ನೀವು ಮೊಡವೆಗಳಿಂದ ಬೇಸತ್ತು ಹೋಗಿದ್ದೀರಾ.? ಹಾಗಿದ್ದಲ್ಲಿ ಇವುಗಳನ್ನು ಮಾಡಿ ನೋಡಿ..

0
53

ನೀವು ಮೊಡವೆಗಳಿಂದ ಬೇಸತ್ತು ಹೋಗಿದ್ದೀರಾ.? ಹಾಗಿದ್ದಲ್ಲಿ ಇವುಗಳನ್ನು ಮಾಡಿ ನೋಡಿ..

ಅಂದದ ಮುಖದ ಕನಸು ಕಾಣದವರಿಲ್ಲ. ಆದರೂ, ಏನೇ ಮಾಡಿದರೂ, ಮೊಡವೆ, ಕಪ್ಪು ಕಲೆ, ಕಳಾಹೀನ ಮುಖ… ಹೀಗೆ ಒಂದೇ, ಎರಡೇ? ಯುವಕ ಯುವತಿಯರಿಗೆ ನೂರೆಂಟು ಸಮಸ್ಯೆಗಳು. ಆದರೆ, ಇದಕ್ಕೆ ಪರಿಹಾರ ಕಾಣದೆ ಹಾಗೇ ದಿನದೂಡುವುದು ಇದ್ದೇ ಇದೆ. ಆದರೆ ಇವಕ್ಕೆಲ್ಲ ನಿಮ್ಮ ಮನೆಯಲ್ಲೇ  ಪರಿಹಾರ ಇದೆ ಎಂಬುದು ಗೊತ್ತೇ?

1.ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಪೇಸ್ ಮಾಡಿ ಮುಖಕ್ಕೆ ಹಚ್ಚಿದರೆ ಮೊಡವೆಗಳಿಗೆ ತುಂಬಾ ಒಳ್ಳೆಯದು.
2. ನಿಂಬೆರಸವನ್ನು ದಿನವೂ ಆಗಾಗ ಹಚ್ಚುತ್ತಲೇ ಬಂದರೆ ಮೊಡವೆ ಕ್ರಮೇಣ ಕಡಿಮೆಯಾಗುತ್ತದೆ.
3. ಹಸಿ ಬೆಳ್ಳುಳ್ಳಿ ಮೊಡವೆಯನ್ನು ಗುಣಪಡಿಸುವ ಇನ್ನೊಂದು ಮನೆಯ ಐಷಧಿ. ಬೆಳ್ಳುಳ್ಳಿಯಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡುತ್ತಲೇ ಬಂದರೆ ತುಂಬ ಮೊಡವೆಗಳಿರುವ ಚರ್ಮಕ್ಕೆ ಅತ್ಯುತ್ತಮ ಪರಿಣಾಮ ಬೀರುತ್ತದೆ. ಮುಖದ ಮೇಲಿರುವ ಚುಕ್ಕೆಗಳು, ಮೊಡವೆಗಳನ್ನು ಇದು ಬೇಗನೆ ಕಡಿಮೆಗೊಳಿಸುತ್ತದೆ.
4. ಮೂರು ಹಸಿ ಬೆಳ್ಳುಳ್ಳಿಯನ್ನು ದಿನವೂ ತಿನ್ನುತ್ತಾ ಬಂದರೂ ಚರ್ಮಕ್ಕೆ ಒಳ್ಳೆಯದು. ಅದು ರಕ್ತವನ್ನು ಶುದ್ಧೀಕರಿಸುವ ಮೂಲಕ ಚರ್ಮವನ್ನು ನಯವಾಗಿಸುತ್ತದೆ.
5. ಕೊತ್ತಂಬರಿ ಸೊಪ್ಪು ಹಾಗೂ ಪುದಿನ ಸೊಪ್ಪ್ನು ಪೇಸ್ಟ್ ಮಾಡಿ ಅದಕ್ಕೆ ಚಿಟಿಕೆಯಷ್ಟು ಅರಿಶಿನ ಸೇರಿಸಿ ಮುಖಕ್ಕೆ ಪ್ರತಿ ರಾತ್ರಿ ಹಚ್ಚುತ್ತಾ ಬಂದಲ್ಲಿ ಮೊಡವೆಯ ತೊಂದರೆಯಿರುವವರಿಗೆ ಉತ್ತಮ ಪರಿಹಾರ ಕಾಣುತ್ತದೆ.
6. ಮೆಂತ್ಯ ಸೊಪ್ಪನ್ನು ಪೇಸ್ಟ್ ಮಾಡಿ ಪ್ರತಿ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳ್ಗಗೆ ಎದ್ದು ಉಗುರು ಬೆಚ್ಚಗಿ ನೀರಿನಲ್ಲಿ ತೊಳೆದರೆ ಮೊಡವೆ, ಬ್ಲ್ಯಾಕ್‌ಹೆಡ್ಸ್ ಮತ್ತಿತರ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.
7.ಸೌತೆಕಾಯಿ ರಸವನ್ನು ಮುಖ, ಕತ್ತು, ಕುತ್ತಿಗೆ ಹಾಗ ಕಣ್ಣಿನ ಸುತ್ತಲೂ ಹಚ್ಚುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ. ಸುಸ್ತಾದ ಚರ್ಮವನ್ನು ತೇಜೋಭರಿತವನ್ನಾಗಿ ಮಾಡುವುದಲ್ಲದೆ, ಮೊಡವೆ, ಕಲೆಗಳನ್ನು ಕಡಿಮೆ ಮಾಡುತ್ತದೆ.
8. 20ರಿಂದ 25 ದಿನಗಳ ಕಾಲ ನಿಂಬೆರಸ, ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಂದೆರಡು ಗಂಟೆ ಕಾಲ ಬಿಟ್ಟು ತೊಳೆದರೆ ಮೊಡವೆ ಕಡಿಮೆಯಾಗುತ್ತದೆ.
9. ಮೊಟ್ಟೆಯ ಲೋಳೆಯನ್ನು ಹಾಗೆಯೇ ಮುಖಕ್ಕೆ ಹತ್ತಿಯ ಸಹಾಯದಿಂದ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆದರೆ ಇದು ಮುಖದ ಹೆಚ್ಚಿ ಎಣ್ಣೆಯಂಶವನ್ನು ತೆಗೆಹಾಕಿ, ರಂಧ್ರಗಳ ವರೆಗೂ ಇಳಿದು ಮೊಡವೆಯನ್ನು ಕಡಿಮೆ ಮಾಡುತ್ತದೆ.
10. ನೆಲಗಡಲೆ ಎಣ್ಣೆಗೆ ಸ್ವಲ್ಪ ನಿಂಬೆ ರಸ ಸೇರಿಸಿ ಹಚ್ಚುವ ಮೂಲಕವೂ ಮೊಡವೆಯನ್ನು ತಡೆಗಟ್ಟಬಹುದು.
11. ಬಾದಾಮಿಯನ್ನು ಜೇನಿನೊಂದಿಗೆ ಅರೆದು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ಅದೇ ಪ್ಸ್ಟ್‌ನಲ್ಲಿ ಮಸಾಜ್ ಮಾಡಿ ತೊಳೆದರೆ ಮೊಡವೆಗೆ ಉತ್ತಮ ಪರಿಹಾರ.
12. ಸ್ವಲ್ಪ ತುರಿದ ಆಪಲ್, ಬೇಯಿಸಿದ ಓಟ್‌ಮೀಲ್, ಮೊಟ್ಟೆಯ ಲೋಳೆ ಹಾಗೂ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆಯಿರಿ.
13. ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಜೇನಿನಲ್ಲಿ ಕಲಸಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಎದ್ದ ಮೇಲೆ ತೊಳೆಯುತ್ತಾ ಬಂದಲ್ಲಿ ಎರಡು ಮೂರು ವಾರಗಳಲ್ಲೇ ಮೊಡವೆ ಸಂಪೂರ್ಣವಾಗಿ ಗುಣವಾಗುತ್ತದೆ.
14. ಕಹಿಬೇವಿನ ಎಲೆಯನ್ನು ಅರಿಶಿನದೊಂದಿಗೆ ಅರೆದು ದಿನವೂ ಹಚ್ಚಿ 20-25 ನಿಮಿಷದ ಮೇಲೆ ತೊಳೆದರೆ ಮೊಡವೆ ಸಮಸ್ಯೆಗೆ ಉತ್ತಮ ಪರಿಹಾರ ಕಾಣುತ್ತದೆ.

LEAVE A REPLY

Please enter your comment!
Please enter your name here