ಕುಂಬಳ ಕಾಯಿ ಸಾಂಬಾರ್

0
4352

ಕುಂಬಳ ಕಾಯಿ , ಬಣ್ಣದ ಸೌತೇ ಸಾಂಬಾರ್

ತುಂಬಾ ಜನ ಕೇಳಿದ್ದರು ನಿಮ್ಮ ಮನೆಯಲ್ಲಿ ದಿನಾ ಮಾಡುವ ಸಾಂಬಾರ್ ರೆಸಿಪಿ ಹಾಕಿ ಅಂತ! ಹಾಗಾಗಿ ಈ ರೆಸಿಪಿ!

ಕುಂಬಳ ಕಾಯಿ, ಬಣ್ಣದ ಸೌತೇ ಕಾಯಿ ಸಾಂಬಾರ್

ಮಾಡುವ ವಿಧಾನ:-

1/4 ತೊಗರಿ ಬೇಳೆ ತೊಳೆದು ಒಂದು ಚಮಚ ಎಣ್ಣೆ ಹಾಕಿ ಬೇಯಿಸಿಡಿ.

1/4 ಕೇಜಿ ಸಿಹಿ ಕುಂಬಳ, ಒಂದು ಬಣ್ಣದ ಸೌತೇ ಕಾಯಿ (ಮಂಗಳೂರು ಸೌತೇ ಕಾಯಿ) ಬೀಜ ತೆಗೆದು ಸಿಪ್ಪೆ ಸಮೇತ ದೊಡ್ಡ ದೊಡ್ಡದಾಗಿ ಹೆಚ್ಚಿ ಬೇರೆ ಬೇಯಿಸಿಡಿ. ಬಣ್ಣದ ಸೌತೇ ಕಾಯಿ ಒಮ್ಮೊಮ್ಮೆ ಕಹಿ ಬರುತ್ತದೆ! ಬೇಯಿಸುವ ಮುನ್ನ ಒಮ್ಮೆ ಪರೀಕ್ಷಿಸಿ ಬೇಯಲು ಹಾಕಿ.

ಮಸಾಲೆ ರುಬ್ಬಲು:-

ಕಡಲೇ ಬೇಳೆ – 1 ಟೇಬಲ್ ಚಮಚ
ಧನಿಯಾ – 1 ಟೇಬಲ್ ಚಮಚ
ಮೆಂತ್ಯ – 1/4 ಟೀ ಚಮಚ
ಸಾಸಿವೆ – 1/2 ಟೀ ಚಮಚ
ಕರಿ ಮೆಣಸು – 1/2 ಟೀ ಚಮಚ
ಬ್ಯಾಡಗಿ ಮೆಣಸಿನಕಾಯಿ – 8 ರಿಂದ 10

ಇಷ್ಟನ್ನೂ ಬೇರೆ ಬೇರೆಯಾಗಿ ಹುರಿದಿಡಿ. ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.

ಹುರಿದ ಎಲ್ಲಾ ಸಾಮಗ್ರಿಗಳನ್ನು ತರಿ ತರಿಯಾಗಿ ಪುಡಿ ಮಾಡಿ, 2 ಟೇಬಲ್ ಚಮಚ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ.

4 ಚಮಚ ಹುಣಿಸೆ ರಸ ತೆಗೆದಿಡಿ.

ಬೆಂದ ಬೇಳೆ ಸ್ವಲ್ಪ ಮಸೆದು, ಬೆಅಂಮಂದ ತರಕಾರಿ, ರುಬ್ಬಿದ ಮಸಾಲೆ, ಹುಣಿಸೆ ರಸ, ಉಪ್ಪು, ಅಡಿಕೆ ಗಾತ್ರದ ಬೆಲ್ಲ, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಸಾಂಬಾರಿಗೆ ಸೇರಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಕುಂಬಳ ಬಣ್ಣಬಣ್ಣದ ಸೌತೆಕಾಯಿ ಸಾಂಬಾರ್ ಸಿದ್ಧ!

ಇದೇ ರೀತಿ ನಿಮಗೆ ಇಷ್ಟವಾಗುವ ಬೇರೆ ತರಕಾರಿ, ಸೊಪ್ಪು ಹಾಕಿ ಸಾಂಬಾರ್ ಮಾಡಿ ಕೊಳ್ಳಬಹುದು.

ಸಾಂಬಾರಿಗೆ ಒಗ್ಗರಣೆ ಯಾವಾಗಲೂ ಕೊನೆಯಲ್ಲಿ ಹಾಕಬೇಕು. ಇಂಗಿನ ಸುವಾಸನೆ ಸಾಂಬಾರಿನಲ್ಲಿ ಹಾಗೇ ಇರುತ್ತದೆ!

 

 

LEAVE A REPLY

Please enter your comment!
Please enter your name here