ಎಳೆನೀರು ನಮ್ಮ ದೇಹಕ್ಕೆ ಅಮೃತ

0
493

ಎಳೆನೀರು ನಮ್ಮ ದೇಹಕ್ಕೆ ಅಮೃತ

ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚದಾಗ ಜನರು ತಂಪುಪಾನೀಯಗಳ ಮೊರೆ ಹೋಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಎಳನೀರಿನ ಸೇವನೆ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದಿರುವ ವಿಷಯ. ಎಳೆನೀರು ಗಂಗೆಯ ಮತ್ತೊಂದು ರೂಪ ಎಂದು ನಬುವವರು ಸಾಕಷ್ಟು ಜನರಿದ್ದಾರೆ. ಸಿಕ್ಕಾಪಟ್ಟೆ ಬಾಯಾರಿಕೆ ಆದಾಗ ನೀರಿನ ಬದಲಾಗಿ ಎಳೆನೀರನ್ನು ಸೇವಿಸಿದರೂ ಸಹ ಬಾಯಾರಿಕೆ ದೂರವಾಗುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ತುಂಬಾ ಹೆಚ್ಚು. ಅದರಿಂದ ದೂರವಾಗಲು ತಂಪು ಪಾನಿಯಗಳತ್ತ ಗಮನ ನೀಡದೆ ಎಳೆನೀರು ಕುಡಿಯಿರಿ ಎನ್ನುತ್ತಾರೆ ತಜ್ಞರು.


ಈ ನೀರಿನಲ್ಲಿ ಎಲೆಕ್ಟ್ರೋ ಲೈಟ್ಸ್ ಕ್ಯಾಲ್ಸಿಯಂ, ಪೊಟಾಷಿಯಂ, ಮೆಗ್ನಿಶಿಯಂ ನಂತಹ ಖನಿಜ ಲವಣಗಳಿವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ.ರೋಗಿಯು ಟೈಪಾಯಿಡ್ ಮಲೆರಿಯದಂತಹ ಜ್ವರಕ್ಕೆ ಈಡಾಗಿದ್ದರೆ, ವಾಂತಿ ನಿರೋಧಕ, ಕಿಡ್ನಿಯಲ್ಲಿ ಕಲ್ಲು ಇರುವವರು ತಪ್ಪದೆ ಎಳೆ ನೀರು ಕುಡಿಯಿರಿ. ಅದು ಈ ಸಮಸ್ಯೆಯನ್ನು ದೂರಮಾಡುತ್ತದೆ.

ಎಳೆನೀರು, ಅತಿಸಾರವನ್ನು ಕಡಿಮೆ ಮಾಡುವಲ್ಲಿ ತುಂಬಾ ಅನುಕೂಲಕರವಾಗಿದೆ. ಅಮೈನೊ ಆಮ್ಲಗಳು, ಕಿಣ್ವಗಳು, ಆಹಾರದ ಫೈಬರ್, ಸಿ ಜೀವಸತ್ವ ಮತ್ತು ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಮ್ಯಾಂಗನೀಸ್ ಖನಿಜಗಳು ಎಳನೀರಿನಲ್ಲಿ ಸಮೃದ್ಧವಾಗಿದೆ. ಜೊತೆಗೆ ಇದು ಕೊಲೆಸ್ಟ್ರಾಲ್ ಮತ್ತು ಕ್ಲೋರೈಡ್ ರಹಿತ ಪಾನೀಯ ಕೂಡ.

ತೆಂಗಿನಕಾಯಿಯ ನೀರು ಪೊಟ್ಯಾಷಿಯಂ ಅನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ, ಆದ್ದರಿಂದ ಇದು ದೇಹದ ದ್ರವಗಳಿಗೆ ಎಲೆಕ್ಟ್ರೋಲೈಟ್ ಸಂಯೋಜನೆಯನ್ನು ನೀಡುತ್ತದೆ. ತೆಂಗಿನಕಾಯಿ ನೀರು ದೇಹದಲ್ಲಿ ಯಶಸ್ವಿಯಾಗಿ ಅಭಿದಮನಿಯ ಸಂಚಲನ ನಡೆಯುವಂತೆ ಮಾಡುತ್ತದೆ. ದೂರದ ಪ್ರದೇಶಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲದಿರುವ ಸ್ಥಳದಲ್ಲೂ ರೋಗಿಯೊಬ್ಬನ ಜೀವ ಉಳಿಸುವ ಶಕ್ತಿ ನೈಸರ್ಗಿಕವಾದ ಎಳನೀರಿಗಿದೆ. ಎಳನೀರಿನಲ್ಲಿ ಕೊಬ್ಬಿನಂಶ ಅತ್ಯಂತ ಕಡಿಮೆಯಿರುವುದರಿಂದ ತೂಕ ಇಳಿಸಲು ಸಹಾಯಕವಾಗುತ್ತದೆ. ಇದು ಇತರ ಆಹಾರದ ಕಡುಬಯಕೆಗಳನ್ನು ಕಡಿಮೆ ಮಾಡಿ ಪರಿಪೂರ್ಣ ಭಾವನೆ ಹೊಂದಲು ಸಹಾಯಮಾಡುತ್ತದೆ. ನಮ್ಮ ದೇಹದ ಎಲ್ಲಾ ಅಂಗಗಳ ಮೂಲಕ ಸಾಗಬಲ್ಲ ಕ್ಷಮತೆ ಇರುವ ಎಳನೀರು ದೇಹದ ಎಲ್ಲಾ ಅಂಗಗಳನ್ನು ಈ ಮೂಲಕ ಸ್ವಚ್ಛಗೊಳಿಸಿ ಹಳೆಯ ಕಲ್ಮಶಗಳನ್ನು ನಿವಾರಿಸುತ್ತದೆ. ನಿತ್ಯವೂ ಸ್ವಲ್ಪ ಸ್ವಲ್ಪವಾಗಿ ಮೂತ್ರದ ಮೂಲಕ ಈ ಕಲ್ಮಶಗಳನ್ನು ನಿವಾರಿಸುತ್ತದೆ.

ಎಳೆನೀರಿನ ಉಪಯೋಗಗಳನ್ನು ತಿಳಿಯೋಣ.

 • ಎಳನೀರು ಮಧುಮೇಹಿಗಳಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
 • ಯಾವುದೇ ವ್ಯಕ್ತಿ ಜ್ವರ ಪೀಡಿತವಾಗಿದ್ದರೆ, ವೈರಸ್ ಗಳು ದೇಹವನ್ನು ಆಕ್ರಮಿಸಿದ್ದರೆ ತೆಂಗಿನ ನೀರು ಬಹಳ ಅನುಕೂಲಕರ.
 • ಇದು ಪೊಟ್ಯಾಷಿಯಂ ಅಂಶವನ್ನು ಸಮೃದ್ಧವಾಗಿ ಹೊಂದಿರುವ ಎಳನೀರು ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂಥ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 • ಎಳನೀರಿನಲ್ಲಿರುವ ಖನಿಜಗಳು, ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳ ಕಾರಣ ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಬಹುಮಟ್ಟಿಗೆ ತಡೆಯುತ್ತದೆ.
 • ತೆಂಗಿನಕಾಯಿ ನೀರನ್ನು ಮೊಡವೆ, ಕಲೆಗಳು, ಸುಕ್ಕುಗಳು, ಸೆಲ್ಯುಲೈಟ್ ಮತ್ತು ಎಸ್ಜಿಮಾ ಜಾಗಗಳಿಗೆ ನಿರಂತರವಾಗಿ ಎರಡರಿಂದ ಮೂರು ವಾರಗಳ ಕಾಲ ರಾತ್ರಿ ಹಚ್ಚಿ ಮಲಗಿದರೆ ತ್ವಚೆ ಸ್ವಚ್ಛವಾಗುತ್ತದೆ. ಹಾಗೂ ಕಾಂತಿಯುತವಾಗುತ್ತದೆ.
  ಕೆಲವು ಸಂಶೋಧಕರು, ಎಳನೀರು ಸೈಟೋಕೈನಿನ್ ನ್ನು ಹೊಂದಿದ್ದು, ಇಳೆ ವಯಸ್ಸಿನಲ್ಲಿ ಮುಪ್ಪು ಉಂಟಾಗುವುದು, ಕ್ಯಾನ್ಸರ್ ಮತ್ತು ಥ್ರಂಬೋಟಿಕ್ ಪರಿಣಾಮಗಳನ್ನು ಪ್ರಯೋಜನಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
  ಉದಾಹರಣೆಗೆ ಸೆಲೆನಿಯಮ್ ಕಾಂಪೌಂಡ್ಸ್ ಹೊಂದಿರುವ ಎಳನೀರು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ.

 • ಹಲವಾರು ಪ್ರಾಣಿ ಅಧ್ಯಯನಗಳು, ಹೇಳುವಂತೆ ತೆಂಗಿನ ನೀರು ಕಡಿಮೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಬಹುದು ಎಂದು ಹೇಳಿವೆ. ಇತರ ಪಾನೀಯಗಳಿಗೆ ಹೋಲಿಸಿದರೆ ಎಳೆನೀರು ಅತ್ಯಂತ ಆರೋಗ್ಯಕರ ಆಯ್ಕೆ ಎನ್ನುವುದು ಅಕ್ಷರಶಃ ಸತ್ಯ.
 • ತೆಂಗಿನಕಾಯಿ ನೀರಿನಲ್ಲಿರುವ ಆಮ್ಲ ಫಾಸ್ಫೇಟ್, ಅನೇಕ ನೈಸರ್ಗಿಕ ಜೈವಿಕಕ್ರಿಯಾಶೀಲ ಕಿಣ್ವಗಳು. ಕ್ರಿಯಾವರ್ಧಕ, ಡಿಹೈಡ್ರೋಜಿನೇಸ್, ಡಯಸ್ಟೇಟ್, ಪೆರಾಕ್ಸಿಡೇಸ್, ಆರ್ ಎನ್ ಎ-ಪಾಲಿಮರೇಸ್ ಇತ್ಯಾದಿ ಪರಿಣಾಮ ಕಿಣ್ವಗಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ.
 • ಬಹಳ ಕಡಿಮೆ ಸಾಂದ್ರತೆಯ ಹೊರತಾಗಿಯೂ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿರುವುದಕ್ಕಿಂತ ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಷಿಯಂ, ಮತ್ತು ಜಿಂಕ್ ರೀತಿಯ ಖನಿಜಗಳ ಉತ್ತಮ ಸಂಯೋಜನೆ ಹೊಂದಿದೆ.
 • ಎಳನೀರು ಬಿ-ಕಾಂಪ್ಲೆಕ್ಸ್ ಜೀವಸತ್ವಗಳಾದ ನಿಯಾಸಿನ್, ಥಯಮಿನ್, ಪಿರಿಡಾಕ್ಸಿನ್ ಮೊದಲಾದವುಗಳ ಉತ್ತಮ ಮೂಲವಾಗಿದೆ. ಈ ಜೀವಸತ್ವಗಳು ಮಾನವ ದೇಹಕ್ಕೆ ಅತ್ಯಂತ ಅಗತ್ಯವಿರುವಂಥಹವು.
 • ತೆಂಗಿನಕಾಯಿ ನೀರು ಎಲೆಕ್ಟ್ರೋಲಟ್ ಪೊಟ್ಯಾಷಿಯಂನ ಉತ್ತಮ ಪ್ರಮಾಣವನ್ನು ಹೊಂದಿದೆ. ಎಳನೀರಿನ 100 ಮಿಲಿ ನೀರು 250 ಮಿಗ್ರಾಂ ಪೊಟ್ಯಾಷಿಯಂ ಮತ್ತು 105 ಮಿಗ್ರಾಂ ಸೋಡಿಯಂ ಅಂಶಗಳನ್ನು ಹೊಂದಿದೆ. ಈ ಇಲೆಕ್ಟ್ರೊಲೈಟ್ಸ್ ಅಂಶಗಳು ಅತಿಸಾರದಂಥಹ ಸಮಸ್ಯೆಯನ್ನು ತಡೆಯುತ್ತವೆ.
 • ಇದಲ್ಲದೆ, ತಾಜಾ ತೆಂಗಿನ ನೀರು ವಿಟಮಿನ್ ಸಿ (ಆಸ್ಕೋರ್ಬಿಕ್ ಆಮ್ಲ) ಯ ಒಂದು ಸಣ್ಣ ಪ್ರಮಾಣವನ್ನು ಹೊಂದಿದೆ. ಇದು 2.4 ಮಿಗ್ರಾಂ ಅಥವಾ ಶೇ 4. ಆರ್ ಡಿ ಎ ಪ್ರಮಾಣವನ್ನು ಒದಗಿಸುತ್ತದೆ.

LEAVE A REPLY

Please enter your comment!
Please enter your name here