ಜಾಯಿಕಾಯಿ ಉಪಯೋಗಿಸಿ, ಉತ್ತಮ ಆರೋಗ್ಯ ಪಡೆಯಿರಿ..

1
2192

ಜಾಯಿಕಾಯಿಯನ್ನು ಅಡುಗೆಯಲ್ಲಿ ಬಳಸೋದ್ರಿಂದ ರೋಗ ತಡೆಗಟ್ಟುವ ಸಂಯುಕ್ತಗಳು ಅದ್ರಲ್ಲಿ ಹೆಚ್ಚಾಗಿರೋದ್ರಿಂದ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತೆ.

ಹಲ್ಲುನೋವು ನಿವಾರಕವಾಗಿ ಜಾಯಿಕಾಯಿ
ಜಾಯಿಕಾಯಿ ಎಣ್ಣೆ ಯುಜೆನೋಲ್‌ಗಳನ್ನು ಒಳಗೊಂಡಿರೋದ್ರಿಂದ ಹಲ್ಲುಗಳ ಟ್ರೀಟ್‌ಮೆಂಟ್‌ ಮತ್ತು ಹಲ್ಲಿನ ಔಷಧಿಗಳ ಬಳಕೆಯಲ್ಲಿ ಉಪಯೋಗಿಸಲಾಗಿದೆ. ಹಾಗಾಗಿ ಹಲ್ಲು ನೋವು ನಿವಾರಕವಾಗಿಯೂ ಇದು ಕೆಲ್ಸ ಮಾಡುತ್ತೆ.
ವಾಕರಿಕೆ ಸಮಸ್ಯೆ ನಿವಾರಿಸುತ್ತೆ
ಜಾಯಿಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸೋದ್ರಿಂದ ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತೆ..
ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣತೆ ಸಮಸ್ಯೆಗೆ ಪರಿಹಾರ

ಜಾಯಿಕಾಯಿ ಮತ್ತು ಅದ್ರ ಜೊತೆಗೆ ಇತರೆ ಕೆಲವು ಪದಾರ್ಥಗಳ ಮಿಶ್ರಣದಿಂದ ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.ದೇಹದಲ್ಲಿ ಮೆಟಬಾಲಿಕ್ ರಿಯಾಕ್ಷನ್ ಅಧಿಕಗೊಳಿಸಿ ದೇಹ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತೆ.

ನರಮಂಡಲದ ಆರೋಗ್ಯ
ಜಾಯಿಕಾಯಿ ಎಣ್ಣೆಯನ್ನು ಜೀರ್ಣಕ್ರಿಯೆ ಸಮಸ್ಯೆಗೆ ಹೆಚ್ಚಾಗಿ ಬಳಸಲಾಗುತ್ತೆ. ಆದ್ರೆ ಇದು ನರವ್ಯೂಹ ಸರಿಯಾಗಿ ಕಾರ್ಯ ನಿರ್ವಗಿಸುವಂತೆಯೂ ನೋಡಿಕೊಳ್ಳುತ್ತೆ. ಹಾಗಾಗಿ ದೇಹದ ಡಯಟ್‌ ಸಿಸ್ಟಮ್‌ ಸರಿಯಾಗಿರುವಂತೆಯೂ ನೋಡಿಕೊಳ್ಳುತ್ತೆ.
ಕೆಂಪು ರಕ್ತಕಣಗಳು ಅಧಿಕವಾಗುವಂತೆ ನೋಡಿಕೊಳ್ಳುತ್ತೆ
ಜಾಯಿಕಾಯಿಯಲ್ಲಿರುವ ಕಬ್ಬಿಣದ ಅಂಶ ದೇಹದಲ್ಲಿ ಕೆಂಪು ರಕ್ತಗಳನ್ನು ಅಧಿಕಗೊಳಿಸಿ, ರಕ್ತಸಂಚಾರ ಸುಗಮಗೊಳ್ಳುವಂತೆ ನೋಡಿಕೊಳ್ಳುತ್ತೆ.
ಮೊಡವೆಗಳ ನಿಯಂತ್ರಣಕ್ಕೂ ಸಹಕಾರಿ
ಆರೋಗ್ಯಯುತವಾಗ ಸ್ಮೂತ್‌ ಚರ್ಮವನ್ನು ಪಡೀಬೇಕು ಅಂತ ನಿಮ್ಗೆ ಆಸೆ ಇದ್ದಲ್ಲಿ ನೀವು ಜಾಯಿಕಾಯಿಯನ್ನು ಬಳಕೆ ಮಾಡ್ಬಹುದು. ಜಾಯಿಕಾಯಿಯನ್ನು ಪುಡಿಮಾಡಿ ಸ್ಕ್ರಬ್‌ ರೀತಿಯಲ್ಲಿಯೂ ಬಳಕೆ ಮಾಡ್ಬಹುದು.ಲೋಷನ್‌, ಸ್ಕ್ರಬ್, ಕ್ರೀಮ್‌‌ಗಳ ಬಳಕೆಯಲ್ಲಿಯೂ ಕೂಡ ಜಾಯಿಕಾಯಿಯನ್ನು ಉಪಯೋಗಿಸಲಾಗುತ್ತೆ. ಅಷ್ಟೇ ಅಲ್ಲ ಸ್ಕಿನ್ ಇನ್ಫೆಕ್ಷನ್‌ನ್ನೂ ಕೂಡ ತಡೆಯಲು ಇದು ಸಹಕಾರಿ..
ಕೂದಲಿನ ಆರೋಗ್ಯಕ್ಕಾಗಿ ಜಾಯಿಕಾಯಿ
ಜಾಯಿಕಾಯಿ ಎಣ್ಣೆಯನ್ನು ಕೂದಲಿಗೆ ಅಪ್ಲೈ ಮಾಡೋದ್ರಿಂದ ಕೂದಲುದುರುವಿಕೆ ಸಮಸ್ಯೆ ನಿವಾರಣೆಯಾಗುತ್ತೆ. ಇದು ತಲೆಯಲ್ಲಿ ಬ್ಲಡ್‌ ಸರ್ಕ್ಯೂಲೇಷನ್ ಅಧಿಕಗೊಳಿಸಿ,ಸಿಲ್ಕಿ ಮತ್ತು ಶೈನಿ ಕೂದಲನ್ನು ಪಡೆಯಲು ನೆರವಾಗುತ್ತೆ. ಶತಮಾನಗಳಿಂದಲೂ ಹಿರಿಯರು ಬಳಸುತ್ತಿರುವ ಜಾಯಿಕಾಯಿಯ ಉಪಯೋಗ ತಿಳಿದು ಆದಷ್ಟು ನಿಮ್ಮ ಅಡುಗೆ ಮನೆಯಲ್ಲಿ ಬಳಕೆ ಮಾಡೋದನ್ನು ಮರೀಬೇಡಿ..

1 COMMENT

LEAVE A REPLY

Please enter your comment!
Please enter your name here