ದೇಹದಲ್ಲಿ ರಕ್ತ ಶುದ್ಧಿ ಆಗ್ತಾ ಇರ್ಬೇಕು ಇಲ್ಲ ಅಂದ್ರೆ ಅಪಾಯ ತಪಿದಲ್ಲ

0
66

ರಕ್ತ ವೃದ್ದಿ ಮತ್ತು ರಕ್ತ ಶುದ್ಧಿ

ಮನುಷ್ಯನ ದೇಹಕ್ಕೆ ರಕ್ತ ವೃದ್ದಿ ಮತ್ತು ರಕ್ತ ಶುದ್ಧಿ ತುಂಬಾ ಅತ್ಯಗತ್ಯ ಇಲ್ಲ ಇದು ಸರಿಯಾಗಿ ಆಗದೆ ಇದ್ದಾಗ ಪ್ರತಿ ನಿತ್ಯ ನಾವು ನೋಡ್ತಾ ಇರ್ತೇವೆ ಎಷ್ಟೋ ಜನ ಸಣ್ಣ ವಯಸಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾವಿಗೀಡಾಗುತ್ತಾರೆ. ನಾವು ನೀಡಿರುವ ಕೆಲವು ಮನೆ ಮದ್ದು ಬಳಸಿಕೊಂಡು ನೀವು ನಿಮ್ಮ ದೇಹವನ್ನ ಹತೋಟಿಗೆ ಇಟ್ಟುಕೊಳ್ಳಬಹುದು.

1. 20-25 ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಅದನ್ನು ತಿಂದು ಅದೇ ನೀರನ್ನು ಕುಡಿದರೆ ರಕ್ತ ವರ್ಧನೆ ಆಗುತ್ತದೆ. ಇಂದ್ರಿಯ ದೌರ್ಬಲ್ಯ ಗುಣವಾಗುತ್ತದೆ.

2. 5 ರಿಂದ 6 ಅಂಜೂರದ ಹಣ್ಣೂಗಳನ್ನು ಒಣದ್ರಾಕ್ಷಿಗಳೊಂದಿಗೆ 1 ಕಪ್ ಹಾಲಿನಲ್ಲಿ ಹಾಕಿ ಬೇಯಿಸಿ, ಈ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧಿಯಾಗಿ ರಕ್ತ ವೃದ್ದಿಯಾಗುತ್ತದೆ.

3.ಕರಬೂಜ ಹಣ್ಣು ತಂಪು ಗುಣವನ್ನು ಹೊಂದಿದ್ದು ರಕ್ತವನ್ನು ಶೋಧಿಸುತ್ತದೆ.

4.ದಾಳಿಂಬೆ ಹಣ್ಣಿನ ರಸ ರಕ್ತವರ್ಧಕ. ಇದರ ಸೇವನೆಯಿಂದ ರಕ್ತ ಸಂಚಾರ ಸುಗಮವಾಗುತ್ತದೆ.

5.ಅರ್ದ ಲೋಟ ಬಾಳೆಯ ದಿಂಡಿನ ರಸವನ್ನು ದಿನವೂ ಸೇವಿಸುವುದರಿಂದ ಅಧಿಕ ರಕ್ತದೊತ್ತಡ HBP ಕಡಿಮೆ ಆಗುತ್ತದೆ.

6.ಬಾದಾಮಿಯನ್ನು ರಾತ್ರಿ ನೆನೆಸಿ ಮರುದಿನ ಬೆಳಗ್ಗೆ ಸಿಪ್ಪೆ ತೆಗೆದು ಅರೆಯಬೇಕು. ಅದನ್ನು ಹಾಲಲ್ಲಿ ಬೆರೆಸಿ ಪ್ರತಿದಿನ ಕುಡಿದರೆ ದೇಹಬಲ, ರಕ್ತ ವರ್ಧಿಸುತ್ತದೆ.

7.ರಾತ್ರಿ 5-6 ಹನಿ ಬಾದಾಮಿ ತೈಲವನ್ನು ಮೂಗಿಗೆ ಹಾಕಿದರೆ ರಕ್ತದೊತ್ತಡ (BP) ಕಡಿಮೆ ಆಗುತ್ತದೆ.

8.ಬೋರಹಣ್ಣಿನ ನಿಯಮಿತವಾದ ಸೇವನೆಯಿಂದ ರಕ್ತವು ಶುದ್ಧವಾಗುತ್ತದೆ.

9.ಮೊಸಂಬಿ ಸೇವನೆಯಿಂದ ರಕ್ತನಾಳದ ಕೊಬ್ಬು ನಿವಾರಣೆಯಾಗಿ ಶರೀರದಲ್ಲಿನ ರಕ್ತ ಸಂಚಾರ ಸುಗಮವಾಗುತ್ತದೆ.

10.ಸಪೋಟ ಹಣ್ಣನ್ನು ದಿನನಿತ್ಯ ಸೇವಿಸಿದರೆ ದೇಹಕ್ಕೆ ತಂಪು ಮತ್ತು ರಕ್ತ ವೃದ್ದಿಯಾಗುತ್ತದೆ.

LEAVE A REPLY

Please enter your comment!
Please enter your name here