವು ಮೂಲತಃ ಇರಾನ್, ಭಾರತ ಹಾಗು ಏಷಿಯಾದ ಉಷ್ಣವಲಯದ ಪ್ರದೇಶಗಳ ಸ್ಥಳೀಯ ಸಸ್ಯವಾಗಿದೆ. ಇದನ್ನು ಈ ಪ್ರದೇಶಗಳಲ್ಲಿ ೫,೦೦೦ಕ್ಕೂ ಹೆಚ್ಚಿನ ವರ್ಷಗಳಿಂದ ಬೆಳೆಯಲಾಗುತ್ತಿದೆ. ಲ್ಯಾಮಿಯಾಸಿಸ್ ಎಂಬ ಕುಟುಂಬಕ್ಕೆ ಸೇರಿರುವ ತುಳಸಿಯ ವೈದ್ಯಕೀಯ ಹೆಸರು ಒಸಿಮಮ್ ಸೇಂಕ್ಟಮ್. ಹಸಿರು ಹಾಗೂ ತಿಳಿ ನೇರಳೆ ಬಣ್ಣದಲ್ಲಿ ದೊರೆಯುವ ತುಳಸಿಯ ತವರು ಮನೆ ಭಾರತ. ಆದ್ದರಿಂದ ಇದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವೇ ಆಗಿ ಹೋಗಿದೆ. ವೇದಗಳ ಕಾಲದಲ್ಲಿಯೇ ತುಳಸಿಗೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿತ್ತು. ಹೆಂಗಸರು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಒಂದು ತಂಬಿಗೆ ನೀರನ್ನು ತುಳಸಿ ಗಿಡಕ್ಕೆ ಹೊಯ್ದು ಪ್ರದಕ್ಷಿಣೆ ಬಂದು ತುಳಸಿ ದೇವರಿಗೆ ಪ್ರಾರ್ಥಿಸಿ ದಿನದ ಆರಂಭವನ್ನು ಮಾಡುತ್ತಾರೆ. ಇದು ಮನಸ್ಸಿಗೆ ತಾಜಾತನವನ್ನು ಆಹ್ಲಾದವನ್ನು ನೀಡಿ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ರತಿ ಮನೆಯ ಎದುರು ಒಂದು ತುಳಸಿ ಕಟ್ಟೆ ಇದ್ದೆ ಇರುತ್ತದೆ. ತುಳಸಿ ಕಟ್ಟೆಯ ಮೇಲೂಂದು ತುಳಸಿ ಗಿಡ. ಆದರೆ ಈ ತುಳಸಿ ಗಿಡ ಹೆಚ್ಚು-ಕಡಿಮೆ ನಮ್ಮ ಎಲ್ಲಾ ಮಾರಣಾಂತಿಕ ಕಾಯಿಲೆಗಳಿಗೂ ರಾಮಬಾಣ ಎಂದು ನಿಮಗೆ ಗೊತ್ತೆ? ಹೌದು. ತುಳಸಿ ಗಿಡದಿಂದ ಹೊರಬರುವ ಕಿರಣಗಳು ನಮ್ಮ ದೇಹವನ್ನು ಪ್ರವೇಶಿಸಿ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಪ್ರತಿದಿನದ ಪ್ರಾರಂಭವನ್ನು ಒಂದು ತುಳಸಿ ಎಲೆಯನ್ನು ತಿನ್ನುವ ಮುಖಾಂತರ ಪ್ರಾರಂಭಿಸಿ ಎನ್ನುವುದು ಹೆಚ್ಚಿನವರ ಮಾತು. ಆದರೆ ನಾವು-ನೀವು ಇದನ್ನು ಕಡೆಗಣಿಸುವುದೆ ಹೆಚ್ಚು. ಆದರೆ ತುಳಸಿಯ ವೈಜ್ಞಾನಿಕ ಸತ್ಯವನ್ನು ನಾವು ನಿಮ್ಮ ಮುಂದೆ ಹೇಳುತ್ತೇವೆ ಕೇಳಿ.

ಜ್ವರ ಹಾಗೂ ಶೀತಕ್ಕೆ ಇದರ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಮತ್ತು ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿ. ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ಸತತವಾಗಿ ತೆಗೆದುಕೊಂಡಲ್ಲಿ ಬಾಧೆ ಕಡಿಮೆಯಾಗುತ್ತದೆ.

ಪ್ರತಿದಿನ ತುಳಸಿ ಎಲೆಗಳನ್ನು ಜಗಿಯುವುದರಿಂದ ಹಾಗೂ ತುಳಸಿ ಚಹಾ ಕುಡಿಯುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಆತಂಕ ನಿವಾರಣೆಯಲ್ಲು ಸಹಾಯ ಮಾಡುತ್ತದೆ.ಇದು ರಿಂಗ್ವಾರ್ಮ್ಸ ರೀತಿಯ ಚರ್ಮದ ತೊಂದರೆ ಹಾಗೂ ತುರಿಕೆ ಮತ್ತು ಸಮಸ್ಯೆಗಳು ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ.

ತುಳಸಿ ಎಲೆ ಆಹಾರವನ್ನು ಉತ್ತಮವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.ತುಳಸಿ ಎಲೆಯು ಹಲ್ಲಿನ ಎಲ್ಲಾ ತರಹದ ಬಾದೆಗೂ ರಾಮಬಾಣವಾಗಿದೆ, ಹಲ್ಲಿನ ವಸಡುಗಳನ್ನು ಆರೋಗ್ಯಕರವಾಗಿಡುತ್ತದೆ.ತುಳಸಿಯ ತಾಜಾ ರಸವನ್ನು ಕಿವಿಗೆ ಹಾಕುವುದರಿಂದ ಕಿವಿನೋವಿನ ಸಮಸ್ಯೆಗೆ ಪರಿಹಾರವಾಗಿದೆ.

ತುಳಸಿ ಎಲೆಯು ಕೆಮ್ಮಿಗೆ ಮನೆ ಔಷದವಾಗಿದೆ. ತುಳಸಿ ಎಲೆ ಹಾಗೂ ಜೇನಿನ ಮಿಶ್ರಣದ ರಸ ಕುಡಿಯುವುದು ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣವಾಗಿದೆ. ಕಿಡ್ನಿಯಲ್ಲಿ ಕಲ್ಲಿದ್ದರೆ ಅದು ಮೂತ್ರದ ಮೂಲಕ ಹೋಗಲು ಈ ರಸ ಸಹಕಾರಿಯಾಗಿದೆ.

ತಲೆನೋವಿಗೆ ತುಳಸಿ ಎಲೆ ಹಾಗೂ ಗಂಧದ ಪೇಸ್ಟ್ ಮಾಡಿಕೊಂಡು ಹಣೆಗೆ ಹಚ್ಚಿಕೊಂಡರೆ ತಲೆ ನೋವು ಉಪಶಮನವಾಗುವುದು. ರಾತ್ರಿ ಕುರುಡು ಹಾಗೂ ಮಂದಕಣ್ಣಿನ ಸಮಸ್ಯೆ ಇದ್ದರೆ ಒಂದೆರಡು ಡ್ರಾಪ್ಸ್ ತುಳಸಿ ರಸವನ್ನು ಕಣ್ಣಿಗೆ ಹಾಕಿಕೊಳ್ಳಬೇಕು. ಇದರಿಂದ ಕಣ್ಣು ಸ್ವಚ್ಛವಾಗುತ್ತದೆ.

LEAVE A REPLY

Please enter your comment!
Please enter your name here