ರೋಗ ನಿವಾರಕ ಸೋಂಪು

0
3785

ರೋಗ ನಿವಾರಕ ಬಡೇಸೋಂಪು

ಊಟವಾದ ಮೇಲೆ ಸೇವಿಸುವ ಬಡೇಸೋಂಪು ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ನೋಡಲು ಜೀರಿಗೆಯಂತಿರುವ ಇದನ್ನು ಹಲವಾರು ಕಾಯಿಲೆಗಳ ನಿವಾರಣೆಗೆ ಬಳಸಲಾಗುತ್ತದೆ.

♦ ಹೊಟ್ಟೆನೋವು, ಉರಿಮೂತ್ರ, ಮೂಲವ್ಯಾಧಿ, ಅತಿಸಾರ, ವಾಂತಿ ಮುಂತಾದ ರೋಗಗಳ ನಿವಾರಣೆಗೆ ಅತ್ತ್ಯುತ್ತಮವಾಗಿದೆ.
♦ ಬಾಣಂತಿಯರು ಪ್ರತಿದಿನ 1 ಚಮಚ ಬಡೇಸೋಂಪನ್ನು ವೀಳ್ಯದೆಲೆಯಲ್ಲಿಟ್ಟು ಸೇವಿಸಿದರೆ ಎದೆಹಾಲು ಹೆಚ್ಚುತ್ತದೆ ಹಾಗೂ ಗರ್ಭಕೋಶ ಕಿರಿದಾಗುತ್ತದೆ.
♦ ಹಸ್ತ ಮತ್ತು ಪಾದಗಳು ಅತಿಯಾಗಿ ಬೆವರುವ ಸಮಸ್ಯೆಯಿದ್ದವರು ದಿನನಿತ್ಯ ಊಟದ ನಂತರ ಬಡೇಸೊಂಪಿನ ಕಷಾಯ ಮಾಡಿಕೊಂಡು ಕುಡಿದರೆ ಅತಿ ಬೆವರು ಕಡಿಮೆಯಾಗುತ್ತದೆ.
♦ ಬಾಯಿಹುಣ್ಣಿನ ಸಮಸ್ಯೆ ಇರುವವರು ಬಡೇಸೊಂಪನ್ನು ಒಣ ದ್ರಾಕ್ಷಿಯೊಂದಿಗೆ ಬೆರೆಸಿ ಆಗಾಗ ಜಗಿಯುತ್ತಿದ್ದರೆ ಬಾಯಿ ದುರ್ವಾಸನೆ ಬರುವುದು ತಪ್ಪುತ್ತದೆ. ಇದನ್ನು ಊಟದ ನಂತರ ಸೇವಿಸಿದರೆ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ.

LEAVE A REPLY

Please enter your comment!
Please enter your name here