ನಿಮಗೆ ಹೆಚ್ಚು ಕೂದಲು ಉದುರುವ ಸಮಸ್ಯೆ ಇದ್ಯೆ ಹೀಗೆ ಮಾಡಿ

0
71

ನಿಮಗೆ ಹೆಚ್ಚು ಕೂದಲು ಉದುರುವ ಸಮಸ್ಯೆ ಇದ್ಯೆ ಹೀಗೆ ಮಾಡಿ

ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ. ನಾವು ಕೆಳಗೆ ನೀಡಿರುವ ಕೆಲವು ಸಲಹೆಗನ್ನು ಉಪಯೋಗಿಸಿ ಕೂದಲು ಉದುರುವುದನ್ನು ತಡೆಗಟ್ಟಿ

1.ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ವಾರದಲ್ಲಿ 3 ದಿನವಾದರೂ ತಲೆ ಸ್ನಾನ ಮಾಡಿ,  ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.

2. ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.

3. ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ.

4. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.

5. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.

6. ಯಾವಾಗಲೂ ನೈಸರ್ಗಿಕ ಶಾಂಪೂವನ್ನೇ ತಲೆ ತೊಳೆಯಲು ಬಳಸಿ. ಆದರೂ ಬಹಳಷ್ಟು ಶಾಂಪೂಗಳು ರಾಸಾಯನಿಕವನ್ನೇ ಹೊಂದಿರುತ್ತದೆ. ಇದು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಲೂ ಬಹುದು. ರಾಸಾಯನಿಕಗಳು ತಲೆಯ ಉಷ್ಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವೇ ಪಿತ್ತ. ಹಾಗಾಗಿ ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ತೊಳೆಯಲು ಬಳಸುವುದು ಉತ್ತಮ.

8.ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.

LEAVE A REPLY

Please enter your comment!
Please enter your name here