ನಿಮ್ಮ ಹತ್ರ ಡೆಬಿಟ್ ಅಥವ ಕ್ರೆಡಿಟ್ ಕಾರ್ಡ್ ಇದ್ರೆ ತಕ್ಷಣವೇ ಹೀಗೆ ಮಾಡಿರಿ.

0
49

ನೀವು ಸಹ ಡೆಬಿಟ್ ಕಾರ್ಡ್ ಬಳಕೆ ಮಾಡ್ತೀರ ಹಾಗಾದ್ರೆ ಖಂಡಿತ ಈ ಸಂಪೂರ್ಣ ಮಾಹಿತಿ ನೀವು ತಿಳಿಯಲೇ ಬೇಕು. ಇತ್ತೀಚಿಗೆ ಡೆಬಿಟ್ ಬಳಕೆ ಮಾಡುತ್ತಿರುವ ಜನರ ಸಂಖ್ಯೆ 30 ಕೋಟಿಗೂ ಹೆಚ್ಚು ದಾಟಿದೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಹ್ಯಾಕರ್ ಗಳು ನಮಗೆ ತಿಳಿಯದ ರೀತಿಯಲ್ಲಿ ಕೆಲವೇ ಕ್ಷಣದಲ್ಲಿ ನಮ್ಮ ಖಾತೆಯಲ್ಲಿನ ಹಣ ತೆಗೆದುಕೊಂಡು ಬಿಡುತ್ತಾರೆ. ಆಧುನಿಕ ತಂತ್ರಜ್ಞಾನ ಎಷ್ಟು ಮುಂದೆ ಇದ್ಯೋ ಅಷ್ಟೇ ವೇಗವಾಗಿ ನಾವು ಸಹ ಮೋಸ ಹೋಗುತ್ತಾ ಇದ್ದೇವೆ. ನಾವು ನೀವು ಪ್ರತಿ ನಿತ್ಯ ಶಾಪಿಂಗ್ ಮಾಡಿದ ಕೊಡಲೇ ಡೆಬಿಟ್ ಅಥವ ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತೇವೆ. ಆದರೆ ನಿಜಕ್ಕೂ ಇದು ಎಷ್ಟು ಸೇಫ್ ಎಂಬುದು ಪ್ರಶ್ನೆ.

ಈ ಹಿಂದೆ ಹ್ಯಾಕರ್ ಗಳು ಸುಲಭವಾಗಿ ನಮ್ಮ ಡೆಬಿಟ್ ಕಾರ್ಡ್ ನಿಂದ ಹಣ ಕದಿಯುತ್ತಾ ಇದ್ದರು ಆದರೆ ಇತ್ತೇಚೆಗೆ ಓ ಟಿ ಪಿ ಎಂಬುದು ಬಂದಮೇಲೆ ಒಂದಿಷ್ಟು ಕಡಿವಾಣ ಹಾಕಿದ ಹಾಗೇ ಆಗಿದೆ. ಆದರು ನಾವು ಕಾರ್ಡ್ ಸ್ವೈಪ್ ಮಾಡೋವಾಗ ಕೆಲವು ಕಳ್ಳರು ನಮ್ಮ ಏಟಿಎಂ ಕಾರ್ಡ್ ಸಂಪೂರ್ಣ ಸಂಖ್ಯೆ ಮತ್ತು ಏಟಿಎಂ ಪಿನ್ ಕೊಡು ಹ್ಯಾಕ್ ಮಾಡುವ ಕೆಲವು ಸಾಧನ ಬಳಕೆ ಮಾಡುತ್ತಾ ಇದ್ದಾರೆ. ಆದರೆ ಇದನ್ನು ಎಲ್ಲರು ಮಾಡಲು ಸಾಧ್ಯ ಇಲ್ಲ. ಇತ್ತೀಚಿನ ವರಧಿ ಪ್ರಕಾರ ನಾವು ಪಾಸ್ವರ್ಡ್ ಮತ್ತು ಓ ಟಿ ಪಿ ಯಾರಿಗೂ ಹೇಳಿಲ್ಲ ಆದರು ಸಹ ನಮ್ಮ ಖಾತೆಯಲ್ಲಿ ಇದ್ದ ಸಾವಿರಾರು ರುಪಾಯಿ ಹಣ ಜಮ ಯಾಗಿದೆ ಎಂಬ ಸಂದೇಶ ಮೊಬೈಲ್ಗೆ ಬಂದಮೇಲೆ ಖಾತೆ ಪರಿಶೀಲನೆ ಮಾಡಿದ ನಂತರ ಅಷ್ಟೇ ನಮಗೆ ತಿಳಿಯುತ್ತದೆ ನಾವು ಮೋಸ ಹೋಗಿದ್ದೇವೆ ಎಂಬುದು.

ಹಾಗಾದ್ರೆ ಈ ಮೋಸ ಹೇಗೆ ಮಾಡ್ತಾರೆ ಎಂಬುದು ತಿಳಿದುಕೊಳ್ಳೋಣ. ಮೊದಲಿಗೆ ನೀವು ಶಾಪಿಂಗ್ ಮಾಡಿದಾಗ ಕಾರ್ಡ್ ಸ್ವೈಪ್ ಮಾಡಿದ್ರೆ ನಕಲಿ ಸ್ವೈಪ್ ಮಿಶನ್ ನಿಂದ ನಮ್ಮ ಕಾರ್ಡ್ ಸಂಖ್ಯೆ ಮತ್ತು ನಾವು ಒತ್ತಿದ ಏಟಿಎಂ ಪಿನ್ ಸಂಖ್ಯೆ ಆಟೋಮ್ಯಾಟಿಕ್ ಮಿಶನ್ ಕದಿಯುತ್ತದೆ ನಂತರ ಈ ದಾಟ ವನ್ನು ಅಮೇರಿಕಾದಲ್ಲಿ ಇರುವ ಹ್ಯಾಕರ್ ಗಳಿಗೆ ರವಾನೆ ಮಾಡಲಾಗುತ್ತದೆ. ಹೀಗೆ ನಮ್ಮ ಏಟಿಎಂ ಪಿನ್ ಮತ್ತು ಅದರ ಸಂಖ್ಯೆ ರವಾನೆ ಮಾಡಿದ ನಂತರ ಕೆಲವೇ ಗಂಟೆಯಲ್ಲಿ ಕೃತಕ ಡೂಪ್ಲಿಕೇಟ್ ಏಟಿಎಂ ಕಾರ್ಡ್ ತಯಾರು ಮಾಡಿಕೊಂಡು ಭಾರತೀಯ ಕಾಲ ಮಾನ ಪ್ರಕಾರ ರಾತ್ರಿ 12 ಗಂಟೆ ನಂತರ ಎರಡು ಗಂಟೆ ಒಳಗೆ ಕಾರ್ಡ್ ನಿಂದ ಹಣ ಕದಿಯುತ್ತಾರೆ.

ಇದೊಂದು ಸಣ್ಣ ಜಾಲ ಅಂತು ಅಲ್ಲವೇ ಅಲ್ಲ ಇದನ್ನು ದೊಡ್ಡ ಹ್ಯಾಕರ್ ನೆಟ್ವರ್ಕ್ ಗುಂಪು ಮಾಡುತಿದ್ದು ನಾವು ಯಾವುದೇ ಸೈಬರ್ ಕ್ರೈಂ ಕಂಪ್ಲೇಂಟ್ ಕೊಟ್ಟರು ಸಹ ನಮಗೆ ಲಾಭ ಆಗೋದಿಲ್ಲ. ಅದಕ್ಕಾಗಿ ನೀವು ಒಂದಿಷ್ಟು ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹಣ ನಿಮ್ಮಲೇ ಉಳಿಯುತ್ತದೆ. ನೀವು ಶಾಪಿಂಗ್ ಮಾಡಿದ ತಕ್ಷಣ ಪ್ರತಿಷ್ಟಿತ ಕಂಪನಿ ಅಥವ ಮಾಲ್ ನಲ್ಲಿ ಮಾತ್ರ ಕಾರ್ಡ್ ಸ್ವೈಪ್ ಮಾಡಿರಿ ನಿಮಗೆ ಅನುಮಾನ ಬಂದ ಕಡೆ ಕಾರ್ಡ್ ಸ್ವೈಪ್ ಮಾಡೋ ಬದಲು ಹಣ ಕೊಟ್ಟು ಕ್ಯಾಶ್ ವ್ಯವಹಾರ ಮಾಡಿರಿ. ಒಂದೇ ಏಟಿಎಂ ನಲ್ಲಿ ಸಾವಿರಾರು ರುಪಾಯಿ ಇಟ್ಟುಕೊಳ್ಳುವ ಬದಲು ನೀವು ಯಾವಾಗಲು ಸ್ವೈಪ್ ಮಾಡುವ ಏಟಿಎಂ ಕಾರ್ಡ್ ನಲ್ಲಿ ಸ್ವಲ್ಪ ಮಾತ್ರ ಹಣ ಇಟ್ಟುಕೊಳ್ಳಿ. ಈ ರೀತಿ ಕೆಲವೊಂದು ಟಿಪ್ಸ್ ಅನುಸರಣೆ ಮಾಡಿದ್ರೆ ಮಾತ್ರ ನಿಮ್ಮ ಹಣ ನಿಮ್ಮ ಬಳಿ ಉಳಿದೀತು ಇಲ್ಲ ಅಂದ್ರೆ ಕ್ಷಣ ಮಾತ್ರದಲ್ಲೇ ನಿಮಗೆ ಗೊತಿಲ್ಲದ ಹಾಗೇ ಹಣ ಕಟ್ ಆಗೋದು ನಿಶ್ಚಿತ. ಈ ಲೇಖನ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here