ನಿಮ್ಮ ಮೊಬೈಲ್ ಫೋನ್ ಕಳೆದು ಹೋದಲ್ಲಿ ಈ ರೀತಿ ಮಾಡಿ ಪುನಃ ಪಡೆಯಿರಿ.

1
144

ನಿಮ್ಮ ಮೊಬೈಲ್ ಫೋನ್ ಕಳೆದು ಹೋದಲ್ಲಿ ಈ ರೀತಿ ಮಾಡಿ ಪುನಃ ಪಡೆಯಿರಿ.

ಮೊಬೈಲ್ ಕೊಳ್ಳುವಾಗ ಬೆವರು ಸುರಿಸಿ ದುಡಿದು ಕೂಡಿಟ್ಟ ಹಣದಿಂದ ಕೊಂಡುಕೊಳ್ಳುತ್ತೇವೆ. ಆದ್ರೆ ಅಷ್ಟೊಂದು ಕಷ್ಟದಲ್ಲಿ ಕೊಂಡ ಮೊಬೈಲ್ ಒಂದೇ ಕ್ಷಣದಲ್ಲಿ ನಿಮ್ಮ ಕೈ ತಪ್ಪಿ ಹೋದರೆ ಆಗುವ ದುಃಖ ಹೇಳತೀರದು. ಇದನ್ನು ತಪ್ಪಿಸಲು ತಮ್ಮ ಮೊಬೈಲಿಗೆ ಕವರ್, ಪೌಚ್, ಬ್ಯಾಗ್, ಟ್ಯಾಗ್ ಅಂತೆಲ್ಲ ಹಾಕಿಕೊಂಡು ರಕ್ಷಿಸುತ್ತಿರುತ್ತೇವೆ. ಅಷ್ಟಾದರೂ, ಕಳೆದು ಹೋಯಿತೆಂದರೆ ಸಿಕ್ಕಾಪಟ್ಟೆ ಬೇಜಾರು ಗ್ಯಾರಂಟಿ. ಆರ್ಥಿಕ ನಷ್ಟ ಒಂದು ಕಡೆಯಾದರೆ, ಅದರಲ್ಲಿದ್ದ ಫೋನ್ ಬುಕ್ ಮತ್ತು ಡೇಟಾಗಳು ಕೈ ತಪ್ಪಿಹೋದ ದುಃಖ ಮತ್ತೊಂದು ಕಡೆ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಮೊಬೈಲ್ ವಾಪಸ್ ಪಡೆಯುವುದಕ್ಕೆ, ಕೊನೆಪಕ್ಷ ಅದರಲ್ಲಿನ ಡೇಟಾಗಳ ಬ್ಯಾಕ್ ಅಪ್ ಪಡೆಯುವುದಕ್ಕೋಸ್ಕರವಾದರೂ ನೆರವು ನೀಡುವ ಕೆಲವು ಟೂಲ್‌ಗಳು ಪ್ಲೇ ಸ್ಟೋರ್ ಅಲ್ಲಿ ಸಿಗುತ್ತದೆ.

ಪೊಲೀಸ್ ಗೆ ದೂರು ಕೊಟ್ಟರೆ ಮೊಬೈಲನ್ನು ಹುಡುಕಿಕೊಡುವ ಗ್ಯಾರಂಟಿ ಇರುವುದಿಲ್ಲ. ಆದರೆ ನಿಮ್ಮ ಮೊಬೈಲನ್ನು ಒಂದೇ ದಿನದಲ್ಲಿ ಹುಡುಕಲು ಸಾಧ್ಯವಿದೆ.
ಹೊಸ ಮೊಬೈಲ್ ತೆಗೆದುಕೊಂಡ ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಐಎಂಇಐ ಎಂಬ ವಿಶೇಷ ನಂಬರ್ ಇರುತ್ತದೆ. ಈ ಇಂಟರ್ ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರನ್ನು ಮೊದಲು ಗುರುತು ಮಾಡಿಟ್ಟುಕೊಂಡಿರಿ. ಇದು ಬಹಳ ಮುಖ್ಯ. ಈ ನಂಬರನ್ನು ಪಡೆಯಲು ನಿಮ್ಮ ಮೊಬೈಲ್ ನಿಂದ *#06# ಅನ್ನು ಡಯಲ್ ಮಾಡಿದರೆ ನಿಮಗೆ 15 ಅಕ್ಷರದ ಐಎಂಇಐ ನಂಬರ್ ಸಿಗುತ್ತದೆ. ಇದನ್ನು ನಿಮ್ಮ ಡೈರಿಯಲ್ಲಿ ಗುರುತು ಮಾಡಿಟ್ಟುಕೊಳ್ಳಿ.

ಅಕಸ್ಮಾತ್ ನಿಮ್ಮ ಮೊಬೈಲ್ ಕಳುವಾದಾಗ ಈ ಕೆಳಗಿನ ವಿವರಗಳೊಂದಿಗೆ copy@vsnl.net ಎಂಬ ವಿಳಾಸಕ್ಕೆ ಇ-ಮೇಲ್ ಮಾಡಿ.

ನಿಮ್ಮ ಹೆಸರು, ವಿಳಾಸ, ಫೋನ್ ಮಾಡೆಲ್, ಕೊನೆಯ ಬಾರಿ ಬಳಸಿದ ನಂಬರ್, ನಿಮ್ಮ ಇಮೇಲ್ ವಿಳಾಸ, ನಾಪತ್ತೆಯಾದ ದಿನಾಂಕ, ಐಎಂಇಐ ನಂಬರ್, ಇವಿಷ್ಟು ಮಾಹಿತಿಗಳನ್ನು ಮೇಲ್ ಮಾಡಿ ಕಳುಹಿಸಿ.

ಮುಂದಿನ 24 ಗಂಟೆಯೊಳಗೆ ನಿಮ್ಮ ಮೊಬೈಲನ್ನು ಟ್ರೇಸ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿರುವುದಿಲ್ಲ. ಕಳೆದುಹೋದ ಮೊಬೈಲ್ ನಲ್ಲಿ ನಿಮ್ಮ ಸಿಮ್ ಕಾರ್ಡ್ ಬದಲಾಯಿಸಿದ್ದರೂ ಫೋನ್ ನ ಜಿ ಪಿ ಆರ್ ಎಸ್ ಮೂಲಕ ಮೊಬೈಲನ್ನು ಪತ್ತೆಹಚ್ಚುವ ತಂತ್ರಜ್ಞಾನ ಇದೆ.

1 COMMENT

LEAVE A REPLY

Please enter your comment!
Please enter your name here