ಮೈದ ಎಂಬ ಬಿಳಿ ವಿಷವನ್ನು ನಿಮಗೆ ಗೊತಿಲ್ಲದ ಹಾಗೇ ತಿನ್ನುತ್ತಾ ಇದ್ದೀರಾ ನೀವು

0
10

ನಿಮ್ಮ ನಿತ್ಯದ ಆಹಾರದಲ್ಲಿ ಮೈದಾ ಹಿಟ್ಟನ್ನು ನೀವು ಹೆಚ್ಚು ಬಳಸುತ್ತಿದ್ದೀರಾ? ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ನಿಮಗೆ ಮಾಹಿತಿ ಇದೆಯಾ? ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಬಾಯಿಗೆ ರುಚಿ ಯಾಗುವ ಪದಾರ್ಥಗಳನ್ನು ತಿನ್ನಲು ಎಲ್ಲರೂ ಇಚ್ಚಿಸುತ್ತಾರೆ. ಅಂತಹ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಉತ್ತರಿಸಿದ್ದರು ಸ್ವಲ್ಪವಾದರೂ ತಿನ್ನೋಣ ಎಂದು ಬಯಸುವ ಜನಗಳೇ ಹೆಚ್ಚು.

ಸಿಹಿ ಪದಾರ್ಥಗಳು ಮತ್ತು ಬಾಯಿಗೆ ರುಚಿ ಕೊಡುವ ಮಸಾಲೆಭರಿತ ಪದಾರ್ಥಗಳು ಬೇಕರಿಯಲ್ಲಿ ಹೆಚ್ಚುವ ಸಿಗುತ್ತವೆ. ಆದರೆ ಬೇಕರಿಯಲ್ಲಿ ಮಾಡುವ ಬಹುತೇಕ ಪದಾರ್ಥಗಳು ಮೈದಾ ಹಿಟ್ಟಿನಿಂದ ಮಾಡಿರುತ್ತಾರೆ. ಮೈದಾ ಹಿಟ್ಟನ್ನು ಗೋಧಿಯಿಂದ ತಯಾರಿಸುತ್ತಾರೆ.ಗೋದಿ ಯಲ್ಲಿರುವ ಎಲ್ಲಾ ನಾರಿನ ಅಂಶಗಳನ್ನು ಬೇರ್ಪಡಿಸಿ ಅದರಲ್ಲಿರುವ ತರಿಯನ್ನು ಬೇರ್ಪಡಿಸಲಾಗುತ್ತದೆ. ನಂತರ ಇದನ್ನು ಬೆನ್ಸೂಯಿಕ್ ಪೆರಾಕ್ಸೈಡ್ ಎಂಬ ಕೆಮಿಕಲ್ ನಿಂದ ಬೀಚ್ ಮಾಡುತ್ತಾರೆ. ನಂತರ ಇದನ್ನು ಅಲೋಕ್ಸನ್ ಎಂಬ ಕೆಮಿಕಲ್ ಬಳಸಿ ಮೃದು ಮಾಡುತ್ತಾರೆ. ನಂತರ ಇದು ಮೈದಾ ಆಗಿ ಬದಲಾಗುತ್ತದೆ.

ಹಿಂದಿನ ಕಾಲದಲ್ಲಿ ಭಾರತದಲ್ಲಿ ಮೈದಾ ಹಿಟ್ಟನ್ನು ಗೋಡೆಗಳ ಮೇಲೆ ಭಿತ್ತಿಚಿತ್ರವನ್ನು ಅಂಟಿಸಲು ಬಳಸುತ್ತಿದ್ದರು ಮತ್ತು ಚಲನಚಿತ್ರಗಳ ಪೋಸ್ಟರ್ ಗಳನ್ನು ಅಂಟಿಸಲು ಮೈದಾ ಹಿಟ್ಟನ್ನು ಬಳಸುತ್ತಾರೆ. ಮೈದಾ ಹಿಟ್ಟಿನಿಂದ ಅನೇಕ ಖಾದ್ಯಗಳನ್ನು ಮಾಡಬಹುದು. ಉದಾಹರಣೆಗೆ ಪೂರಿ ಚಪಾತಿ ಬಿಸ್ಕೆಟ್ ನೂಡಲ್ಸ್ ಬ್ರೆಡ್ ಕೆಕ್ ತಂದೂರಿ ರೋಟಿ ಬನ್ ರಸ್ಕ್ ಹೀಗೆ ಇನ್ನೂ ಮುಂತಾದ ಖಾದ್ಯಗಳನ್ನು ಮಾಡಬಹುದು. ಇವೆಲ್ಲವೂ ಬಾಯಿಗೆ ರುಚಿ ಕೊಡುವಂತಹ ಪದಾರ್ಥಗಳೆ.

ಆದರೆ ಇಂತಹ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯ ಬಹಳ ಬೇಗ ಹಾಳಾಗುತ್ತದೆ ಯಾಕೆಂದರೆ ಇಂತಹ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಅಂಶವು ಕಡಿಮೆಯಾಗುತ್ತದೆ. ಮೈದಾ ಹಿಟ್ಟನ್ನು ತಯಾರಿಸಲು ಅಲಾಕ್ಸನ್ ಎಂಬ ಕೆಮಿಕಲ್ ಅನ್ನು ಬಳಸುತ್ತಾರೆ ಇದು ನಮ್ಮ ಜೀವಕೋಶಗಳನ್ನು ನಾಶ ಮಾಡುತ್ತದೆ. ಅದರಲ್ಲೂ ಬೇಕರಿಯ ಪದಾರ್ಥಗಳು ಹೆಚ್ಚು ಮೃದು ಆಗಲು ಬೇಕರಿಯಲ್ಲಿ ಮೈದಾಹಿಟ್ಟಿಗೆ ಕೃತಕ ಬಣ್ಣಗಳು ಟೆಸ್ಟ್ ಪೌಡರ್ ಗಳು ಮಿನರಲ್ ಆಯಿಲ್ ಡಾಲ್ಡಾ ಮತ್ತು ಸಕ್ಕರೆ ಇಂತಹ ಪದಾರ್ಥಗಳನ್ನು ಹೆಚ್ಚು ಬಳಸುತ್ತಾರೆ. ಇಂತಹ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ನಮಗೆ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತದೆ.

ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು ಬೇಗ ಜೀರ್ಣವಾಗುವುದಿಲ್ಲ ಮತ್ತು ಇದರಿಂದ ನಮ್ಮ ರಕ್ತ ಅಶುದ್ಧಿಯಾಗುತ್ತದೆ. ಮತ್ತು ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ ಮತ್ತು ದೇಹದ ತೂಕ ಕೂಡ ಹೆಚ್ಚುತ್ತದೆ. ಆದ್ದರಿಂದ ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳಿಂದ ಸ್ವಲ್ಪ ದೂರ ಇರಿ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here