ಬೆಟ್ಟದ ನೆಲ್ಲಿಕಾಯಿ ಬಗ್ಗೆ ಗೊತ್ತಾದ್ರೆ ದಿನ ತಿನ್ನುವಿರಿ

0
1857

ನೆಲ್ಲಿಕಾಯಿ ಸಿ ಜೀವಸತ್ವದ ಒಳ್ಳೆಯ ಮೂಲ. ಹಣ್ಣನ್ನು ಬೇಯಿಸಿ ಸಂಸ್ಕರಿಸಿದಾಗಲೂ ಸಹ ಅದರಲ್ಲಿನ ಸಿ ಜೀವಸತ್ವ ನಷ್ಟಗೊಳ್ಳುವುದಿಲ್ಲ. ಅದರಲ್ಲೂ ಬೆಟ್ಟದ ನೆಲ್ಲಿಕಾಯಿ ಔಷಧಿಗಳ ಆಗರ. ಮನೆ ಔಷಧಗಳಲ್ಲಿ, ಆಯುರ್ವೇದ ವೈದ್ಯ ಪದ್ದತಿ, ಯುನಾನಿ ಮುಂತಾಗಿ ಈ ಹಣ್ಣು ಇದ್ದೇ ಇರುತ್ತದೆ. ಹಸಿ ಹಣ್ಣುಗಳನ್ನು ಬಳಸುವುದರ ಜೊತೆಗೆ ಹಣ್ಣನ್ನು ಜಜ್ಜಿ ಬೀಜವನ್ನು ತೆಗೆದುಹಾಕಿ ಒಣಗಿಸುವುದು, ಉಪ್ಪು ದ್ರಾವಣದಲ್ಲಿಅಡ್ಡಿ ಒಣಗಿಸುವುದು, ಬಲವರ್ಧಕಗಳನ್ನು ಮತ್ತು ಪದಾರ್ಥಗಳನ್ನು ತಯಾರಿಸಿ ಜೋಪಾನ ಮಾಡುವುದು ಸಾಮಾನ್ಯ.

ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಸ್ಕರ್ವಿ ಕಾಯಿಲೆ ದೂರಗೊಳ್ಳುತ್ತದೆ. ನೆಲ್ಲಿ ಜ್ಯೂಸ್ ಗೆ ಸ್ವಲ್ಪ ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮಖದಲ್ಲಿ ಬಿಳಿ ಮಚ್ಚೆ,ಮೊಡವೆ ಬ್ಲಾಕ್ ಹೆಡ್ಸ್ ಸಮಸ್ಯೆ ಕಂಡು ಬರುವುದಿಲ್ಲ,ಮುಖದ ಕಾಂತಿ ಹೆಚ್ಚುವುದು. ತಾಜಾ ಹಣ್ಣು ಅಥವಾ ಒಣಗಿಸಿಟ್ಟ ಚೂರ್ಣ ಅಥವಾ ಹೋಳುಗಳನ್ನು ತಿನ್ನುತ್ತಿದ್ದಲ್ಲಿ ಒಸಡುಗಳ ಊ, ಕೀವು ಸೋರುವುದು,ಬಾಯಿಯ ದುರ್ಗಂಧ ಸುಲಭವಾಗಿ ದೂರಗೊಳ್ಳುತ್ತದೆ. ಉಪ್ಪು ದ್ರಾವಣದಲ್ಲಿ ಅದ್ದಿ ಒಣಗಿಸಿದ ಹೋಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿದರೆ ಬಾಯಿಯ ದುರ್ಗಂಧ ಸುಲಭವಾಗಿ ದೂರಗೊಳ್ಳುತ್ತದೆ.ಅದರಿಂದ ಜೊಲ್ಲುರಸ ಹೆಚ್ಚಿನ ಪ್ರಮಾಣದಲ್ಲಿ ಉತ್ಪತಿಯಾಗುತ್ತದೆ. ಹಣ್ಣುಗಳಲ್ಲಿ ವಿರೇಚಕ ಹಾಗೂ ಮೂತ್ರೋತ್ಪಾದಕ ಗುಣಗಳಿವೆ.


ತಾಜಾ ಆಗಿರುವ ಬೆಟ್ಟದ ನೆಲ್ಲಿಯ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಬೆಟ್ಟದ ನೆಲ್ಲಿಕಾಯಿಯ ಪಾಕ ಮತ್ತು ಹಾಲುಗಳನ್ನು ಸೇವಿಸುತಿದ್ದಲ್ಲಿ ಶರೀರಕ್ಕೆ ಬಲವುಂಟಾಗುತ್ತದೆ.ರಕ್ತಹೀನತೆ,ಕಾಮಾಲೆ ರೋಗ ತಕ್ಕಮಟ್ಟಿಗೆ ಶಮನಗೊಳಿಸಬಹುದು. 8 30 ಮಿಲಿ ಬೆಟ್ಟದ ನೆಲ್ಲಿಯ ರಸವನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಯೆ ಇರುವುದಿಲ್ಲ. ಬೇಸಿಗೆಕಾಲದಲ್ಲಿ ಪ್ರತಿದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ. ಪೈಲ್ಸ್ ಅಥವಾ ಮೂಲ್ಯವಾಧಿ ಸಮಸ್ಯೆ ಇರುವವರಿಗೆ ಮಲಬದ್ದತೆ ಕಂಡು ಬರುವುದು ಸಹಜ.ಇಂಥವರು ಬೆಟ್ಟದ ನೆಲ್ಲಿಯ ಜ್ಯೂಸ್ ಕುಡಿದರೆ ಆ ಸಮಸ್ಯೆಯಿಂದ ಪಾರಾಗಬಹುದು. ನಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಾಂಶ ಕರಗುತ್ತದೆ,ಇದರಿಂದ ನೀವು ಸಮತೂಕವನ್ನು ಪಡೆಯಬಹುದು. ದೃಷ್ಟಿ ದೋಷಗಳು ದೂರಗೊಂಡು ಮೆದುಳು ಮತ್ತು ಕಣ್ಣುಗಳಿಗೆ ತಂಪುಂಟಾಗುತ್ತದೆ.


ಇವುಗಳ ಸೇವನೆ ಹೃದಯ ರೋಗಿಗಳಿಗೆ ಲಾಭದಾಯಕ. ನೆಲ್ಲಿಯನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಆಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಇದು ಅತ್ತ್ಯುತ್ತಮವಾದ ಔಷಧವಾಗಿದೆ. ಹಣ್ಣನ್ನು ಜಜ್ಜಿ ಒಣಗಿಸಿದ ಚೂರುಗಳನ್ನು ಬಾಣಂತಿಯರಿಗೆ ತಿನ್ನಲು ಕೊಡುತ್ತಾರೆ. ಕಾಯಿಗಳ ಪುಡಿ ಮತ್ತು ಜೇನುತುಪ್ಪ ಮಿಶ್ರಣಮಾಡಿ ಸೇವಿಸುತ್ತಿದಲ್ಲಿ ಮಧುಮೇಹ ರೋಗಕ್ಕೆ ಒಳ್ಳೆಯದು. ಬಲಿತ ನೆಲ್ಲಿಕಾಯಿಗಳನ್ನು ಎಳ್ಳೆಣ್ಣೆಯಲ್ಲಿ ಇತರ ವಸ್ತುಗಳೊಂದಿಗೆ ಕುದಿಸಿ ತಯಾರಿಸಿದ ವಸ್ತುವೇ ಕೇಶ ತೈಲ.ಇದನ್ನು ಭೃಂಗರಾಜ ತೈಲ ಎನ್ನುತ್ತಾರೆ.ಇದನ್ನು ಪ್ರತಿದಿನ ತಲೆಗೆ ಹಚ್ಚುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ ದತ್ತ ಹಾಗೂ ಉದ್ದ ಕೂದಲು ಸಾಧ್ಯ.


ಇದರ ಬೀಜವನ್ನು ಆಸ್ತಮಾ,ಪಿತ್ತರಸಭಾದೆಗೆ ಬಳಸುತ್ತಾರೆ.ಅವುಗಳಲ್ಲಿ ತೈಲಾಂಶವಿರುತ್ತದೆ.ಹಾಗೂ ಕೇಶತೈಲಗಳನ್ನು ತಯಾರಿಸಲು ಬಳಸುವುದುಂಟು. ಬೀಜವನ್ನು ಸುಟ್ಟು ತಯಾರಿಸಿದ ಮುಲಾಮು ಹಾಗೂ ತೈಲಗಳನ್ನು ಚರ್ಮವ್ಯಾಧಿಗಳಲ್ಲಿ ಬಳಸುತ್ತಾರೆ. ಇದರ ಜ್ಯೂಸ್ ಮಾಡಿ ಕುಡಿದರೆ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ. ಹೃದಯದ ನರಗಳ ಆರೋಗ್ಯ ಹೆಚ್ಚಿಸಿ,ಹೃದಯ ಸಂಬಧಿತ ಸಮಸ್ಯೆ ಬರುವುದನ್ನು ತಡೆಯುತ್ತದೆ. ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಬಾಳೆಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ

LEAVE A REPLY

Please enter your comment!
Please enter your name here