ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಈ ವಿಷ್ಯ ತಿಳಿದುಕೊಳ್ಳಬೇಕು

0
29

ಇವತ್ತಿನ ಲೇಖನದಲ್ಲಿ ಮಕ್ಕಳ ಭೌತಿಕ ಮಾನಸಿಕ ಮತ್ತು ದೈಹಿಕ ಆರೋಗ್ಯಕರ ಬೆಳವಣಿಗೆಗೆ ಕೆಲವೊಂದು ಆಹಾರಗಳನ್ನು ಕೊಡಲೇಬೇಕು ಅಥವಾ ಅವರು ಕೆಲವೊಂದು ಆಹಾರ ಗಳನ್ನ ಸೇವಿಸಲೇಬೇಕು ಈ ಆಹಾರಗಳು ಯಾವುದು ಎಂದು ತಿಳಿಯಲು ಈ ಲೇಖನ ಪೂರ್ತಿ ಆಗಿ ಓದಿ. ಫ್ರೆಂಡ್ಸ್ ಈ ಸಣ್ಣ ಮಕ್ಕಳಿಗೆ ಅಥವಾ ಸ್ಕೂಲ್ ಗೆ ಹೋಗುವ ಮಕ್ಕಳಿಗೆ ನೀವು ಎಷ್ಟು ಆರೋಗ್ಯಕರ ಆಹಾರ ಕೊಡುತ್ತೀರಿ ಅಷ್ಟೇ ಆರೋಗ್ಯಕರವಾಗಿ ಅವರು ಭೌತಿಕವಾಗಿ ಹಾಗೂ ದೈಹಿಕವಾಗಿ ಬೆಳವಣಿಗೆ ಆಗುತ್ತಾರೆ ಹಾಗಾಗಿ ಆದಷ್ಟು ಅವರ ಆಹಾರದ ಕಡೆ ನಿಮಗೆ ಗಮನ ಇರಲಿ. ಅಂಗಡಿಯಲ್ಲಿ ಸಿಗುವ ಪ್ರೋಸೆಸಡ್ ಫುಡ್ ಆಡೆಡ್ ಶುಗರ್ ಫುಡ್ ಅಥವಾ ಪ್ಯಾಕೆಟ್ ಫುಡ್ ಕೊಡುವುದಕ್ಕಿಂತ ಹಣ್ಣುಗಳನ್ನು ಕೊಡಿ ಅವರ ಸ್ನಾಕ್ಸ್ ಟೈಮ್ ನಲ್ಲಿ ಫ್ರೆಶ್ ಆಗಿರುವ ಸೀಸನಲ್ ಫ್ರೂಟ್ಸ್ ಕೊಡಿ. ಹಣ್ಣುಗಳಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್ ಇರುವುದರಿಂದ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಲವಾರು ಸಾಂಕ್ರಾಮಿಕ ಖಾಯಿಲೆ ಗಳಿಂದ ರಕ್ಷಿಸುತ್ತದೆ ಅಷ್ಟೆ ಅಲ್ಲ ಅವರಲ್ಲಿ ಫ್ರಿ ರಾಡಿಕಲ್ಸ್ ಸಂಕೆಯನ್ನು ಇವಾಗಿನಿಂದ ಕಡಿಮೆ ಮಾಡುತ್ತೆ. ಇದರಿಂದ ಅವರ ಬಾಡಿ ಸೆಲ್ಗಳು ಹೆಲ್ತಿಯಾಗಿ ಬೆಳವಣಿಗೆ ಆಗುತ್ತೆ.

ಇನ್ನು ಮನೆಯಲ್ಲೇ ತಯಾರಿಸಿದ ಮೊಸರನ್ನು ಆಗಾಗ ಅವರ ಡಯಟ್ ನಲ್ಲಿ ಆಡ್ ಮಾಡುತ್ತಾ ಇರಿ ಹಾಗೆ ದಿನಕ್ಕೊಂದು ಮೊಟ್ಟೆಯನ್ನು ಕೊಡಿ ಇಡೀ ಒಂದು ಮೊಟ್ಟೆಯಲ್ಲಿ ಎಲ್ಲಾ ರೀತಿಯಲ್ಲಿ ಅಮೈನೋ ಆಸಿಡ್ ಇರುವುದರಿಂದ ಪ್ರೋಟಿನ್ ಕೊರತೆ ಮಕ್ಕಳಲ್ಲಿ ಕಂಡು ಬರುವುದಿಲ್ಲ ಹಾಗಾಗಿ ನಿಮ್ಮ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆಯನ್ನು ಕೊಡಿ. ಕೆಲವರು ಮೊಟ್ಟೆ ತಿನ್ನುವುದಿಲ್ಲ ಅಂತವರು ಬೇರೆ ಪ್ರೋಟಿನ್ ಇರುವ ಆಹಾರ ನಿಮ್ಮ ಮಕ್ಕಳಿಗೆ ಕೊಡಿ. ಇನ್ನು ಕೆಲವೊಂದು ಮಕ್ಕಳು ತರಕಾರಿ ತಿನ್ನುವುದಿಲ್ಲ ಆದಷ್ಟು ಅವರಿಗೆ ಬುದ್ದಿ ಹೇಳಿ ಅವರ ಆಹಾರದಲ್ಲಿ ತರಕಾರಿಯನ್ನು ಆಡ್ ಮಾಡಿ ವಾರಕ್ಕೆ ಒಂದೆರಡು ಸಲ ಆದರೂ ಈ ಹಸಿರು ಸೊಪ್ಪು ಬಸ್ಸಾರು ಅಥವಾ ಉಪ್ಸಾರು ಗಳನ್ನ ನಿಮ್ಮ ಮಕ್ಕಳಿಗೆ ಕೊಡಿ. ಹಾಗೆ ನಿಮ್ಮ ಮಕ್ಕಳ ಡಯಟ್ ನಲ್ಲಿ ಓಟ್ಸ್ ಅನ್ನು ಆಡ್ ಮಾಡಿ ಕೆಲವರು ಓಟ್ಸ್ ತಿಂದರೆ ತೆಳ್ಳಗೆ ಆಗುತ್ತಾರೆ ಎಂದುಕೊಳ್ಳುತ್ತಾರೆ ಹಾಗೇನೂ ಇಲ್ಲ ಓಟ್ಸ್ ಅನ್ನು ನಿಮ್ಮ ಮಕ್ಕಳಿಗೂ ಸಹ ಕೊಡಬಹುದು ಓಟ್ಸ್ ನಲ್ಲಿ ಎಲ್ಲಾ ರೀತಿಯ ವಿಟಮಿನ್ ಮತ್ತು ಮಿನರಲ್ಸ್ ಗಳು ಇವೆ ಹಾಗೆ ಇದೊಂದು ಹೆಲ್ಡಿ ಕಾರ್ಬೋಹೈಡ್ರೇಟ್ ನ ಸೋರ್ಸ್ ಆಗಿದೆ.

ಇನ್ನು ಒಮೆಗಾ3 ಫ್ಯಾಟಿ ಆಸಿಡ್ ಇರುವ ಆಹಾರವನ್ನು ಹೆಚ್ಚೆಚ್ಚಾಗಿ ಕೊಡಿ ಅದರಲ್ಲೂ ವಾಲ್ ನಟ್ಸ್ ಅಥವಾ ಆಕ್ರುಟ್ ಬಾದಾಮಿ ಅಥವಾ ಅಗಸೇ ಬೀಜ ಹಾಗೆ ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ನಲ್ಲಿ ಒಮೆಗಾ3 ಫ್ಯಾಟಿ ಆಸಿಡ್ ಇದ್ದೆ ಇರುತ್ತೆ. ಹಾಗೆ ಫಿಶ್ ಅಥವಾ ಮೀನು ಅಲ್ಲು ಸಹ ಒಮೆಗಾ3 ಫ್ಯಾಟಿ ಆಸಿಡ್ ಹೆಚ್ಚಾಗಿ ಇದೆ ಒಂದು ವೇಳೆ ಮೀನು ತಿಂದಿಲ್ಲ ಅಂದರೂ ಪರವಾಗಿಲ್ಲ ಆದಷ್ಟು ಡ್ರೈ ಫ್ರೂಟ್ಸ್ ಅನ್ನು ಮಕ್ಕಳ ಡಯಟ್ ನಲ್ಲಿ ಆಡ್ ಮಾಡಿ. ಈ ಒಮೆಗಾ3 ಫ್ಯಾಟಿ ಆಸಿಡ್ ಇರುವ ಎಲ್ಲ ಆಹಾರಗಳು ಬ್ರೈನ್ ಫುಡ್ಸ್ ಎಂದು ಕರೆಯುತ್ತಾರೆ ನಮ್ಮ ಮೆದುಳಿಗೆ ಈ ಆಹಾರಗಳು ಬೇಕೇ ಬೇಕು. ಇನ್ನೂ ಆಲಿವ್ ಆಯಿಲ್ ಬಗ್ಗೆ ನೀವು ಕೇಳಿರುತ್ತೀರಿ ಬೆಲೆಯಲ್ಲಿ ಇದು ಜಾಸ್ತಿ ಆದರೂ ಇದರ ಹೆಲ್ತ್ ಬೆನಿಫಿಟ್ಸ್ ಸಾಕಷ್ಟು ಇದೆ ಇದನ್ನು ಅಡಿಗೆ ಯಲ್ಲಿ ಬಳಸದೆ ಇದ್ದರೂ ವೆಜಿಟೇಬಲ್ ಸಲಾಡ್ ಮಾಡುವಾಗ ಅದರ ಮೇಲೆ ಒಂದು ಸ್ಪೂನ್ ಆಲಿವ್ ಆಯಿಲ್ ಹಾಕಿ ಕೊಡಿ ಹಸಿಯಾಗಿ ನಾವು ಆಲಿವ್ ಆಯಿಲ್ ಸೇವಿಸುವಾಗ ಅದನ್ನು ಬಿಸಿ ಮಾಡುವುದಿಲ್ಲ. ಈ ಕೆಲವು ಆಹಾರಗಳು ತುಂಬಾ ಹೆಲ್ದಿ ಆಹಾರಗಳು ಆಗಿವೆ. ಇದರಿಂದ ನಿಮ್ಮ ಮಕ್ಕಳ ಭೌತಿಕ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮತ್ತು ಆರೋಗ್ಯಕರವಾಗಿ ಆಗುತ್ತೆ. ಈ ದಿನಗಳಲ್ಲಿ ನಿಮ್ಮ ಮಕ್ಕಳಿಗೆ ಎಷ್ಟು ಹೆಲ್ದಿ ಆಹಾರ ಕೊಡುತ್ತೀರಿ ಮುಂದೆ ಅವರ ಆರೋಗ್ಯ ಸಪೋರ್ಟ್ ಆಗಿ ಇರುತ್ತೆ. ಈ ಎಲ್ಲಾ ವಿಚಾರಗಳು ಪೋಷಕರ ಕೈನಲ್ಲಿ ಇರುತ್ತೆ

LEAVE A REPLY

Please enter your comment!
Please enter your name here