ಪಪ್ಪಾಯಿ ಹಣ್ಣು ತಿಂದರೆ ಯಾವ ಖಾಯಿಲೆ ವಾಸಿಯಾಗುತ್ತದೆ ಎಂಬುದನ್ನು ತಿಳಿಯಿರಿ.

1
1877

ಪಪ್ಪಾಯಿ ಒಂದು ವಿಶಿಷ್ಟ ಹಣ್ಣು. ಇದರ ವೈಜ್ಞಾನಿಕ ಹೆಸರು carica papaya. ಬಾಯಿಗೆ ರುಚಿ, ಹೊಟ್ಟೆಗೆ ತಂಪೆನಿಸುವ ಈ ಹಣ್ಣುಗಳಲ್ಲಿ ಔಷಧೀಯ ಸತ್ವ ಅಡಗಿದೆ. ಪಪ್ಪಾಯಿ ಹಣ್ಣು ಜೀರ್ಣಕಾರಿಯಾಗಿದ್ದು ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್‌ “ಎ’ ಅಧಿಕವಾಗಿರುವುದರಿಂದ ಪಪ್ಪಾಯಿ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಸಹಕಾರಿ.

ಪಪ್ಪಾಯಿಯಲ್ಲಿ ಪ್ರೋಟೀನು, ಕೊಬ್ಬು, ಸಸಾರಜನಕ, “ಸಿ’ ಅನ್ನಾಂಗ, “ಎ’ ಜೀವಸತ್ವ, ಫಾಸ್ಪರಸ್‌, ಕಬ್ಬಿಣ ಕಾಬೋì ಹೈಡ್ರೇಟ್‌, ನಿಯಾಸಿನ್‌ ಖನಿಜಾಂಶಗಳು ಹೇರಳವಾಗಿವೆ.

ಪಪ್ಪಾಯ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೇದು

*ನಿತ್ಯ ಪಪ್ಪಾಯ ಸೇವಿಸುವುದರಿಂದ ಮೂತ್ರ ಕೋಶದಲ್ಲಿ ಕಲ್ಲುಗಳುಂಟಾಗುವುದಿಲ್ಲ. ಮೂತ್ರ ನಾಳದಲ್ಲಿ ಕಲ್ಲುಗಳಿದ್ದರೆ ಇದರ ಸೇವನೆ ಒಳ್ಳೆಯದು. ಅಲ್ಲದೆ ಮೂತ್ರಜನಕವಾಗಿಯೂ ಕೆಲಸ ಮಾಡುತ್ತದೆ.

*ಹಣ್ಣು, ಹಾಲು, ಜೇನುತುಪ್ಪ ಸೇರಿಸಿ ಕೊಟ್ಟರೆ ಮಕ್ಕಳಿಗೆ ಉತ್ತಮ ಟಾನಿಕ್ ಹಾಗೂ ನರದೌರ್ಬಲ್ಯಕ್ಕೂ ಒಳ್ಳೆಯದು.

*ಒಂದು ಚಮಚ ಬೀಜದ ರಸ, ಹತ್ತು ಹನಿ ನಿಂಬೆರಸದೊಂದಿಗೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ನೀಡುವುದರಿಂದ ಅಥವಾ ಹಣ್ಣಿನೊಂದಿಗೆ ಕೆಲವು ಬೀಜ ಸೇವನೆಯಿಂದ ಜಂತು ಹುಳಗಳನ್ನು ನಿವಾರಿಸಬಹುದು.

*ಮೊಸರು ಮತ್ತು ಪಪ್ಪಾಯ ಮಿಕ್ಸ್ ಮಾಡಿದ ಪೇಸ್ಟನ್ನು ಹೇರ್ ಪ್ಯಾಕ್ ಮಾಡಿ. ಅರ್ಧ ಗಂಟೆ ಬಳಿಕ ಕಡಲೆ ಹಿಟ್ಟು ಉಪಯೋಗಿಸಿ ತೊಳೆಯಿರಿ. ಹೊಟ್ಟು ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.

*ಪಪ್ಪಾಯಿ ಬೀಜ ಹಾಗೂ ಸ್ವಲ್ಪ ಪಪ್ಪಾಯಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ಒಂದು ಚಮಚ ಜೇನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿದರೆ ಹೊಳಪು ಮತ್ತಷ್ಟು ಹೆಚ್ಚುವುದು.

*ಕಪ್ಪು ಚಹಾವನ್ನು ಸೋಸಿ, ಆರಿಸಿ. ಅದರಲ್ಲಿ ಪಪ್ಪಾಯ ಪೇಸ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ, ನಿಧಾನವಾಗಿ ಮಸಾಜ್ ಮಾಡಿದಲ್ಲಿ, ಮುಖದ ಜಿಡ್ಡು ನಿವಾರಣೆಯಾಗುವುದು.

ಪಪ್ಪಾಯಿ ಹಣ್ಣು ನಿಸರ್ಗದ ಕೊಡುಗೆ. ಅದರಲ್ಲಿ ಎಲ್ಲಾ ಜೀವಸತ್ವಗಳೂ ಇವೆ. ನಮ್ಮ ಮನೆಯಲ್ಲಿರುವ ಔಷಧೀಯ ಸಂಪತ್ತು  ಇದಾಗಿದೆ. ಪ್ರತಿದಿನ ಉಪಯೋಗಿಸಿ. ಉತ್ತಮ ಆರೋಗ್ಯ ಪಡೆಯಿರಿ.

1 COMMENT

LEAVE A REPLY

Please enter your comment!
Please enter your name here