ಹಲವು ರೋಗಗಳಿಗೆ ಹಲವು ಮನೆ ಮದ್ದು

0
67

ಆರೋಗ್ಯದ ಸಮಸ್ಯೆ ಇದ್ದರೆ ಈ ಮನೆಮದ್ದುಗಳನ್ನು ಮಾಡಿ. ತಕ್ಷಣ ವಾಸಿಯಾಗುತ್ತದೆ.

ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಇದಕ್ಕೆಲ್ಲ ಮನೆಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಇದು ನೈಸರ್ಗಿಕ ಮನೆಮದ್ದು. ಅವುಗಳು ಏನೆಂದು ತಿಳಿದುಕೊಳ್ಳೋಣ.

ಮುಟ್ಟಿನ ನೋವು– ಸ್ತ್ರೀಯರಿಗೆ ಪ್ರತಿ ತಿಂಗಳು ಮುಟ್ಟಿನ ನೋವು ಸಾಮಾನ್ಯ. ಆ ನೋವಿನಿಂದ ಪಾರಾಗಲು ಪ್ರತಿನಿತ್ಯ ೨-೩ ನಿಂಬೆ ಹಣ್ಣನ್ನು ತಣ್ಣೀರಿಗೆ ಬೆರೆಸಿ ಕುಡಿಯಿರಿ.

ಧೀರ್ಘ ಕಾಲದ ತಲೆನೋವು– ನಿಮಗೆ ಆಗಾಗ ತಲೆನೋವು ಬರ್ತಾ ಇದ್ರೆ ಸೇಬು ಹಣ್ಣಿನ ಸಿಪ್ಪೆ ತೆಗೆದುಕೊಳ್ಳಿ. ಸಣ್ಣಗೆ ಹೆಚ್ಚಿ ಉಪ್ಪು ಸೇರಿಸಿ ದಿನವೂ ಸೇವಿಸಿ.

ಗ್ಯಾಸ್ ಟ್ರಬಲ್– ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕಾಲು ಚಮಚ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಅಇ ಕುಡಿಯಿರಿ.

ಗಂಟಲು ನೋವು– ಇದಕ್ಕೆ ಸುಲಭವಾದ ಮನೆಮದ್ದಿದೆ. ಒಂದು ಅಥವ ಮೂರು ತುಳಸಿ ಎಳೆಯನ್ನು  ನೀರಲ್ಲಿ ಹಾಕಿ ಕುದಿಸಿ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸಿ.

ಬಾಯಿಹುಣ್ಣು– ಬಾಳೇ ಹಣ್ಣು ಮತ್ತು ಜಢನುತುಪ್ಪ ಸೇರಿಸಿ ನುಣ್ಣಗಿನ ಪೇಸ್ಟ್ ಮಾಡಿ. ಅದನ್ನು ಬಾಯಿ ಹುಣ್ಣಿನ ಮೇಲೆ ಹಚ್ಚಿದರೆ ಬಹುಬೇಗ ವಾಸಿಯಾಗುತ್ತದೆ.

ಮಜ್ಜಿಗೆ- ಹೊಟ್ಟೆ ಉಬ್ಬರ ಮತ್ತು ನೋವು ಇದ್ದರೆ ಹುಳಿ ಮಜ್ಜಿಗೆಗೆ ಸೈಂಧವ ಉಪ್ಪು ಬೆರೆಸಿ ಕುಡಿದರೆ ಗ್ಯಾಸ್‌ ಕಡಿಮೆಯಾಗಿ ನೋವು ಮತ್ತು ಉಬ್ಬರ ನಿವಾರಣೆಯಾಗುತ್ತವೆ

ಮತ್ತಷ್ಟು ಆರೋಗ್ಯ ಮಾಹಿತಿ ಬಸಳೆ ಸೊಪ್ಪನ್ನು ಅಗಿಯುತ್ತಿದ್ದರೆ ಬಾಯಿ ಹುಣ್ಣು ಶಮನವಾಗುತ್ತದೆ.

ಸುಟ್ಟ ಗಾಯಕ್ಕೆ ಬಸಳೆ ಸೊಪ್ಪಿನ ರಸವನ್ನು ಹಸುವಿನ ತುಪ್ಪದಲ್ಲಿ ಕಲಸಿ ಹಚ್ಚಿದರೆ ಗಾಯ ವಾಸಿಯಾಗುತ್ತದೆ.

ಬಸಳೆ ಸೊಪ್ಪನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಕಾಡುವ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಬಸಳೆ ಗಿಡದ ಬೇರಿನ ಕಷಾಯ ಸೇವಿಸಿದರೆ ಭೇದಿ ನಿಲ್ಲುತ್ತದೆ.

ಬಸಳೆ ಹೂವನ್ನು ಪೇಸ್ಟ್‌ ಮಾಡಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಿ ಗಾಯ ಗುಣವಾಗುತ್ತದೆ.

ಗರ್ಭಿಣಿಯರು ಹೆರಿಗೆ ನೋವು ಬಂದಾಗ ಬಸಳೆ ಸೊಪ್ಪಿನ ಕಷಾಯ ಕುಡಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here