ಯಾವ ಹಣ್ಣು ತಿಂದರೆ ಯಾವ ಕಾಯಿಲೆ ದೂರ ಆಗುತ್ತೆ

0
82

ಯಾವ ಹಣ್ಣು ತಿಂದರೆ ಯಾವ ಕಾಯಿಲೆ  ದೂರ ಮಾಡುತ್ತೆ ತಿಳಿಯಿರಿ.

ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ . ಪ್ರತಿ ನಿತ್ಯ ಹಲವು ರೀತಿಯ ಹಣ್ಣುಗಳನ್ನು ತಿನ್ನುತಾ ಇರ್ತೇವೆ ಆದ್ರೆ ಯಾವಾಗ ಯಾವ ಹಣ್ಣು ತಿನ್ಬೇಕು, ಯಾವ ಹಣ್ಣು ತಿಂದರೆ ಯಾವ ರೋಗ ಗುಣ ಆಗುತ್ತೆ ಎಲ್ಲರಿಗು ಗೊತಿರಲ್ಲ. ಹಣ್ಣುಗಳನ್ನು ತಿನ್ನಲು ಒಂದು ಸಮಯ ಮತ್ತು ರೀತಿ ನೀತಿ ಇದೆ ಅದನ್ನ ಪಾಲಿಸಿದರೆ ತುಂಬಾ ಉಪಯುಕ್ತ, ವೈದ್ಯರು ಹೇಳುವ ಪ್ರಕಾರ ಉಟ ಆದ್ಮೇಲೆ 2 ಗಂಟೆ ಬಿಟ್ಟು ನಂತರ ಹಣ್ಣುಗಳನ್ನು ತಿನ್ನಬೇಕು ಎಂದು.


ಏಕೆಂದರೆ ನಾವು ತಿಂದ ಆಹಾರ ಜಠರಕ್ಕೆ ಹೋದ ನಂತರ ಅದು ಕಿಣ್ವವಾಗಿ ಬದಲಾಗುತ್ತದೆ. ನಂತರ ಅದು ಆಮ್ಲವಾಗಿ ಬದಲಾಗಿ ಪಚನವಾಗಲು ಪ್ರಾರಂಭವಾಗುತ್ತದೆ. ಆದರೆ ಹಣ್ಣು ಹಾಗಲ್ಲ. ಅದು ಜಠರಕ್ಕೆ ಸೇರಿದ ತಕ್ಷಣವೇ ಪಚನವಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ನಾವು ಆಹಾರ ಮತ್ತು ಹಣ್ಣನ್ನು ಒಟ್ಟಿಗೇ ತಿಂದರೆ, ತಿಂದ ಆಹಾರ ಹಣ್ಣಿನ ಜೊತೆಗೆ ಪಚನವಾಗಲು ಪ್ರಾರಂಭವಾಗುತ್ತದೆ. ಕಿಣ್ವವಾಗದೆ, ಆಮ್ಲವಾಗಿ ಪರಿವರ್ತನೆ ಹೊಂದಲು ಹಣ್ಣು ಆಹಾರಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕಾಗಿಯೇ ಎಸಿಡಿಟಿಯಂತಹ ತೊಂದರೆಯೂ ಕಾಣಿಸಿಕೊಳ್ಳಬಹುದು.
ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದರಿಂದ, ಕೂದಲು ಹಣ್ಣಾಗುವುದು, ಬಕ್ಕತಲೆ, ವಿಪರೀತವಾಗಿ ಕೈ-ಕಾಲು ನಡುಗುವುದು ಮತ್ತು ಕಣ್ಣಿನ ಸುತ್ತ ಕಂಡುಬರುವ ಕಪ್ಪು ವರ್ತುಲಗಳು ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ, ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳಬಹುದು. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತಲೂ ಹಣ್ಣನ್ನೇ ತಿನ್ನುವುದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ.

ಹಿಪ್ಪುನೇರಳೆ ಹಣ್ಣು : ಈ ಹಣ್ಣು ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿಯ ಕೊರತೆಯಿಂದ, ಮರೆಗುಳಿಗಳಾಗುವ ಹಿರಿಯರಿಗೆ ಈ ಹಣ್ಣುಗಳು ಒಳ್ಳೆಯದು.

ಕಿತ್ತಳೆ ಮತ್ತು ಮುಸುಂಬಿ ಹಣ್ಣುಗಳು : ಮೂಳೆಯ ಕೀಲುಗಳಿಗೆ ಶಕ್ತಿತುಂಬಲು ಮತ್ತು ದೇಹಕ್ಕೆ ಬಲಿಷ್ಠವಾಗಲು ಸಹಕಾರಿ

ಒಣ ಹಣ್ಣುಗಳು: ಇವು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಆಹಾರ. ಹೆಚ್ಚು ಪ್ರಮಾಣದಲ್ಲಿ ಖನಿಜಾಂಶ, ವಿಟಮಿನ್‌ಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳ್ಳಗ್ಗೆ ಸೇವಿಸುವುದು ಉತ್ತಮ ಎಂದು ವೈದ್ಯರ ಸೂಚನೆ.

ಸೇಬು : ದೊಡ್ಡಕರುಳಿನ ಮತ್ತು ಸಣ್ಣ ಕರುಳ ಕಾನ್ಸರ್‌ ತಡೆಯಲು ಸಹಕಾರಿ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಶನ್‌ ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನು ಒದಗಿಸುತ್ತದೆ.

ದ್ರಾಕ್ಷಿ ಹಣ್ಣು : ರಕ್ತದೊತ್ತಡವನ್ನು ಹತೋಟಿಗೆ ತರಲು ಸಹಕಾರಿ

ಬಾಳೆಹಣ್ಣು: ಬಾಳೆಹಣ್ಣು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಿಡ್ನಿಯ ತೊಂದರೆ ಇದ್ದವರು ಮತ್ತು ಮಲಬದ್ಧತೆಯ ತೊಂದರೆಯುಳ್ಳವರು ಬಾಳೆಹಣ್ಣನ್ನು ದಿನವೂ ಉಪಯೋಗಿಸಬೇಕು.

ಕಲ್ಲಂಗಡಿ ಹಣ್ಣು : ರಕ್ತವೃದ್ಧಿಗೆ ಸಹಕಾರಿ, ಕಜ್ಜಿ ತುರಿಕೆಯಂತಹ ಸಮಸ್ಯೆಗಳಿಗೆ ಕಲ್ಲಂಗಡಿ ಪರಿಹಾರ ನೀಡುತ್ತದೆ.

ಮಾವಿನ ಹಣ್ಣು : ನಿದ್ರಾಹೀನತೆಗೆ ಪರಿಹಾರ ನೀಡಬಲ್ಲದು, ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳಿಗೆ ರಾಮಬಾಣ

ದಾಳಿಂಬೆ ಹಣ್ಣು : ಹಲ್ಲುಗಳ ಸುರಕ್ಷತೆಗೆ ಬೇಕಾದ ವಿಟಾಮಿನ್‌ಗಳನ್ನು ಒದಗಿಸುತ್ತದೆ, ಖನಿಜಾಂಶಗಳನ್ನು ಹೊಂದಿರುವ ಹಣ್ಣು

ಹಲಸಿನ ಹಣ್ಣು : ಪಿತ್ತವಿಕಾರಗಳನ್ನು ದೂರಮಾಡಬಲ್ಲದು, ಪೌಷ್ಠಿಕಾಂಶಯುಕ್ತ ಹಣ್ಣು, ನರಗಳ ದೌರ್ಬಲ್ಯಕ್ಕೆ ಪರಿಹಾರ ನೀಡಬಲ್ಲದು

ಮುರುಗಲು ಹಣ್ಣು: ಪಿತ್ತ ಸಮಸ್ಯೆಗೆ ರಾಮಬಾಣವಾಗಿರುವ ಹಣ್ಣು.

ಪಪ್ಪಾಯ : ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಅಂಜೂರದ ಹಣ್ಣು : ಒತ್ತಡ, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ಶಮನ ಮಾಡಬಲ್ಲ ಶಕ್ತಿ ಅಂಜೂರದ ಹಣ್ಣಿಗೆ ಇದೆ.

ಖರ್ಜೂರ : ಜಂತುಹುಳು ಸಮಸ್ಯೆ ಹಾಗೂ ಬೇದಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಹಣ್ಣು, ಪೌಷ್ಠಿಕ ಆಹಾರಗಳಲ್ಲೊಂದು

ಅನಾನಾಸು : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ

LEAVE A REPLY

Please enter your comment!
Please enter your name here