ನೀವು ಯೋಗವನ್ನು ಮಾಡ್ತೀರ ಹಾಗಾದ್ರೆ ಈ ಮಹಾನ್ ವ್ಯಕ್ತಿಗಳ ಬಗ್ಗೆ ಒಮ್ಮೆ ತಿಳಿಯಿರಿ

0
52

ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳೇ ಯೋಗ ಮಾನಸಿಕ ಮತ್ತು ದೈಹಿಕವಾಗಿ ಶಾಂತಿಯನ್ನು ಪಡೆದುಕೊಳ್ಳಲು ಮಾಡುವ ಶಿಕ್ಷಣವೇ ಯೋಗ. ಯೋಗವನ್ನು ಮಾಡುವುದರಿಂದ ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ ಜೊತೆಗೆ ದೈಹಿಕವಾಗಿ ದೃಢವೊಂದಲೂ ಕೂಡ ಆಗುತ್ತದೆ ನಮ್ಮ ದೇಹದಲ್ಲಿ ಇರುವ ಸಾಕಷ್ಟು ಖಾಯಿಲೆಗಳನ್ನು ನಮಗೆ ಗೊತಿಲ್ಲದಂತೆ ಈ ಯೋಗಾಸನ ದೂರ ಮಾಡಿಸುತ್ತದೆ ಏಕೆಂದರೆ ಅದರ ಅನುಭವ ಪಡೆದ ವ್ಯಕ್ತಿಗಗಳಿಗೆ ಮಾತ್ರ ಯೋಗದ ತಾಕತ್ತು ಗೊತ್ತಿರುವುದು. ಈ ಯೋಗವನ್ನು ಹಲವಾರು ಶೈಲಿಯಲ್ಲಿ ಮಾಡುತ್ತಾರೆ ಒಂದು ಒಂದು ಶೈಲಿಯು ಒಂದು ಒಂದು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇಂತಹ ಅಷ್ಟಾಂಗ ಯೋಗವನ್ನು ಮಾಡಿ ನಾವು ಇಂದು ಆರೋಗ್ಯವಾಗಿ ಇದ್ದೇವೆ ಅಂದರೆ ಅದಕ್ಕೆ ಕಾರಣ ಕೆಲವು ವ್ಯಕ್ತಿಗಳು ಇದ್ದಾರೆ ಅವರ ಬಗ್ಗೆ ನೀವು ತಿಳಿಯಲೇ ಬೇಕು.

ಹಲವಾರು ಶೈಲಿಗಳಲ್ಲಿ ಮಾಡುವ ಯೋಗವನ್ನು ವಿಶ್ವಕ್ಕೆಲ್ಲ ಮೊದಲು ಪರಿಚಯಿಸಿದವವರು ಕನ್ನಡಿಗರು ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ತಿರುಮಲೈ ಕೃಷ್ಣಮಾಚಾರ್ಯ ಪಟ್ಟಾಭಿ ಜೋಯಿಸ್ ಬಿ.ಕೆ.ಎಸ್.ಐಯ್ಯಂಗಾರ್ ಶರತ್ ಜೋಯಿಸ್ ಇವರು ಜನಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಷ್ಟಾಂಗ ಯೋಗವನ್ನು ಪ್ರಸಿದ್ಧಗೊಳಿಸಿದ್ದರು ಇವರ ಬಗ್ಗೆ ನೋಡುವುದಾದರೆ. ಯೋಗದ ಮಹತ್ವವು ಕಳೆದು ಹೋಗುತ್ತಿರುವ ಸಮಯದಲ್ಲಿ ಅದಕ್ಕೆ ಹೊಸ ಪುನರ್ಜೀವ ನೀಡಿದವರು ತಿರುಮಲೈ ಕೃಷ್ಣಮಾಚಾರ್ಯ.

ಕೃಷ್ಣಮಾಚಾರ್ಯರು ಇವರು 18 ನವೆಂಬರ್ 1888ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದರು ಸಂಸ್ಕೃತ ಮತ್ತು ವೇದಗಳ ಜೊತೆಗೆ ಯೋಗ ಮತ್ತು ಪ್ರಾಣಾಯಾಮವನ್ನು ತಮ್ಮ ತಂದೆಯವರಾದ ಶ್ರೀ ತಿರುಮಲೈ ಶ್ರೀನಿವಾಸ ತಾತಾಚಾರ್ಯ ಅವರಿಂದ ಕಲಿತು ಮೈಸೂರು ಪಟ್ನಾ ಹಾಗೂ ಕಾಶಿಯಲ್ಲಿ ಪಾಂಡಿತ್ಯ ಪಡೆದರು. ಯೋಗ ಮಕರಂದ ಯೊಗಾಸನಗಳು ಯೋಗ ರಹಸ್ಯ ಮತ್ತು ಯೋಗವಲ್ಲಿ ಎಂಬ ಪುಸ್ತಕಗಳನ್ನು ಬರೆದರು 1933ರಲ್ಲಿ ಅಂದಿನ ಮೈಸೂರು ದೇಶದ ಜಗನ್ಮೋಹನ ಅರಮನೆಯಲ್ಲಿ ಯೋಗ ಶಾಲೆಯೊಂದನ್ನೂ ಆರಂಭಿಸಿದರು. ಆದರೆ ಆ ಯೋಗಶಾಲೆಯನ್ನು ಅಲ್ಲಿನ ಬ್ರಿಟಿಶ್ ಅಧಿಕಾರಿಗಳು ಕಾರಣಗಳು ಇಲ್ಲದೆ ಮುಚ್ಚಿಸಿ ಬಿಟ್ಟರು. ಅಗಾಗಿ ಅವರು ಮತ್ತೆ 5 ವರ್ಷ ಮದ್ರಾಸ್ ಪ್ರಾಂತ್ಯಕ್ಕೆ ತೆರಳಿ ಅಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. 28 ಫೆಬ್ರುವರೀ 1989 ರಲ್ಲಿ ಮರಣ ಹೊಂದಿದರು.

ಕೆ. ಪಟ್ಟಾಭಿ ಜೋಯಿಸ್ ಮಗ ದೇಶಿಕಾಚಾರ್ ಹಾಗು ಭಾವಮೈದುನ ಬಿ.ಕೆ.ಎಸ್ ಅಯ್ಯಂಗಾರ್. ಪಟ್ಟಾಭಿ ಜೋಯಿಸ್ ಅವರು ಮೈಸೂರಿನಲ್ಲಿ ದೇಶಿಕಾಚಾರ್ ಅವರು ಮದ್ರಾಸಿನಲ್ಲಿ ಮತ್ತು ಬಿ.ಕೆ.ಎಸ್ ಅಯ್ಯಂಗಾರ್ ಅವರು ಪುಣೆಯಲ್ಲಿ ಯೋಗದೀಪವನ್ನು ಪ್ರಜ್ವಲಗೊಳಿಸಿದರು. ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಈ ಮೂವರು ಯೋಗ ಪ್ರಚಾರಣೆಗೆ ಕಾರಣರಾದರು. ಇವರೆಲ್ಲರೂ ಕೂಡ ನಮಗೆ ಇಂದು ತುಂಬಾ ಪ್ರಯೋಜನವಾಗುತ್ತಿರುವ ಯೋಗದ ಬಗ್ಗೆ ತಿಳಿಸಿಕೊಟ್ಟವರು. ನೀವು ಯೋಗ ಮಾಡಿ ಇಷ್ಟೊಂದು ಆರೋಗ್ಯವಾಗಿ ಇದ್ದೀರಿ ಎಂದರೆ ಅದಕ್ಕೆ ಮುಖ್ಯ ಕಾರಣ ಈ ನಮ್ಮ ಕನ್ನಡದ ತ್ರಿವಳಿ ರತ್ನಗಳು. ಈ ಉಪಯುಕ್ತ ಮಾಹಿತಿ ಎಲ್ಲರಿಗು ತಿಳಿಯಲೇ ಬೇಕು ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here