ನಿಮಗೆ ಆಯಾಸ ಸುಸ್ತು ಆದಾಗ ಹೀಗೆ ಮಾಡಿ

0
1097

ನಿಮಗೆ ಆಯಾಸ ಸುಸ್ತು ಆಗುತ್ತಿದೆಯೇ? ಹಾಗಾದರೆ ಇದನ್ನು ಸೇವಿಸಿ.

ಜೇನುತುಪ್ಪ ಪರಮಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥ ವಾಗಿರುತ್ತದೆ. ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ.

 

 

ಬನ್ನಿ ಅದೇನೆಂದು ನೋಡೋಣ.

•ಉಷ್ಣದಿಂದ ಬಾಯೊಳಗೆ ಹುಣ್ಣಾಗಿದ್ದರೆ ಜೇನುತುಪ್ಪ ಹಚ್ಚು ವುದರಿಂದ, ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ವಾಸಿ ಯಾಗುತ್ತದೆ. •ಬೇಧಿಯಾಗುತ್ತಿದ್ದರೆ ದಾಳೆಂಬೆಯ ರಸದಲ್ಲಿ ಜೇನುತುಪ್ಪ ಸೇರಿಸಿ ಕುಡಿಯ ಬೇಕು

•ನೆಗಡಿ ಅಥವಾ ಶೀತದಿಂದ ಗಂಟಲು ಕಟ್ಟಿ ಧ್ವನಿ ಸರಿಯಾಗಿ ಹೊರಡದಿದ್ದರೆ ದಿನಕ್ಕೆ ೩-೪ ಸಲ ಅರ್ಧ ಚಮಚದಿಂದ ಒಂದು ಚಮಚದವರೆಗೆ ಜೇನುತುಪ್ಪ ನೆಕ್ಕುತ್ತಿರಬೇಕು.

•ಒಂದು ಚಮಚ ಜೇನುತುಪ್ಪಕ್ಕೆ ಚಿಟಿಕೆ ಉಪ್ಪನ್ನು ಸೇರಿಸಿ.ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಸೇವಿಸಿ. ಈ ವಿಧಾನದಿಂದ ಅತಿಯಾದ ಆಯಾಸ ನಿವಾರಣೆಯಾಗಿ, ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

•ಒಂದು ಗ್ಲಾಸ್ ನೀರನ್ನು ಚೆನ್ನಾಗಿ ಕುದಿಸಿ. ಕುದಿಯುತ್ತಿರುವ ನೀರಿಗೆ ಒಂದು ಚಮಚ ಗ್ರೀನ್ ಟೀ ಪೌಡರ್ ಸೇರಿಸಿ.
ಪೌಡರ್ ಚೆನ್ನಾಗಿ ಕುದಿಯಲು 5 ನಿಮಿಷ ಬಿಡಿ ನಂತರ ಒಂದು ಗ್ಲಾಸ್‍ಗೆ ನೀರನ್ನು ಜರಡಿಯಲ್ಲಿ ಹಿಡಿಯಿರಿ. ಜೊತೆಗೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ರೀತಿಯ ಚಹಾವನ್ನು ದಿನಕ್ಕೆ 1-2 ಬಾರಿ ಸೇವಿಸಿ.

•ಒಂದು ಗ್ಲಾಸ್ ಬಿಸಿ ಹಾಲನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ, ಚೆನ್ನಾಗಿ ತಿರುವಿ. ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಿ.

•ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಚಮಚ ಜೇನು ತುಪ್ಪ, 2 ಚಮಚ ನಿಂಬೆ ರಸ, 2 ಚಮಚ ಶುಂಠಿ ರಸವನ್ನು ಸೇರಿಸಿ.ಇವುಗಳನ್ನು ಚೆನ್ನಾಗಿ ಬೆರೆಸಿ, ದಿನಕ್ಕೆ 1-2 ಬಾರಿ ಕುಡಿಯಿರಿ.

•ಒಂದು ಗ್ಲಾಸ್ ಬೆಚ್ಚಗಿನ ಹಾಲನ್ನು ತೆಗೆದುಕೊಳ್ಳಿ. ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ.
ಇದನ್ನು ಚೆನ್ನಾಗಿ ಕಲುಕಿ. ನಿತ್ಯವೂ ಮಲಗುವ ಮುನ್ನ ಒಮ್ಮೆ ಸೇವಿಸಿ

 

LEAVE A REPLY

Please enter your comment!
Please enter your name here