ಶಕ್ತಿಶಾಲಿ ಗಣಪತಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
61

ಶುಭ ಮಂಗಳವಾರ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 351564 90

ಮೇಷ: ಈ ದಿನ ನೀವು ಹಲವು ವಿಷ್ಯದಲ್ಲಿ ಸಂಕೋಚ ಬಿಟ್ಟು ಮಾತನಾಡಿದರೆ ಮಾತ್ರ ಹಲವು ಕೆಲಸ ಕಾರ್ಯಗಳು ಬೇಗನೆ ಪೂರ್ಣ ಗೊಳ್ಳುತ್ತದೆ. ನಿಮ್ಮನು ಹೆಚ್ಚು ಬೆಂಬಲ ನೀಡುವ ವ್ಯಕ್ತಿಗಳು ಇದ್ದಕಿದ್ದಂತೆ ನಿಮ್ಮ ಮೇಲೆ ತಿರುಗಿ ಬೀಳುತ್ತಾರೆ. ಗಣಪತಿ ದೇಗುಲಕ್ಕೆ ತೆರಳಿ ಮನೆ ಜನರ ಹೆಸರಲ್ಲಿ ಅರ್ಚನೆ ಮಾಡಿಸಿ ನಿಮಗೆ ಶುಭ ಆಗುವುದು.
ವೃಷಭ: ವಾಹನ ಖರೀದಿ ಮತ್ತು ಭೂಮಿಗೆ ಸಂಬಂಧಪಟ್ಟ ಏನೇ ಕೆಲ್ಸಗಳು ಇದ್ದರು ಈ ದಿನ ಮುಂದಕ್ಕೆ ಹಾಕೋದು ಲೇಸು. ಆದಷ್ಟು ನಿಮ್ಮ ಮೇಲೆ ನಿಮಗೆ ಹೆಚ್ಚಿನ ವಿಶ್ವಾಸ ಇರಲಿ. ಕ್ರೀಡೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಶುಭ ಫಲ ದೊರೆಯುತ್ತದೆ, ಈ ದಿನ ನೀವು ಮನೆಯಲ್ಲಿರುವ ಗಣಪತಿ ಫೋಟೋ ಅಥವಾ ವಿಗ್ರಹಕ್ಕೆ ಭಕ್ತಿಯಿಂದ ಪ್ರಾರ್ಥನೆ ಮಾಡ್ಕೊಂಡು ಗರಿಕೆಯನ್ನು ಅರ್ಪಣೆ ಮಾಡಿದ್ರೆ ವಿಶೇಷ ಲಾಭ ಸಿಗುತ್ತದೆ.

ಮಿಥುನ: ನೀವು ಕೆಲವು ವಿಷ್ಯದಲ್ಲಿ ತಪ್ಪು ಮಾಡಿಲ್ಲ ಅಂದರು ನಿಮ್ಮ ವಿರುದ್ಧ ಹಲವು ಜನ ಹಲವು ರೀತಿಯ ಮಾತುಗಳು ಕೇಳಿ ಬರುತ್ತದೆ. ನಿಮ್ಮ ಮೇಲೆ ವಿನಾಕಾರಣ ಆರೋಪ ಮಾಡಿ ನಿಮ್ಮ ಮೇಲೆ ಗೂಬೆ ಕೂಡಿಸುವರು ಯಾವುದೇ ಕಾರಣಕ್ಕೂ ನೀವು ಅದಕ್ಕೆ ಜಗ್ಗದೆ ಮುನ್ನಡೆಯಿರಿ. ತಾಯಿ ದುರ್ಗೆ ಆಶೀರ್ವಾದ ನಿಮ್ಮ ಮೇಲೆ ಹೆಚ್ಚು ಇರುವುದರಿಂದ ನಿಮಗೆ ಎಲ್ಲವು ಒಳ್ಳೆಯದೇ ಆಗಲಿದೆ.
ಕಟಕ: ಶ್ರೀ ಹರಿಯ ನೆನೆದು ಈ ದಿನ ಶುರು ಮಾಡಿರಿ ಎಲ್ಲವು ಶುಭ ಆಗಲಿದೆ. ಈಗಾಗಲೇ ಸ್ವಂತ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದೀರಿ. ಮಾನಸಿಕ ಕಿರಿ ಕಿರಿ ಸಾಕಷ್ಟು ಇದ್ದರು ತಡೆಯಿರೀ. ಕೆಲವು ದಿನಗಳು ಕಳೆದರೆ ನಿಮಗೆ ಜೀವನದಲ್ಲಿ ಉತ್ತಮ ದಿನಗಳು ಬರಲಿದೆ ಆದರೆ ಎಲ್ಲದಕ್ಕೂ ತಾಳ್ಮೆ ಮುಖ್ಯವಾಗಿದೆ. ಸಂಜೆ ನಾಲ್ಕು ಗಂಟೆ ಒಳಗೆ ಗಣೇಶನ ದರ್ಶನ ಪಡೆದುಕೊಳ್ಳಿರಿ.

ಸಿಂಹ: ಸದ್ಯದ ಪರಿಸ್ಥಿತಿ ಅಷ್ಟು ಶುಭ ಅಲ್ಲದ ಕಾರಣ ಹೆಚ್ಚಿನ ಸಮಯವನ್ನು ದೇವರ ಧ್ಯಾನದಲ್ಲಿ ಮಗ್ನರಾಗುವುದು ಕಳೆಯಿರಿ ಆಗ ಪರಮಾತ್ಮ ಮೆಚ್ಚಿ ಒಂದಿಷ್ಟು ಒಳಿತು ಮಾಡುವರು. ನಿಮ್ಮ ಹೆಂಡತಿ ಮಾಡುವ ಆರ್ಥಿಕ ವೆಚ್ಚಗಳಿಗೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ ಇಲ್ಲವಾದಲ್ಲಿ ಮುಂದಿನ ಆರ್ಥಿಕ ಸಮಸ್ಯೆಗಳಿಗೆ ನೀವೇ ಗುರಿ ಆಗುತ್ತೀರಿ. ಸಂಜೆ ಒಮ್ಮೆ ಆದರೂ ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಮರೆಯಬೇಡಿ.
ಕನ್ಯಾ: ಈ ದಿನ ನಿಮ್ಮ ನಾಯಕತ್ವದಲ್ಲಿ ಸಾಕಷ್ಟು ಒಳಿತಿನ ಕೆಲಸ ಕಾರ್ಯಗಳು ನಡೆಯಲಿದೆ. ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಜನಕ್ಕೆ ಮಾನಸಿಕ ಕಿರಿ ಕಿರಿ ಹೆಚ್ಚಾಗುತ್ತದೆ. ಕಂಕಣ ಭಾಗ್ಯ ಇಲ್ಲದ ಜನಕ್ಕೆ ಸದ್ಯದಲ್ಲೇ ಶುಭ ಸೂಚನೆ ಬರುತ್ತದೆ. ನಿಮ್ಮ ಪ್ರತಿಫಲಕ್ಕೆ ತಕ್ಕ ಹಣ ದೊರೆಯುತ್ತದೆ. ಈ ದಿನ ನರಸಿಂಹ ದೇವರ ಮಹಾ ಮಂತ್ರ ನಾಲ್ಕು ಬಾರಿ ಪಾರಾಯಣ ಮಾಡಿದ್ರೆ ಕಷ್ಟಗಳು ದೂರ ಆಗಿ ಸುಖ ನೆಮ್ಮದಿ ದೊರೆಯುತ್ತದೆ.

ತುಲಾ: ಈ ದಿನ ನಿಮಗೆ ಎಲ್ಲ ರೀತಿಯ ಕಾರ್ಯದಲ್ಲೂ ಯಶಸ್ಸು ದೊರೆಯುತ್ತದೆ. ಬೇರೆ ಅವ್ರ ಬಗ್ಗೆ ಅನವಶ್ಯಕ ವ್ಯಂಗ್ಯ ಮಾತುಗಳು ಆಡಿ ಇಕ್ಕಟ್ಟಿಗೆ ಸಿಲುಕಬೇಡಿ. ಈ ದಿನ ಸ್ನೇಹಿತರಿಂದ ಒಂದಿಷ್ಟು ಅಂತರ ಕಾಯುದುಕೊಳ್ಳಿರಿ ಏಕೆಂದರೆ ಎಷ್ಟೋ ವಿಷ್ಯದಲ್ಲಿ ನಿಮ್ಮನು ಸಿಲುಕಿಸುವ ಸಾಧ್ಯತೆ ಹೆಚ್ಚಿದೆ. ಈ ದಿನ ಸಂಜೆ ಏಳು ಗಂಟೆಯಿಂದ ಎಂಟು ಗಂಟೆ ಒಳಗೆ ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಳ್ಳಿರಿ.
ವೃಶ್ಚಿಕ: ಯಶಸ್ಸು ಸಿಗಬೇಕು ಅಂದರೇ ಅದು ಒಮ್ಮೆಲೇ ಸಿಗುವುದಿಲ್ಲ ಅದಕ್ಕೆ ಸಾಕಷ್ಟು ತಳ ಮಟ್ಟದಿಂದ ಪ್ರಯತ್ನಗಳು ಮಾಡಬೇಕು. ಈ ದಿನ ಬಡ ಬ್ರಾಹ್ಮಣರಿಗೆ ನಿಮ್ಮ ಶಕ್ತಿ ಅನುಸಾರ ಅಕ್ಕಿಯನ್ನು ದಾನ ಮಾಡಿ ಅವರ ಆಶೀರ್ವಾದ ಪಡೆದುಕೊಂಡರೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ದೂರ ಆಗಲಿದೆ. ನಿಮಗೆ ದಕ್ಕಬೇಕಾದದ್ದು ಸಮಯ ಬಂದಾಗ ನಿಮ್ಮ ಕೈ ಸೇರುತ್ತದೆ.

ಧನಸ್ಸು: ದೂರದ ಊರಿನಿಂದ ಸ್ನೇಹಿತರ ಆಗಮನ ಆಗುವ ನಿರೀಕ್ಷೆ ಇದೆ. ಮಾನಸಿಕ ಸಂತೋಷ ಹೆಚ್ಚು ಸಿಗಲಿದ್ದು ನೂತನ ವಸ್ತುಗಳ ಖರೀದಿ ಹೆಚ್ಚು ಮಾಡುತ್ತೀರಿ. ಧನ ವ್ಯಯ ಹೆಚ್ಚು ಆಗುತ್ತದೆ. ನಿಮ್ಮ ಸಹೋದ್ಯೋಗಿಗಳು ನಿಮಗೆ ಅಪಾರ ಪ್ರಮಾಣದ ಸಹಾಯ ಹಸ್ತ ನೀಡುವರು. ನಿಮ್ಮ ಸಮಸ್ಯೆಗಳು ಏನೇ ಇದ್ದರು ಸರಿ ಹೋಗಲು ಕೊಡಲೇ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ಒಮ್ಮೆಮಾತನಾಡದಿರಿ .
ಮಕರ: ನಿಮ್ಮ ಸಂಗಾತಿಯು ಸಮಯಕ್ಕೆ ಅನುಗುಣವಾಗಿ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆ ಇದು ನಿಮ್ಮನು ಮತ್ತಷ್ಟು ಯಶಸ್ಸಿನ ಹಾದಿಗೆ ಕರೆದುಕೊಂಡು ಹೋಗಲಿದೆ. ಈಗಾಗಲೇ ನೀವು ಹಲವು ರೀತಿಯ ಕೆಲಸ ಕಾರ್ಯಗಳಲ್ಲಿ ವಿಳಂಭ ಆಗಿದ್ದು ಅದರ ಬಗ್ಗೆ ಹೆಚ್ಚಿನ ಯೋಚೆನೆ ಮಾಡಿ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಲಬೇಡಿ. ಪೂರ್ವ ದಿಕ್ಕಿನಲ್ಲಿ ನಿಂತು ಅಲ್ಲಿ ಕಣ್ಣಿಗೆ ಕಾಣುವ ಯಾವುದಾದರೂ ಒಂದು ಜೀವಿಗೆ ಆಹಾರ ನೀಡಿ ಶುಭವೇ ಆಗುತ್ತದೆ.

ಕುಂಭ: ನಿಮ್ಮ ಈ ದಿನದ ದೈನಂದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶಿಸ್ತು ಅಗತ್ಯತೆ ಇರುತ್ತದೆ. ನಿಮ್ಮ ಮೇಲೆ ಭರವಸೆ ಇಟ್ಟಿರುವ ಜನಕ್ಕೆ ಆ ನಂಬಿಕೆ ಕೆಡದಂತೆ ನೋಡಿಕೊಳ್ಳಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಜಯ ಸಿಗಲು ಹನುಮಂತ ದೇವರ ದರ್ಶನ ಪಡೆದುಕೊಂಡು ಅರ್ಚನೆ ಮಾಡಿಸುವುದು ಸೂಕ್ತ ವಾಗಿದೆ. ಆರೋಗ್ಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕೊಡಲೇ ವೈದ್ಯರ ಸಂಪರ್ಕ ಮಾಡಿರಿ.
ಮೀನ: ಈಗಾಗಲೇ ನೀವು ಜೀವನದಲ್ಲಿ ಸಾಕಷ್ಟು ನೊಂದಿದ್ದೀರಿ ಆ ನೋವಿನಿಂದ ಹೊರ ಬರಲು ಸುಮ್ಮನೆ ಕೂರದೆ ಹಲವು ಕೆಲಸಗಳಲ್ಲಿ ನಿಮ್ಮನು ನೀವು ತೊಡಗಿಸಿಕೊಳ್ಳಿರಿ. ತಂದೆಯು ನಿಮಗೆ ನೀಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಉತ್ತಮ ಹೆಸರು ಪಡೆದುಕೊಳ್ಳಿರಿ. ಯಾವುದೇ ವಿಷಯದಲ್ಲೂ ವಿನಾಕಾರಣ ಜಗಳ ಮಾಡಿಕೊಳ್ಳಬೇಡಿ.

LEAVE A REPLY

Please enter your comment!
Please enter your name here