ಕರ್ಜೂರ ಸೇವನೆಯ ಲಾಭಗಳು

0
1254

ಹವಾಗುಣದಲ್ಲಿ ಬೆಳೆಯುವ ಅತೀ ಚಿಕ್ಕ ಹಣ್ಣುಗಳ ಪೈಕಿ ಖರ್ಚೂರವು ಒಂದು. ಅತೀಯಾದ ಪೌಷ್ಟಿಕ ಅಂಶವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಈ ಕರ್ಜೂರ ಸೇವನೆ  ಹಲವು ರೋಗಗಳಿಗೆ ರಾಮಬಾಣವು ಹೌದು.

ಕರ್ಜೂರದಲ್ಲಿ ಪೈಬರ್ ಮತ್ತು ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಷ್ಟೇ ಅಲ್ಲದೆ ಮಲಬದ್ದತೆ ಸೇರಿದಂತೆ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಡೆದೊಡಿಸುತ್ತದೆ.

ಅಷ್ಟೇ ಪ್ರತಿದಿನ ಮೂರು ಖರ್ಜೂರ ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ನಿಂದಲೂ ಮುಕ್ತಿ ಪಡೆಯಬಹುದಾಗಿದೆ

ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಮಹಿಳೆ ಹಾಗೂ ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ರಕ್ತಹೀನತೆ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ.

ಸತತ ಒಂದು ವಾರಗಳ ಕಾಲ ಪ್ರತಿದಿನ ಮೂರು ಕರ್ಜೂರ ತಿನ್ನುವುದರಿಂದ ಮೂಳೆಗಳು ಬಲ ಪಡೆಯುತ್ತವೆ. ನೈಸರ್ಗಿಕವಾಗಿರುವ ಸಕ್ಕರೆ ದೇಹಕ್ಕೆ ಶಕ್ತಿ ನೀಡುತ್ತದೆ. ಫೈಬರ್ ಅಂಶವಿರುವುದರಿಂದ ದಿನವಿಡಿ ಉತ್ಸಾಹದಿಂದಿರಲು ನೆರವಾಗುತ್ತದೆ.

ಕಡಿಮೆ ತೂಕವುಳ್ಳವರು ಅವಶ್ಯವಾಗಿ ಕರ್ಜೂರ ತಿನ್ನಬೇಕು. ಇದ್ರಲ್ಲಿರುವ ವಿಟಮಿನ್, ಸಕ್ಕರೆ ಅಂಶ, ಜೀವಸತ್ವಗಳು ತೂಕ ಏರಲು ಸಹಾಯ ಮಾಡುತ್ತವೆ.

 

LEAVE A REPLY

Please enter your comment!
Please enter your name here