ಮದುವೆಯಾದವರು ಈ 5 ವಿಷಯದಲ್ಲಿ ಎಡವಿದರೆ ಸಂಸಾರದಲ್ಲಿ ಬಿರುಕು ಮೂಡುವುದು ಖಂಡಿತ

0
75

ಮದುವೆಯಾದವರು ಈ ೫ ವಿಷಯದಲ್ಲಿ ಎಡವಿದರೆ ಸಂಸಾರದಲ್ಲಿ ಬಿರುಕು ಮೂಡುವುದು ಖಂಡಿತ

ಪ್ರತಿಯೊಬ್ಬರೂ  ಮದುವೆಯಾದ ಹೊಸತರಲ್ಲಿ ಜೀವನ ಅಂದರೆ ಸ್ವರ್ಗದಂತಿದೆ ಅನ್ನುತ್ತಾರೆ, ಸ್ವಲ್ಪ ಕಾಲದ ಬಳಿಕ ಇಷ್ಟು ಬೇಗ ಮದುವೆಯಾಗಬಾರದಿತ್ತು, ಮದುವೆಯಾದ ಮೇಲೆ ಇದ್ದ ಖುಷಿ ಮತ್ತು ಸ್ವತಂತ್ರ ಇಲ್ಲದಂತಾಯಿತು ಎಂದು ಗೊಣಗುತ್ತಾರೆ.

ಅಲ್ಲದೆ ಮದುವೆಯಾದ ಹೊಸತರಲ್ಲಿ ತನ್ನ ಮದುವೆಯಾಗದ ಸ್ನೇಹಿತರ ಹತ್ತಿರ ಬೇಗ ಒಂದು ಮದುವೆ ಮಾಡಿಕೊ ಅನ್ನುವರು ಒಂದು ವರ್ಷದ ಬಳಿಕ ಸಿಕ್ಕಿದಾಗ ಮದುವೆಗೆ ಅವಸರ ಮಾಡಬೇಡ ಎಂಬ ಹಿತೋಪದೇಶ ಮಾಡುತ್ತಾರೆ!

ಮದುವೆಯ ನಂತರ ಗಂಡ-ಹೆಂಡತಿ ನಡುವೆ ವಾದ-ವಿವಾದಗಳು ಹಣ, ಆಸ್ತಿ, ಮಾಜಿ ಸ್ನೇಹಿತ ಅಥವ ಸ್ನೇಹಿತೆ, ಮನೆ ಕೆಲಸ, ಪೋಷಕರ ಜವಬ್ದಾರಿ ಇವೆಲ್ಲವೂ ಹೆಚ್ಚಾಗಿರುತ್ತದೆ.. ಚಿಕ್ಕ ಚಿಕ್ಕ ಮಾತುಗಳು  ದೊಡ್ಡ ರಂಪಾಟಕ್ಕೆ ಕಾರಣವಾಗಬಹುದು. ಆಗ ಈ ಕೆಳಗಿನ ಅಂಶಗಳು ಸಂದೇಹ ಎಂಬ ವಿಷಬೀಜ ಹುಟ್ಟಿಕೊಳ್ಳಲು ಕಾರಣವಾಗುತ್ತದೆ.

ನೀನು ನನ್ನ ಪ್ರೀತಿಸುತ್ತಿಲ್ಲ: ಮದುವೆಯಾದ ಶುರುವಿನಲ್ಲಿ ಪ್ರಣಯ ಪಕ್ಷಿಗಳಂತೆ ಇರುವರು. ಹಾಗಂತ ಯಾವತ್ತೂ ಇರಲು ಸಾಧ್ಯವಿಲ್ಲ. ಅದರಲ್ಲೂ ಪುರುಷರಿಗೆ ಜವಬ್ದಾರಿ ಹೆಚ್ಚಾಗುವುದರಿಂದ ಹೆಚ್ಚಿನ ಸಮಯವನ್ನು ಜೊತೆಯಲ್ಲಿ ಕಳೆಯಲು ಆಗದೇ ಹೋಗಬಹುದು. ಅದರಲ್ಲೂ ಪ್ರೀತಿಸಿ ಮದುವೆಯಾದ ಹೆಣ್ಣು ಮಕ್ಕಳಂತೂ ಈ ವಿಷಯದಲ್ಲಿ ತುಂಬಾ ಕೊರಗುತ್ತರೆ. ಮದುವೆಗೆ ಮುಂಚೆ ನನ್ನ ನೋಡಲು ಯಾವುದೇ ಬ್ಯೂಸಿ ಇರಲಿಲ್ಲ, ಸಿನಿಮಾ, ಪಾರ್ಕ್ ಅಂತ ಸಮಯ ಕಳಿಯುತ್ತಿದ್ದವು ಆದರೆ ಮದುವೆಯಾದ ಮೇಲೆ ಬದಲಾಗಿದ್ದಾರೆ.  ಈಗ ನನ್ನ ಮುಂಚಿನಂತೆ ಪ್ರೀತಿಸುತ್ತಿಲ್ಲ ಅಂತ ಕೊರಗುತ್ತಾರೆ. ನನ್ನ ನೀನು ಮುಂಚೆಯಷ್ಟು ಪ್ರೀತಿಸುತ್ತಿಲ್ಲ ಅಂತ ಹೇಳಿ ಗಂಡನಿಗೆ ಕೊಪ ಬರುವಂತೆ ಮಾಡುತ್ತಾರೆ. ಇದರಿಂದ ಇಬ್ಬರ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಮದುವೆಯ ನಂತರ ಏನೇ ವಿಷಯವಿದ್ದರೂ ಇಬ್ಬರೂ ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಎಲ್ಲಾ ನಿರ್ಧಾರವನ್ನು ಇಬ್ಬರೂ ಜೊತೆಗೂಡಿ ಕೈಗೊಳ್ಳಬೇಕು. ಈ ರೀತಿ ಮಾಡಿದರೆ ಒಬ್ಬರನ್ನೊಬ್ಬರು ನಿರ್ಲಕ್ಷ್ಯ ಮಾಡಿದಂತಾಗುವುದಿಲ್ಲ, ಸಂಬಂಧ ಗಟ್ಟಿಯಾಗುವುದು.

ನಂಬಿಕೆ :
 ಸಂಸಾರ ಎಂಬ ದೋಣಿ ಸಾಗಲು ನಂಬಿಕೆ ಅನ್ನುವುದು ಮುಖ್ಯ. ನಂಬಿಕೆಯಿಲ್ಲದಿದ್ದರೆ ಆ ಸಂಬಂಧ ಮುರಿದು ಬೀಳುವುದು ಖಂಡಿತ. ಗಂಡ-ಹೆಂಡತಿ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಸಂಶಯ ಪಡುವ ಗುಣವಿದ್ದರೆ ಮುಂದೆ ನಿಮ್ಮ ಸಂಶಯ ನಿಜವಾಗುವುದು. ಏಕೆಂದರೆ ನೀವು ಅವರನ್ನು ಸಂಶಯ ಪಡುವಾಗ ಏಕೆ ಹಾಗೇ ಮಾಡಬಾರದು ಅನಿಸುತ್ತದೆ. ಅದು ಮನುಷ್ಯನ ಗುಣ. ಆದ್ದರಿಂದ ಸಂಸಾರದಲ್ಲಿ ಸಂಶಯ ಅನ್ನುವುದು ಬೇಡ.

ಹಳೆಯ ಸಂಬಂಧ: ಹೆಚ್ಚಿನ ಸಂಸಾರದಲ್ಲಿ ಬಿರುಕು ಬರುವುದು ಹಳೆಯ ಸಂಬಂಧವನ್ನು ಕೆದಕುವುದರಿಂದ. ಉತ್ತಮ ಬದುಕು ಬೇಕೆನ್ನುವವರು ಹಳೆಯ ಸಂಬಂಧಗಳನ್ನು ಕೆದಕದೇ ಇರುವುದು ಒಳ್ಳೆಯದು. ಸಂಸಯ ಬುದ್ಧಿ ಇದ್ದರೆ ಸಂತೋಷವಾಗಿ ಜೀವನ ನಡೆಸಲು ಆಗುವುದಿಲ್ಲ.

ಒಂದು ವೇಳೆ ಮದುವೆಗೆ ಮುಂಚೆ ಪ್ರೇಮವಿದ್ದೂ ನಂತರ ಬೇರೆಯವರ ಜೊತೆ ಮದುವೆಯಾದರೆ ಹಳೆಯ ಬದುಕನ್ನು ಮರೆತು ಸಿಕ್ಕಿರುವ ಬದುಕನ್ನು ಪ್ರೀತಿಸಬೇಕು. ಅಲ್ಲದೆ ಹಳೆಯ ಪ್ರೇಮಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಬದುಕನ್ನು ಕೈಯಾರೆ ಹಾಳು ಮಾಡಿದಂತಾಗುವುದು.

ನಿನಗೆ ನನ್ನ ಜೊತೆ ಕಾಲ ಕಳೆಯಲು ಮಾತ್ರ ಸಮಯವಿಲ್ಲ: ಎಲ್ಲಿಗಾದರೂ ಹೋಗಬೇಕೆಂದು ಕಾಯುತ್ತಿರುತ್ತೀರಿ. ಆದರೆ ನಿಮ್ಮ ಗಂಡ ಫ್ರೆಂಡ್ಸ್ ಮನೆಯಲ್ಲಿ ಪಾರ್ಟಿ ಇದೆ ಅಂತ ಹೊರಟು ಬಿಡುತ್ತಾರೆ. ಆ ಸಂದರ್ಭದಲ್ಲಿ ಕೋಪ ಬರುತ್ತದೆ. ಆದರೂ ನನಗೆ ಕೊಡಲು ಮಾತ್ರ ನಿಮಗೆ ಸಮಯವಿಲ್ಲ ಎಂಬ ಮಾತು ಆಡಬೇಡಿ. ಏಕೆಂದರೆ ಈ ರೀತಿ ಹೇಳಿದಾಗ ಅವರಿಗೆ ಸಂಸಾರ ಅನ್ನುವುದು ಬಂಧನವಾಗುತ್ತದೆ. ಗಂಡಸರು ಆದಷ್ಟು ಸ್ವತಂತ್ರ ಆಗಿರಲು ಬಯಸುತ್ತಾರೆ. ಒಂದು ವೇಳೆ ನಿಮ್ಮನ್ನು ಸಿನಿಮಾಕ್ಕೆ ಕರಕ್ಕೊಂಡು ಹೋಗುತ್ತೇನೆ ಎಂದು ಹೇಳಿ ಅವರ ಫ್ರೆಂಡ್ಸ್ ಜೊತೆ ಹೋದಾಗ ಅವರು ಬಂದ ತಕ್ಷಣ ಕೋಪಗೊಳ್ಳಬೇಡಿ. ನಿಮಗೆ ಎಷ್ಟು ನಿರಾಸೆಯಾಯಿತು ಅಂತ ಅವರಿಗೆ ಸಮಧಾನವಾಗಿ ಹೇಳಿ.

ಕೆಲವು ಗಂಡಂದಿರು ಹೆಂಡತಿಯನ್ನು ತವರು ಮನೆ ಹೋಗಿ ಎರಡು ದಿನ ನಿಲ್ಲಲೂ ಬಿಡುವುದಿಲ್ಲ. ಯಾವತ್ತೂ ನೀನು ನನ್ನ ಬಳಿ ಇರಬೇಕು ಅಂತಾರೆ. ಆದರೇ ಅತಿಯಾದ ಪ್ರೀತಿ ಉಸಿರು ಕಟ್ಟಿಸಿದ ಅನುಭವ ತರಬಹುದು. ಆದ್ದರಿಂದ ಒಬ್ಬರಿಗೊಬ್ಬರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡರೆ ಒಳ್ಳೆಯದು.

ನನಗೆ ಸಾಕಾಯಿತು, ನೀನು ಮಾತ್ರ ಯಾವತ್ತಿಗೂ ಅರ್ಥ ಮಾಡಿಕೊಳ್ಳುವುದಿಲ್ಲ: ತುಂಬಾ ಕೋಪ ಬಂದಾಗ ಈ ಮಾತು ಆಡುವುದು ಸಹಜ ಆದರೆ ಆಡದಿರುವುದು ಒಳ್ಳೆಯದು. ಮನೆ ಕೆಲಸವಾದರೂ ಹೆಂಡತಿ ಮಾತ್ರ ಮಾಡಬೇಕೆಂಬ ನಿಯಮ ಇಟ್ಟುಕೊಳ್ಳುವುದು ಸರಿಯಲ್ಲ. ಈಗ ತುಂಬಾ ಹೆಣ್ಣು ಮಕ್ಕಳು ಹೊರಗೆ ದುಡಿದು ಬಂದು ಮನೆಯಲ್ಲೂ ದುಡಿಯುತ್ತಾರೆ. ಅಗ ಸುಮ್ಮನೆ ಕೂತುಕೊಳ್ಳದೇ ಅವರಿಗೆ ಸಹಾಯ ಮಾಡಬೇಕು. ಈ ರೀತಿ ಮಾಡಿದರೆ ಸಂಸಾರದಲ್ಲಿ ಪ್ರೀತಿ ಹೆಚ್ಚಾಗುವುದು.

ಸಂಸಾರ ಅಂದಮೇಲೆ  ಕಷ್ಟ ಸುಖ ಇದ್ದೇ ಇರುತ್ತದೆ. ಸುಖ ಸಂಸಾರಕ್ಕಾಗಿ   ಅಹಂಕಾರವನ್ನು ತ್ಯಾಗ ಮಾಡುವುದರಲ್ಲಿ ತಪ್ಪೇನಿಲ್ಲ.

LEAVE A REPLY

Please enter your comment!
Please enter your name here