ನೀವು ಈರುಳ್ಳಿ ತಿನ್ನಲ್ಲ ಅಂದ್ರೆ ನಿಮಗೆ ಈ ಹನ್ನೊಂದು ಲಾಭ ಸಿಗಲ್ಲ ಬಿಡಿ

0
20

ಊಟದಲ್ಲಿ ಹಸಿಯಾದ ಈರುಳ್ಳಿಯನ್ನು ತಿನ್ನುವುದು ಎಂದರೆ ತುಂಬಾ ಜನಕ್ಕೆ ಇಷ್ಟ ಆಗುತ್ತದೆ. ಆದರೆ ಕೆಲವರಿಗೆ ಈರುಳ್ಳಿ ಅಂದ್ರೆ ಅಸಡ್ಡೆ ಕೂಡ ಮಾಡುತ್ತಾರೆ ಆದರೆ ಹಸಿಯಾದ ಈರುಳ್ಳಿ ನಮ್ಮ ಶರೀರದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಅಂತ ಯಾರು ಯೋಚನೆ ಮಾಡಿರಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಜನರು ಆರೋಗ್ಯಕ್ಕಿಂತ ಮೊದಲು ಸ್ವಾದದ ಮೇಲೆ ಗಮನ ಹರಿಸುತ್ತಾರೆ. ಆದ್ದರಿಂದ ಯಾವುದೇ ವಸ್ತುವಿನಿಂದ ಎಷ್ಟೇ ಲಾಭವಾಗಲಿ ಅಥವಾ ನಷ್ಟವಾದರೂ ಯೋಚಿಸುವುದಿಲ್ಲ. ಸ್ವಾದಕ್ಕಾಗಿ ಏನು ಬೇಕಾದರೂ ತಿನ್ನುತ್ತಾರೆ. ಆದರೆ ನಾವು ಯಾವುದೇ ಆಹಾರವನ್ನು ತಿನ್ನುವ ಮುನ್ನ ಅದರಿಂದ ಆಗುವ ಲಾಭ ಹಾಗೂ ನಷ್ಟಗಳ ಬಗ್ಗೆ ತಿಳಿಯಬೇಕಾಗಿರುವುದು ತುಂಬಾ ಮುಖ್ಯವಾಗಿರುತ್ತದೆ.

ನಾವು ಇಂದು ಹಸಿಯಾದ ಈರುಳ್ಳಿಯಿಂದ ನಮ್ಮ ಶರೀರದ ಮೇಲೆ ಏನೆಲ್ಲ ಪರಿಣಾಮವಾಗುತ್ತದೆ ಎಂದು ತಿಳಿಸಲಿದ್ದೇವೆ. ಹಸಿಯಾದ ಈರುಳ್ಳಿಯನ್ನು ಹೇಗೆ ತಿನ್ನಬೇಕು ಮತ್ತು ಯಾವ ರೀತಿ ತಿನ್ನಬಾರದು ಮತ್ತು ಅದರಿಂದ ನಮ್ಮ ಶರೀರಕ್ಕೆ ಕೇವಲ ಲಾಭವಾಗಬೇಕು ಬದಲಿಗೆ ಕಷ್ಟವಾಗಬಾರದು. ಈರುಳ್ಳಿ ತಿನ್ನುವುದು ಎಲ್ಲರಿಗೂ ಲಾಭದಾಯಕವಾಗಿರುತ್ತದೆ. ಆದರೆ ಯಾವ ವ್ಯಕ್ತಿಗಳಿಗೆ ಮಧುಮೇಹ ಮತ್ತು ಉಸಿರಾಟದ ತೊಂದರೆ ಇರುತ್ತದೆಯೋ ಅಂತವರಿಗೆ ಈರುಳ್ಳಿ ಒಂದು ವರಧಾನವಂತೆ ಇರುತ್ತದೆ. ಹಸಿಯಾದ ಈರುಳ್ಳಿ ರಕ್ತದ ನಾಡಿಯನ್ನು ತೆರಿಸುತ್ತದೆ ಮತ್ತು ರಕ್ತವನ್ನು ಶರೀರದಲ್ಲಿ ಚೆನ್ನಾಗಿ ಹರಿದಾಡಲು ಸಹಾಯ ಮಾಡುತ್ತದೆ.

ಹಸಿಯಾದ ಈರುಳ್ಳಿ ಮಹಿಳೆಯರ ಮುಟ್ಟಿನ ಅವಧಿಯಲ್ಲಿ ತುಂಬಾ ಲಾಭ ನೀಡುತ್ತದೆ. ಮಹಿಳೆಯರು ಊಟದ ಜೊತೆಗೆ ಹಸಿಯಾದ ಈರುಳ್ಳಿ ತಿಂದರೆ ಅವರಿಗೆ ನೋವಿನಿಂದ ಪರಿಹಾರ ಸಿಗುತ್ತದೆ. ಹಸಿಯಾದ ಈರುಳ್ಳಿ ಕೂದಲು ಮತ್ತು ತ್ವಚೆಗೆ ತುಂಬಾ ಲಾಭ ನೀಡುತ್ತದೆ. ಆಲಿವ್ ಆಯಿಲ್ ಜೊತೆಗೆ ಈರುಳ್ಳಿ ರಸವನ್ನು ಸೇರಿಸಿ ಸ್ಕಿನ್ ಮೇಲೆ ಹಚ್ಚಿದರೆ ಮುಖವು ಕಾಂತಿಯಿಂದ ತುಂಬಿಕೊಳ್ಳುತ್ತದೆ. ಯಾರಿಗಾದರೂ ತುಂಬಾ ಸಮಯದವರೆಗೆ ಕೆಮ್ಮು ಅಥವಾ ಶೀತ ಇರುತ್ತದೆಯೋ ಅಂತವರು ಈರುಳ್ಳಿಯ ರಸದಲ್ಲಿ ಜೇನುತುಪ್ಪ ಹಾಕಿ ಕುಡಿದರೆ ತುಂಬಾ ಬೇಗ ಗುಣವಾಗುತ್ತದೆ. ಹಸಿಯಾದ ಈರುಳ್ಳಿ ಅಂದರೆ ಗ್ಯಾಸ್ ನಂತಹ ತೊಂದರೆಗಳು ಮಾಯವಾಗುತ್ತವೆ. ಯಾರಿಗಾದರೂ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಈರುಳ್ಳಿಯ ರಸವನ್ನು ಎರಡು ಅಥವಾ ಮೂರು ಹನಿ ಮೂಗಿನಲ್ಲಿ ಹಾಕುವುದರಿಂದ ರಕ್ತಸ್ರವಿಕೆ ನಿಂತು ಬಿಡುತ್ತದೆ.

ಯಾರಿಗಾದರೂ ಕಿಡ್ನಿಯಲ್ಲಿ ಸ್ಟೋನ್ ಆಗಿದ್ದರೆ ಅವರು ಈರುಳ್ಳಿಯ ರಸದಲ್ಲಿ ಸಕ್ಕರೆಯನ್ನು ಸೇರಿಸಿ ಕುಡಿದರೆ ಅದರಿಂದ ನಿಧಾನವಾಗಿ ಗುಣಮುಖರಾಗುತ್ತಾರೆ. ಪುರುಷದಲ್ಲಿ ಶಕ್ತಿ ಹೆಚ್ಚಿಸಬೇಕು ಅಂದರೆ ಒಂದು ಸ್ಪೂನ್ ಹಸಿಯಾದ ಈರುಳ್ಳಿ ರಸದಲ್ಲಿ ಒಂದು ಸ್ಪೂನ್ ಶುಂಠಿಯ ರಸವನ್ನು ಹಾಕಿ ದಿನವೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಶಕ್ತಿ ಹೆಚ್ಚುತ್ತದೆ. ಓದಿದರಲ್ಲ ಒಂದು ಸಣ್ಣ ಈರುಳ್ಳಿ ಎಷ್ಟೆಲ್ಲಾ ಲಾಭ ನೀಡುತ್ತೆ ಅಂತ. ಇನ್ನಾದರೂ ಈರುಳ್ಳಿ ತಿನ್ನೋ ಅಭ್ಯಾಸ ಮಾಡಿಕೊಳ್ಳಿರಿ. ಈ ಲೇಖನವನ್ನು ನಕಲು ಮಾಡದೇ ಶೇರ್ ಮಾಡಿರಿ ಎಲ್ಲರಿಗು ಅನುಕೊಲ ಆಗಲಿದೆ.

LEAVE A REPLY

Please enter your comment!
Please enter your name here