ದಮ್ಮು ಅಥವ ಉಬ್ಬಸ ಅಥವ ಗೂರಲು ಅಥವ ಅಸ್ತಮಾ ಸಮಸ್ಯೆಗೆ ಉತ್ತಮ ಮನೆ ಮದ್ದು

0
36

ಮನುಷ್ಯನಾಗಿ ಹುಟ್ಟಿದ ನಂತರ ಒಂದಲ್ಲ ಎರಡಲ್ಲ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದರಲ್ಲೂ ತುಂಬಾ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಗಂಟಲಿನ ಸಮಸ್ಯೆಗಳು ಗಂಟಲಿನ ಸಮಸ್ಯೆಗಳಲ್ಲಿ ದಮ್ಮು ಉಬ್ಬಸ ಗೂರಲು ಅಸ್ತಮಾ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳಿಗೆ ಪ್ರಮುಖ ಕಾರಣಗಳು ಎಂದರೆ ಅಲರ್ಜಿ ಧೂಳು ವಾತಾವರಣದ ಸಮಸ್ಯೆ. ನೀರಿನ ವ್ಯತ್ಯಾಸ ಮಾಲಿನ್ಯ. ಆದುನಿಕ ಜೀವನ ಶೈಲಿ. ಪ್ರಮುಖ ಕಾರಣವಾಗುತ್ತವೆ. ಜೊತೆಗೆ ಶೀತ ಕಾಲದಲ್ಲಿ ಈ ಸಮಸ್ಯೆ ಬಹಳ ಹೆಚ್ಚಾಗಿ ಕಾಣಿಸುತ್ತದೆ ಹಾಗೂ ಕೆಲವು ಸಲ ಇದರಿಂದ ಕಫ ಹಳದಿ ಬಣ್ಣಕ್ಕೆ ಬರುತ್ತದೆ. ಆದ್ರೆ ಹಳ್ಳಿಯ ಸ್ವಚಂದ ಗಾಳಿಯಲ್ಲಿ ಇರುವ ಜನಕ್ಕೆ ಈ ರೀತಿಯ ಖಾಯಿಲೆಗಳು ಅಷ್ಟೇನೂ ಬೇಗ ಆವರಿಸುವುದಿಲ್ಲ. ಆದರೆ ಸಿಟಿ ಧೂಳಿನ ಮದ್ಯೆ ಬದುಕುವ ಸಾಕಷ್ಟು ಜನರಿಗೆ ಏನಾದರು ಒಂದು ಸಮಸ್ಯೆ ಬಂದೇ ಬರುತ್ತದೆ. ಈ ಸಮಸ್ಯೆಗಳು ಬಂದಾಗ ಸರಿಯಾಗಿ ನಿದ್ದೆ ಬರುವುದಿಲ್ಲ. ಸರಿಯಾಗಿ ಉಸಿರಾಡಲು ಆಗುವುದಿಲ್ಲ. ಏನೋ ಒಂದು ರೀತಿಯ ಇರಿಟೇಶನ್ ಆಗುತ್ತದೆ. ಆದರೆ ಈ ಸಮಸ್ಯೆಗಳು ಬಂದ ತಕ್ಷಣ ಅಷ್ಟು ಸುಲಭವಾಗಿ ಹೋಗುವುದಿಲ್ಲ ಕನಿಷ್ಠ 3 ರಿಂದ 4 ದಿನ ಆದರೂ ಈ ಸಮಸ್ಯೆ ಇಂದ ಹೊದ್ದಾಡುತ್ತೇವೆ. ಆದರೆ ಈ ಸಮಸ್ಯೆಗಳಿಗೆಲ್ಲ ಸುಲಭ ಆಯುರ್ವೇದದ ಮದ್ದುಗಳನ್ನು ಬಳಸಿದರೆ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಸಮಸ್ಯೆಯಿಂದ ದೂರವಾಗಬಹುದು.

ಹಾಗಾದರೆ ಅವುಗಳು ಯಾವುವು ಎಂದು ನೋಡೋಣ: ವೀಳ್ಯದೆಲೆ ಇದರಲ್ಲಿ ಹಲವಾರು ರೀತಿಯ ಆರೋಗ್ಯದ ಗುಣಗಳು ಇವೆ ಎಂದು ಗೊತ್ತು ಅಲ್ಲವೇ ಹಾಗಾಗಿ ಒಂದು ವೀಳ್ಯದ ಎಲೆಯನ್ನು ತೆಗೆದುಕೊಂಡು ಅದರ ಜೊತೆಗೆ ಸ್ವಲ್ಪ ತುಳಸಿ ಎಲೆ. ಒಂದು ಲವಂಗ ಸ್ವಲ್ಪ ಪಚ್ಚ ಕರ್ಪೂರ ಇವುಗಳೆಲ್ಲವನ್ನು ತೆಗೆದುಕೊಂಡು ಒಂದು ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದುಕೊಂಡು ಅದಕ್ಕೆ ತುಳಸಿ ಎಲೆ ಪಚ್ಚ ಕರ್ಪುರ ಲವಂಗ ಇವುಗಳೆಲ್ಲವನ್ನು ಹಾಕಿ ಮಡಚಿಕೊಂಡು ದಿನಕ್ಕೆ 2 ಬಾರಿ ಸೇವಿಸಿದರೆ ಸಮಸ್ಯೆಗಳು ದೂರ ಅಗುತ್ತವೆ. ಆಡುಸೋಗೆ ಎಳೆಯ ರಸ ಎರಡು ಚಮಚ ಮತ್ತು ಎರಡು ಚಮಚ ಜೇನು ತುಪ್ಪ , ಜೊತೆಗೆ ಸ್ವಲ್ಪ ಶುಂಠಿ ಪುಡಿ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಿದ್ದರೆ ಸಮಸ್ಯೆಗಳು ದೂರ ಅಗುತ್ತವೆ. ಸ್ವಲ್ಪ.ಆಡುಸೋಗೆ ರಸಕ್ಕೆ ನಲ್ಲಿಕಾಯಿ , ತಾರೆ ಕಾಯಿ ಮತ್ತು ಅಳಲೆಕಾಯಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನಿತ್ಯ ಎರಡು ಬಾರಿ ಸೇವಿಸಿದರೆ ಸಮಸ್ಯೆಗಳು ಹೋಗುತ್ತವೆ.

ಶುಂಠಿ ಮೆಣಸು ಹಿಪ್ಪಲಿ ಇವೆಲ್ಲವನ್ನು ಸಮಪ್ರಮಾಣದಲ್ಲಿ ಚೂರ್ಣ ಮಾಡಿಕೊಂಡು ಅಷ್ಟೇ ಪ್ರಮಾಣದ ಜೇನು ತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿಯಂತೆ ಸೇವಿಸಬೇಕು. ಬೆಳಿಗ್ಗೆ ಎದ್ದಾಗ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ. ಮೆಣಸಿನ ಪುಡಿ ಸೇರಿಸಿ ಕುಡಿದರೆ ಸಮಸ್ಯೆ ದೂರ ಆಗುತ್ತದೆ. ತುಳಸಿ ಎಲೆ. ಪುದಿನ ಎಲೆ. ವೀಳ್ಯದೆಲೆ. ಇವೆಲ್ಲವನ್ನು ತೆಗೆದುಕೊಂಡು ಇದರಿಂದ ರಸವನ್ನು ತೆಗೆದುಕೊಂಡು ದಿನಕ್ಕೆ 3 ರಿಂದ 4 ಬಾರಿ ಕುಡಿದರೆ ಸಮಸ್ಯೆಗಳು ದೂರ ಅಗುತ್ತವೆ. ಹಾಗಾಗಿ ಈ ಸಮಸ್ಯೆಗಳು ಕಾಣಿಸಿಕೊಂಡಾಗ ಆದಷ್ಟು ಇಂಗ್ಲಿಷ್ ಮೆಡಿಷನ್ ಬಿಟ್ಟು ಆಯುರ್ವೇದದ ಔಷಧಿಗಳನ್ನು ಬಳಸಿದರೆ ಸಮಸ್ಯೆಗಳು ಬೇಗ ಗುಣವಾಗುತ್ತವೆ ಮತ್ತು ನಿಮ್ಮ ಆರೋಗ್ಯಕ್ಕೆ ಯಾವುದೇ ಸೈಡ್ ಎಫೆಕ್ಟ್ ಇರೋದಿಲ್ಲ.

LEAVE A REPLY

Please enter your comment!
Please enter your name here