ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ದೇಹದಲ್ಲಿ ಶುಗರ್ ಲೆವಲ್ ಜಾಸ್ತಿ ಆಗಿದೆ ಎಂದು ಅರ್ಥ

0
1252

ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ದೇಹದಲ್ಲಿ ಶುಗರ್ ಲೆವಲ್ ಜಾಸ್ತಿ ಆಗಿದೆ ಎಂದು ಅರ್ಥ

ದೇಹದಲ್ಲಿ ಒಮ್ಮೆ ಗ್ಲೂಕೋಸ್ ಮಟ್ಟ ಜಾಸ್ತಿಯಾದರೆ ಮತ್ತೆ ಕಾಡಿಮೆ ಆಗುವುದು ತುಂಬಾ ಕಷ್ಟ. ದೇಹದ ಬ್ಲಡ್ ಶುಗರ್ ಮಟ್ಟ ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಸೂಚಿಸುತ್ತದೆ. ಗ್ಲುಕೋಸ್ ದೇಹದಲ್ಲಿ ಶಕ್ತಿಯ ಮೂಲವಾಗಿದೆ.
ರಕ್ತದಲ್ಲಿ ಅಧಿಕ ಸಕ್ಕರೆ ಅಂಶವನ್ನು ಹೈಪರ್ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ ಇದು ಶಾಶ್ವತವಾಗಿ ವಿವಿಧ ದೇಹದ ಭಾಗಗಳನ್ನು ಹಾನಿಗೊಳಿಸಬಹುದು. ಇದರಿಂದ ಮುಖ್ಯವಾಗಿ ದೇಹದ ಭಾಗಗಳಾದ ರಕ್ತನಾಳಗಳು, ಮೂತ್ರ, ನರಗಳು, ಕಣ್ಣುಗಳು ಹಾನಿಗೊಳಗಾಗುತ್ತವೆ
ಹೈಪರ್ಗ್ಲೈಸೀಮಿಯಾ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳುವುದು , ಒತ್ತಡ, ನಿರ್ಜಲೀಕರಣ, ನೆಗಡಿ ಮತ್ತು ಆಹಾರ ಕ್ರಮ ಇತ್ಯಾದಿ.

ರಕ್ತದಲ್ಲಿ ಅಧಿಕ ಸಕ್ಕರೆಯ ಲಕ್ಷಣಗಳೆಂದರೆ:

 1. ಮಂದ ದೃಷ್ಪಿ
 2. ಪದೇ ಪದೇ ಮೂತ್ರವಿಸರ್ಜನೆ
 3. ಬಾಯಿ ಒಣಗುವುದು
 4. ದುರ್ಬಲತೆ
 5. ಏಕಾಗ್ರತೆಯ ಕೊರತೆ
 6. ಹೊಟ್ಟೆ ಸಮಸ್ಯೆಗಳು
 7. ಸೋಂಕುಗಳು
 8. ಗಾಯಗಳು ನಿಧಾನವಾಗಿ ವಾಸಿಯಾಗುವುದು
 9.  ಸುಸ್ತು ಜಾಸ್ತಿಯಾಗುವುದು
 10. ಆಯಾಸ
 11. ಬಾಯಾರಿಕೆ ಹೆಚ್ಚಾಗುವಿಕೆ
 12. ತುರಿಕೆಯ ಚರ್ಮ
 13. ಒಣ ಚರ್ಮ
 14. ತೂಕ ಹೆಚ್ಚಾಗುವುದು
 15. ನರದ ಸಮಸ್ಯೆ
 16. ಈ ಮೇಲಿನ ಗುಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಆದಷ್ಟು ಬೇಗ ನಿಮ್ಮ ಡಾಕ್ಟರ್ರ ಬಳಿ ತೋರಿಸಿಕೊಳ್ಳಿ ಪರಿಹಾರ ಕಂಡುಕೊಳ್ಳಿ.

LEAVE A REPLY

Please enter your comment!
Please enter your name here