ಬೆನ್ನು ನೋವು ಕಡಿಮೆ ಮಾಡಲು ಮನೆ ಮದ್ದುಗಳು

0
56

ಬೆನ್ನು ನೋವು ಇಂದು 40 ವರ್ಷ ದಾಟಿದ ಅಥವ ಈ ಮುಂಚೆಯೇ ಬರುವ ಸಮಸ್ಯ ಖಾಯಿಲೆ ಅಥವ ಒಂದೇ ಕಡೆ ಹೆಚ್ಚು ಕುಳಿತು ಸಮಯ ಮಾಡುವುದು ಹೀಗೆ ಅನೇಕ ಸಂಧರ್ಬದಲ್ಲಿ ಬೆನ್ನು ನೋವು ಬರುವುದು ಸರ್ವೇ ಸಾಮಾನ್ಯ ಆದ್ರೆ ನೋವು ಬಂತು ಎಂದ ಕೊಡಲೇ ಪ್ರತಿ ಬಾರಿಯೂ ಮಾತ್ರೆ ತೊಂದ್ರೆ ಅಪಾಯ ತಪ್ಪಿದಲ್ಲ.

ಬೆನ್ನು ನೋವಿನ ಕಾರಣಗಳು:
ಬೆನ್ನಿನ ಭಾಗದಲ್ಲಿ ಬೆನ್ನು ಹುರಿ, ಬೆನ್ನು ಮೂಳೆ, ಸ್ನಾಯು, ನರ, ಮಾಂಸಖಂಡ, ಕೆಲವು ಅಂಗಗಳಾದ ಗರ್ಭಾಶಯ, ಅಂಡಾಶಯ, ಮೂತ್ರಕೋಶವಿರುತ್ತದೆ. ಇದರಲ್ಲಿ ಯಾವುದಕ್ಕೆ ತೊಂದರೆಯಾದರೂ ಬೆನ್ನು ನೋವು ಬರುತ್ತದೆ.

ಶುಂಠಿಯ ಕಷಾಯ ತಯಾರಿಸಿ ಅದಕ್ಕೆ ಹಾಲು, ಬೆಲ್ಲ ಸೇರಿಸಿ ಕುಡಿಯಬೇಕು. ಹೀಗೆ ಮಾಡೋದ್ರಿಂದ ನೋವು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ.

ಸೊಗದೆ ಬೇರಿನ ಚೂರ್ಣವನ್ನು ಒಂದು ಚಮಚೆ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಕುದಿಸಿ, ಅರ್ಧ ಭಾಗ ಉಳಿದಾಗ ಇಳಿಸಿ, ಶೋಧಿಸಿ, ಅದಕ್ಕೆ ನಿಂಬೆರಸ ಬೆರೆಸಿ ಕುಡಿಯಬೇಕು.

ಶುಂಠಿ, ಮೆಣಸು, ಹಿಪ್ಪಲಿ, ಬೆಲ್ಲ, ನೆಗ್ಗಿಲುಮುಳ್ಳು, ಕೊಬ್ಬರಿ ಎಲ್ಲವನ್ನು ಸೇರಿಸಿ ಕುಟ್ಟಿ ಪುಡಿಮಾಡಿಟ್ಟುಕೊಳ್ಳಬೇಕು. ಒಂದು ಚಮಚೆಯಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಎರಡರಿಂದ ಮೂರು ವಾರ ಸೇವಿಸಬೇಕು.

ಅಶ್ವಗಂಧವನ್ನು ಹಾಲಿನಲ್ಲಿ ಬೇಯಿಸಿ, ಒಣಗಿಸಿ, ಪುಡಿ ಮಾಡಿ ಒಂದು ಚಮಚೆ ಪುಡಿಯನ್ನು ಜೇನುತುಪ್ಪದೊಂದಿಗೆ ಇಲ್ಲವೇ ಹಾಲಿನೊಂದಿಗೆ ಸೇವಿಸಬೇಕು.

ಬ್ರಾಹ್ಮಿ ಎಲೆಯನ್ನು ಒಣಗಿಸಿ ಮಾಡಿದ ಪುಡಿಯನ್ನು ಒಂದು ಚಮಚೆ ತೆಗೆದುಕೊಂಡು ಅದಕ್ಕೆ ಜೇನು ಬೆರೆಸಿ ಸೇವಿಸಬೇಕು.

ಆಹಾರದಲ್ಲಿ ಮೆಂತ್ಯ ಸೊಪ್ಪು ಬಳಕೆ ಹೆಚ್ಚಿರಲಿ.

ಒಂದು ಚಮಚೆ ತುಂಬೆಯ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬೇಕು.

ಅಮೃತಬಳ್ಳಿಯ ಕಾಂಡ ಮತ್ತು ಕಾಳು ಮೆಣಸಿನ ಪುಡಿ (ಅರ್ಧ ಚಮಚೆ) ಸೇರಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.

ಬಾಹ್ಯ ಚಿಕಿತ್ಸೆ :
50 ಮಿಲಿ ಎಳ್ಳೆಣ್ಣೆ, 5 ಗ್ರಾಂ ಪಚ್ಚಕರ್ಪೂರ ಮತ್ತು 4 ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಕುದಿಸಿ, ತುಸು ಬೆಚ್ಚಗಿರುವಾಗ ನೋವಿರುವ ಭಾಗಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು.

ತುಂಬೆ ಸೊಪ್ಪನ್ನು ಹರಳೆಣ್ಣೆ ಇಲ್ಲವೆ ಎಳ್ಳೆಣ್ಣೆಯಲ್ಲಿ ಅರೆದು ಲೇಪಿಸಬೇಕು.
ಸಾಸುವೆ ಎಣ್ಣೆ, ಬೇವಿನ ಎಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಜೀರಿಗೆ, ಮೆಂತ್ಯ ಮತ್ತು ಬಜೆಯ ಸಮಭಾಗ ಪುಡಿ ಹಾಕಿ ಕಾಯಿಸಬೇಕು. ತಣ್ಣಗಾದ ಮೇಲೆ ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಪದೇ ಪದೇ ಹಚ್ಚುತ್ತಿರಬೇಕು.

ಹರಳೆಣ್ಣೆ ಮತ್ತು ನಿಂಬೆಹಣ್ಣಿನ ರಸ ಬೆರೆಸಿ ನೋವಿರುವ ಜಾಗದಲ್ಲಿ ಹಚ್ಚಿ ಶಾಖ ಕೊಡಬೇಕು.

ಹೊಂಗೆ ಎಲೆ ಹಾಕಿ ಕುದಿಸಿದ ನೀರಿನಿಂದ ಶಾಖ ಕೊಡಬೇಕು.

ನುಗ್ಗೆಸೊಪ್ಪು, ಶುಂಠಿ, ಹರಳುಗಿಡದ ಎಲೆ ಔಡಲ, ತುಳಸಿ, ಎಳ್ಳು, ಸಾಸಿವೆ, ಎಲ್ಲವನ್ನು ಸ್ವಲ್ಪ ಎಳ್ಳೆಣ್ಣೆಯಲ್ಲಿ ಹುರಿದು ಬಟ್ಟೆಯಲ್ಲಿ ಕಟ್ಟಿಕೊಂಡು ಪೋಟಲಿ ಮಾಡಿ ಅದನ್ನು ಬಿಸಿ ಮಾಡಿ ಶಾಖ ಕೊಡಬೇಕು.

ಎಕ್ಕದೆಲೆಯನ್ನು ಬಿಸಿ ಮಾಡಿ ಶಾಖ ಸಹ ಕೊಡಬಹದು.

LEAVE A REPLY

Please enter your comment!
Please enter your name here