ಗರಮಾ ಗರಂ ಪೆಪ್ಪರ್ ರಸಂ

0
4021

ಪೆಪ್ಪರ್ ರಸಂ ಒಂದು ಸಲ ಕುಡಿದು ನೋಡಿ, ಶೀತ ಹತ್ತಿರ ಬಂದರೆ ನನ್ನ ಹೆಸರು ಹೇಳಿ.

ಬೇಕಾಗುವ ಪದಾರ್ಥ:
1 ಟೀ ಸ್ಪೂನ್ – ಜೀರಿಗೆ
1 ಟೀ ಸ್ಪೂನ್ – ಕಾಳುಮೆಣಸು
ಬ್ಯಾಡಗಿ ಮೆಣಸು ಕಲರ್ ಬರಲು  ಯಾಕಂದ್ರೆ ಕಾಳುಮೆಣಸಿನ ಖಾರನೇ ಸಖತ್ ಆಗಿರುತ್ತೆ.
ಮೂರು ಹದ ಗಾತ್ರದ ಟೋಮೇಟೋ, ತಾಜಾ ಕರಿಬೇವಿನ ಎಲೆ, ತೊಗರಿ ಬೇಳೆ ಕಟ್ಟು(ತೊಗರಿ ಬೇಳೆ ಬೇಯಿಸಿದ ನಂತರ ಸಿಗುವ ಮೇಲೆ ನಿಂತ ನೀರು- ಇದು  ಬೇಕಾದರೆ ಮಾತ್ರ) ಹುಣಸೆ ನೀರು, ಒಗ್ಗರಣೆಗೆ ಸ್ವಲ್ಪ ತುಪ್ಪ, ಬೆಳ್ಳುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು

ಟೋಮೇಟೋ ನೀರು ಕರಿಬೇವು ಉಪ್ಪು ಸೇರಿಸಿ ಬೇಯಿಸಿಟ್ಟುಕೊಳ್ಳಿ. ಬೆಂದಮೇಲೆ ಬೀಜ ಮತ್ತು ಸಿಪ್ಪೆ ಬೇರ್ಪಡಿಸಲು ಸೋಸಿಕೊಳ್ಳಿ.

ಸ್ವ್ಲಲ್ಪ ತುಪ್ಪದಲ್ಲಿ ಜೀರಿಗೆ, ಕಾಳುಮೆಣಸು, ಕೆಂಪುಮೆಣಸು ಹುರಿದಿಟ್ಟುಕೊಳ್ಳಿ

ಹುರಿದ ಪದಾರ್ಥ ಹೀಗೆ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ…ಆಫಿಸ್ ಗೆ ಹೋಗುವವರು ಮಿಕ್ಸಿನಲ್ಲಿ ಪುಡಿಮಾಡಿಕೊಳ್ಳಬಹುದು. ಈ ಪುಡಿಯನ್ನು ಸೋಸಿಟ್ಟ ಟೋಮೇಟೋ ಮಿಶ್ರಣಕ್ಕೆ ಸೇರಿಸಿ. ಬೇಕಾದಷ್ಟು ನೀರೂ ಬೆರೆಸಿ. ಇನ್ನೂ ಸ್ವಲ್ಪ ಉಪ್ಪು, ಬೇಕಿದ್ದಲ್ಲಿ ಬೆಲ್ಲ ಸೇರಿಸಿ, ಹುಣಸೆ ರಸ ಸೇರಿಸಿ ಚೆನ್ನಾಗಿ ಕುದಿ ಬರೆಸಿ.

ಛೊಂಯ್ ಅಂತ ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಕೊತ್ತಂಬರಿ ಸೊಪ್ಪು ಉದುರಿಸಿ. ಸೂಪ್ ತರಹ ಕುಡಿಬಹುದು. ಅಥವಾ ಬಿಸಿ ಅನ್ನದ ಜತೆ ಕುಡಿಯಬಹುದು.

LEAVE A REPLY

Please enter your comment!
Please enter your name here